Homeರಾಷ್ಟ್ರೀಯವಿವಾಹಿತ ಮಹಿಳೆ ಜೊತೆಗೆ ಮನೆಗೆಲಸ ಮಾಡುವಂತೆ ಕೇಳುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

ವಿವಾಹಿತ ಮಹಿಳೆ ಜೊತೆಗೆ ಮನೆಗೆಲಸ ಮಾಡುವಂತೆ ಕೇಳುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

- Advertisement -
- Advertisement -

ವಿವಾಹಿತ ಮಹಿಳೆಯಗೆ ಕುಟುಂಬಕ್ಕಾಗಿ ಮನೆಕೆಲಸ ಮಾಡುವಂತೆ ಕೇಳುವುದನ್ನು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಇತ್ತೀಚೆಗೆ ತೀರ್ಪು ನೀಡಿದೆ. ವಿಚ್ಛೇದಿತ ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಮಹಿಳೆಯೊಬ್ಬರು ದಾಖಲಿಸಿದ್ದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ್ ಪಾಟೀಲ್ ಅವರ ಪೀಠ ರದ್ದುಗೊಳಿಸಿದೆ.

ಮಹಿಳೆ ನೀಡಿದ ದೂರಿನಲ್ಲಿ, ಪತಿ ಸೇರಿದಂತೆ ಅತ್ತೆ-ಮಾವಂದಿರು ಮದುವೆಯಾದ ಒಂದು ತಿಂಗಳವರೆಗೆ ತನ್ನನ್ನು ಚೆನ್ನಾಗಿ ನಡೆಸಿಕೊಂಡರು, ಆದರೆ ನಂತರ ಅವರು ತನ್ನನ್ನು “ಸೇವಕಿ” ಎಂದು ಪರಿಗಣಿಸಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮದುವೆಯಾದ ಒಂದು ತಿಂಗಳ ನಂತರ ತನ್ನ ಪತಿ ಮತ್ತು ಅವನ ಪೋಷಕರು ಕಾರು ಖರೀದಿಸಲು 4 ಲಕ್ಷ ರೂ.ಗೆ ಬೇಡಿಕೆಯಿಡಲು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ. ಈ ಬೇಡಿಕೆಯ ಮೇರೆಗೆ ಪತಿಯಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಯಿತು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಸವರ್ಣೀಯ ಮಹಿಳೆಯನ್ನು ದಿಟ್ಟಿಸಿದ ಆರೋಪದ ಮೇಲೆ ಗುಂಡು ಹಾರಿಸಿ ದಲಿತ ಯುವಕನ ಕುಟುಂಬದ ಮೂವರ ಹತ್ಯೆ

ಅರ್ಜಿದಾರ ಮಹಿಳೆಯು ತನಗೆ ಕಿರುಕುಳ ನೀಡಿರುವುದಾಗಿ ಹೇಳಿದ್ದಾರೆ, ಆದರೆ ತನ್ನ ದೂರಿನಲ್ಲಿ ಅಂತಹ ಯಾವುದೇ ಕ್ರಮವನ್ನು ಸೂಚಿಸಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

“ವಿವಾಹಿತ ಹೆಂಗಸನ್ನು ಕುಟುಂಬದ ಉದ್ದೇಶಕ್ಕಾಗಿ ಮನೆಕೆಲಸ ಮಾಡಲು ಕೇಳಿದರೆ, ಅದನ್ನು ಸೇವಕಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅವರು ತನ್ನ ಮನೆಯ ಚಟುವಟಿಕೆಗಳನ್ನು ಮಾಡಲು ಬಯಸದಿದ್ದರೆ, ಅದನ್ನು ಮದುವೆಗೂ ಮೊದಲೇ ಹೇಳಬೇಕಾಗಿತ್ತು. ಹೀಗೆ ಹೇಳಿದ್ದರೆ ಮದುವೆಯ ಬಗ್ಗೆ ವರನು ಮರುಚಿಂತನೆ ಮಾಡಬಹುದಿತ್ತು ಅಥವಾ ಒಂದು ವೇಳೆ ಅದು ಮದುವೆಯ ನಂತರ ಆಗಿದ್ದರೆ, ಅಂತಹ ಸಮಸ್ಯೆಯನ್ನು ಮೊದಲೇ ಪರಿಹರಿಸಬೇಕಾಗಿತ್ತು” ಎಂದು ನ್ಯಾಯಾಲಯ ಹೇಳಿದೆ.

“ನಿರ್ದಿಷ್ಠ ಕೃತ್ಯಗಳನ್ನು ವಿವರಿಸದ ಹೊರತು, ಆ ಕೃತ್ಯಗಳು ಕಿರುಕುಳ ಆಗುತ್ತದೆಯೆ ಅಥವಾ ವ್ಯಕ್ತಿಯನ್ನು ಕ್ರೌರ್ಯಕ್ಕೆ ಒಳಪಡಿಸುತ್ತವೆಯೇ ಎಂದು ತೀರ್ಮಾನಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಆದೇಶ ಹೇಳಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆ ಪ್ರಕರಣ: ಬಿಡುಗಡೆಯಾದ ರಾಜಕಾರಣಿಗೆ ಹೂಮಳೆ ಸುರಿಸಿ ಸ್ವಾಗತ

ಪತ್ನಿ ಮಾಡಿದ ಆರೋಪಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ಅಡಿಯಲ್ಲಿ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪತಿ ಮತ್ತು ಆತನ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಅದು ಮಾನ್ಯ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...