Homeಅಂತರಾಷ್ಟ್ರೀಯಟ್ವಿಟರ್ ಮಾಲೀಕತ್ವ ಪಡೆದ ಎಲಾನ್ ಮಸ್ಕ್: ಸಿಇಓ ಪರಾಗ್ ಅಗರ್‌ವಾಲ್ ಹೊರಕ್ಕೆ

ಟ್ವಿಟರ್ ಮಾಲೀಕತ್ವ ಪಡೆದ ಎಲಾನ್ ಮಸ್ಕ್: ಸಿಇಓ ಪರಾಗ್ ಅಗರ್‌ವಾಲ್ ಹೊರಕ್ಕೆ

- Advertisement -
- Advertisement -

ವಿಶ್ವದ ನಂಬರ್ ಒನ್ ಶ್ರೀಮಂತನೆನಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ 44 ಶತಕೋಟಿ ಡಾಲರ್ ಪಾಲು ಪಡೆದ ನಂತರ ಟ್ವಿಟರ್ ಸಿಇಓ ಪರಾಗ್ ಅಗರ್‌ವಾಲ್ ಸೇರಿದಂತೆ ಇತರ ಮುಖ್ಯ ಹುದ್ದೆಗಳಲ್ಲಿದ್ದವರನ್ನು ಕೆಲಸದಿಂದ ರಿಲೀವ್ ಮಾಡಲಾಗಿದೆ ಎಂದು ವರದಿಯಾಗಿದೆ.

ಕಳೆದ ಆರು ತಿಂಗಳಿನಿಂದ ಟ್ವಿಟರ್‌ ಮೇಲಿನ ಸಂಪೂರ್ಣ ಒಡೆತನ ಪಡೆಯಲು ಪ್ರಯತ್ನಿಸುತ್ತಿದ್ದ ಎಲಾನ್ ಮಸ್ಕ್ ಕೊನೆಗೂ ಮಾಲೀಕತ್ವ ಪಡೆದಿದ್ದಾರೆ. ಇದರ ಕುರಿತು ಅಧಿಕೃತ ಹೇಳಿಕೆ ಬಿಡುಗಡೆಯಾಗದಿದ್ದರೂ ಮಸ್ಕ್ “the bird is freed (ಪಕ್ಷಿ ಸ್ವತಂತ್ರಗೊಂಡಿದೆ)” ಎಂದು ಟ್ವೀಟ್ ಮಾಡುವ ಮೂಲಕ ಸುಳಿವು ನೀಡಿದ್ದಾರೆ.

ಟ್ವಿಟರ್‌ನಿಂದ ಹೊರಬಂದವರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಾಗ್ ಅಗರವಾಲ್, ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, 2017 ರಲ್ಲಿ ಟ್ವಿಟರ್‌ಗೆ ಸೇರಿದ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು 2012 ರಿಂದ ಟ್ವಿಟರ್‌ನಲ್ಲಿ ಸಾಮಾನ್ಯ ಸಲಹೆಗಾರರಾಗಿರುವ ಸೀನ್ ಎಡ್ಜೆಟ್ ಸೇರಿದ್ದಾರೆ.

ಟ್ವಿಟರ್ ಸ್ವಾಧೀನಪಡಿಸಿಕೊಳ್ಳುವ ತನ್ನ ಪ್ರಯತ್ನಕ್ಕೆ ಪರಾಗ್ ಅಡ್ಡಲಾಗಿದ್ದರೂ ಎಂದು ಮಸ್ಕ್ ದೂರಿದ್ದರು. ನಕಲಿ ಖಾತೆಗಳ ಸಂಖ್ಯೆಯ ಕುರಿತು ಟ್ವಿಟರ್‌ನಲ್ಲಿನ ಉನ್ನತ ನಾಯಕತ್ವವು ತನ್ನನ್ನು ಮತ್ತು ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಟ್ವಿಟರ್‌ನ ಸ್ಪ್ಯಾಮ್ ಖಾತೆಗಳು ಕಂಪನಿಯ ಅಂದಾಜಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಮಸ್ಕ್ ಸಾರ್ವಜನಿಕವಾಗಿ ಆರೋಪಿಸಿದ್ದರು. ಆದರೆ ಪರಾಗ್ ಅಗರ್‌ವಾಲ್ ಸೇರಿದಂತೆ ಇತರರು ‘ಸ್ಪ್ಯಾಮ್ ಖಾತೆಗಳು ಅದರ ಹಣಗಳಿಸಬಹುದಾದ ದೈನಂದಿನ ಸಕ್ರಿಯ ಬಳಕೆದಾರರಲ್ಲಿ 5% ಕ್ಕಿಂತ ಕಡಿಮೆಯಿವೆ’ ಎಂದು ವಾದಿಸಿದ್ದರು.

ಟ್ವಿಟರ್ ಸಹ-ಸಂಸ್ಥಾಪಕ ಬಿಜ್ ಸ್ಟೋನ್ ಟ್ವೀಟ್ ಮೂಲಕ ಇಷ್ಟು ದಿನ ಟ್ವಿಟರ್‌ಗೆ ನೀಡಿದ ಕೊಡುಗೆಗಾಗಿ ಅಗರವಾಲ್, ಸೆಗಲ್ ಮತ್ತು ಗದ್ದೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇನ್ನು ಮುಂದೆ ಟ್ವಿಟರ್ ಖಾಸಗಿ ಕಂಪನಿಯಂತೆ ಕೆಲಸ ನಿರ್ವಹಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ; ’ಟ್ವಿಟರ್ ಬ್ರಾಂಡ್ ಖರೀದಿಸಿದ ಮಸ್ಕ್’ ವಿದ್ಯಮಾನ ಮತ್ತು ಆತಂಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...