Homeಮುಖಪುಟಟೋಕಿಯೊ ಒಲಂಪಿಕ್ಸ್‌ ಹಾಕಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

ಟೋಕಿಯೊ ಒಲಂಪಿಕ್ಸ್‌ ಹಾಕಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

- Advertisement -
- Advertisement -

ಟೋಕಿಯೊ ಒಲಂಪಿಕ್ಸ್‌ 2020 ಯಲ್ಲಿ ಭಾನುವಾರ ನಡೆದ ಪುರುಷರ ಹಾಕಿ ಪೋಲ್ ಎ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 1-7 ಗೋಲುಗಳಿಂದ ಸೋಲನುಭವಿಸಿದೆ. ಭಾರತದ ಪರ ದಿಲ್‌ಪ್ರೀತ್ ಸಿಂಗ್ ಒಂದು ಗೋಲ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪರ ಟಿಮ್ ಬ್ರಾಂಡ್, ಜೋಶುವಾ ಬೆಲ್ಟ್ಜ್, ಡೇನಿಯಲ್ ಜೇಮ್ಸ್ ಬೀಲ್, ಫ್ಲಿನ್ ಆಂಡ್ರ್ಯೂ ಒಗಿಲ್ವಿ, ಜೆರೆಮಿ ಥಾಮಸ್ ಹೇವರ್ಡ್ ತಲಾ ಒಂದೊಂದು ಗೋಲು ಗಳಿಸಿದ್ದಾರೆ. ಬ್ಲೇಕ್ ಗೋವರ್ಸ್ ಉತ್ತಮ ಆಟವಾಡಿದ್ದಾರೆ.

ಉಭಯ ತಂಡಗಳು ತಮ್ಮ ಆರಂಭಿಕ ಪಂದ್ಯಗಳನ್ನು ಗೆದ್ದಿದ್ದವು.  ಓಯಿ ಹಾಕಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಗೆಲುವಿಗಾಗಿ ಸೆಣೆಸಾಡಿದ್ದವು.

ಶನಿವಾರ ಹರ್ಮನ್‌ಪ್ರೀತ್ ಸಿಂಗ್‌ರವರ ಎರಡು ಮೌಲ್ಯಯುತ ಗೋಲುಗಳು ಮತ್ತು ಗೋಲ್‌ಕೀಪರ್ ಪಿ ಆರ್ ಶ್ರೀಜೇಶ್‌ರವರ ಅಮೋಘ ಆಟದ ನೆರವಿನಿಂದ ಭಾರತ ಒಲಪಿಂಕ್ಸ್‌ನ ಮೊದಲ ಪುರುಷರ ಹಾಕಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರದಿಂದ ಜಯಗಳಿಸಿತ್ತು.


ಇದನ್ನೂ ಓದಿ: ಒಲಂಪಿಕ್ಸ್ ಹಾಕಿ: ನ್ಯೂಜಿಲೆಂಡ್ ಮಣಿಸಿ ಶುಭಾರಂಭ ಮಾಡಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...