Homeಮುಖಪುಟರಾಜ್‌ ಕುಂದ್ರಾ ವಿರುದ್ದ ಸಾಕ್ಷಿ ಹೇಳಲಿರುವ ಅವರದೇ ಕಂಪನಿಯ ಉದ್ಯೋಗಿಗಳು!

ರಾಜ್‌ ಕುಂದ್ರಾ ವಿರುದ್ದ ಸಾಕ್ಷಿ ಹೇಳಲಿರುವ ಅವರದೇ ಕಂಪನಿಯ ಉದ್ಯೋಗಿಗಳು!

- Advertisement -
- Advertisement -

ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಉದ್ಯಮಿ ರಾಜ್‌ ಕುಂದ್ರಾಗೆ ಇದೀಗ ಮತ್ತೊಂದು ಅಘಾತ ಎದುರಾಗಿದೆ. ತನ್ನ ವಿರುದ್ದ ಪ್ರಮುಖ ಸಾಕ್ಷಿಗಳಾಗಿ ತನ್ನದೆ ಕಂಪನಿಯ ನಾಲ್ಕು ಉದ್ಯೋಗಿಗಳು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ರಾಜ್‌ ಕುಂದ್ರಾರನ್ನು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಜುಲೈ 19 ರಂದು ಪೊಲೀಸರು ಬಂಧಿಸಿದ್ದರು.

ಪ್ರಕರಣದಲ್ಲಿ ಈ ನಾಲ್ಕು ನೌಕರರು ಪ್ರಮುಖ ವ್ಯಕ್ತಿಗಳಾಗಿದ್ದಾರೆ ಎಂದು ಕ್ರೈಂ ಬ್ರಾಂಚ್‌ ಮೂಲಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜ್‌ ಕುಂದ್ರಾ ಮತ್ತು ಇತರರು ತನಿಖೆಗೆ ಸರಿಯಾಗಿ ಸಹಕರಿಸದ ಕಾರಣ ಪ್ರಸ್ತುತ ಕಂಪನಿಯ ನಾಲ್ಕು ಉದ್ಯೋಗಿಗಳು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಗೆಡಹುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಚಿತ್ರ ತಯಾರಿಸಿ ಪ್ರಸಾರ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಬಂಧನ

ವ್ಯವಹಾರ ಒಪ್ಪಂದಗಳು, ಹಣಕಾಸಿನ ವ್ಯವಹಾರಗಳು, ದಂಧೆಯ ಕಾರ್ಯಚಟುವಟಿಕೆಗಳ ವಿವರಗಳನ್ನು ನಾಲ್ಕು ಉದ್ಯೋಗಿಗಳಿಂದ ಕ್ರೈಂ ಬ್ರಾಂಚ್‌ ಪಡೆಯುವ ಸಾಧ್ಯತೆಯಿದೆ. ದಂಧೆಯ ಕಾರ್ಯಚಟುವಟಿಕೆ ಮತ್ತು ಆಪಾದಿತ ಅಶ್ಲೀಲ ವಿಡಿಯೊಗಳ ಉತ್ಪಾದನೆಗಾಗಿ ಹಣವನ್ನು ಹೇಗೆ ಹರಿಸಲಾಗುತ್ತಿತ್ತು ಎಂದು ಕೂಡಾ ಕ್ರೈಂ ಬ್ರಾಂಚ್‌ ಕಂಡುಹಿಡಿಯಲಿದೆ ಎನ್ನಲಾಗಿದೆ.

ನಾಲ್ವರು ಸಾಕ್ಷಿಗಳ ಹೇಳಿಕೆಯನ್ನು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸುವ ಸಾಧ್ಯತೆಯಿದೆ. ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ ವಿಭಾಗವು ಶನಿವಾರ ಪಶ್ಚಿಮ ಅಂಧೇರಿಯಲ್ಲಿರುವ ರಾಜ್ ಕುಂದ್ರಾರ ವಯಾನ್ ಕಚೇರಿಯಲ್ಲಿ ಮತ್ತೊಂದು ಶೋಧ ಕಾರ್ಯಾಚರಣೆ ನಡೆಸಿತ್ತು.

ಇದನ್ನೂ ಓದಿ: ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಿಂದ ಪ್ರತಿದಿನ 6 ರಿಂದ 8 ಲಕ್ಷ ಗಳಿಸುತ್ತಿದ್ದರು: ಪೊಲೀಸರು

ಕಚೇರಿಯೊಳಗಿದ್ದ ಲಾಕರ್‌ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಲಾಕರ್‌ನಲ್ಲಿ ವ್ಯವಹಾರಗಳು ಮತ್ತು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಒಳಗೊಂಡಿದೆ. ಲಾಕರ್‌ನಿಂದ ವಶಪಡಿಸಿಕೊಂಡ ಎಲ್ಲಾ ದಾಖಲೆಗಳನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ ಪರಿಶೀಲಿಸುತ್ತಿದೆ.

ಈ ಹಿಂದಿನ ದಾಳಿಯ ಸಮಯದಲ್ಲೆ, ಎಲ್ಲಾ ಪ್ರಮುಖ ದಾಖಲೆಗಳನ್ನು ಹೊಂದಿರುವ ಲಾಕರ್‌ಗಾಗಿ ಕ್ರೈಂ ಬ್ರಾಂಚ್‌ ಹುಡುಕಾಟದಲ್ಲಿತ್ತು. ಆದರೆ ಅಂದು ಈ ಲಾಕರ್‌ಗಳನ್ನು ಅಡಗಿಸಿಡಲಾಗಿತ್ತು ಎನ್ನಲಾಗಿದೆ.


 

ಇದನ್ನೂ ಓದಿ: ರಾಜ್ ಕುಂದ್ರಾ ಬಂಧನ: ಶೃಂಗಾರ ಅಶ್ಲೀಲವಲ್ಲ, ನನ್ನ ಪತಿ ನಿರಪರಾಧಿ ಎಂದ ನಟಿ ಶಿಲ್ಪಾ ಶೆಟ್ಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...