Homeಮುಖಪುಟಜನಾಕ್ರೋಶಕ್ಕೆ ಮಣಿದ ಜಾರಿ ನಿರ್ದೇಶನಾಲಯ; ದಲಿತ ರೈತರ ವಿರುದ್ಧದ ಕೇಸ್ ವಾಪಸ್!

ಜನಾಕ್ರೋಶಕ್ಕೆ ಮಣಿದ ಜಾರಿ ನಿರ್ದೇಶನಾಲಯ; ದಲಿತ ರೈತರ ವಿರುದ್ಧದ ಕೇಸ್ ವಾಪಸ್!

- Advertisement -
- Advertisement -

ತಮಿಳುನಾಡಿನ ಇಬ್ಬರು ದಲಿತ ರೈತರಿಗೆ ಸಮನ್ಸ್ ಜಾರಿ ಮಾಡಿದ ನಂತರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿರುವ ಜಾರಿ ನಿರ್ದೇಶನಾಯಲದ (ಇಡಿ) ಅಧಿಕಾರಿಗಳು, ಸಹೋದರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಜುಲೈ 5, 2023 ರಂದು 72 ವರ್ಷದ ಮತ್ತು 67 ವರ್ಷದ ದಲಿತ ಸಹೋದರರಿಗೆ ಇಡಿ ನೀಡಿದ್ದ ನೋಟಿಸ್ ವಿಚಾರ ಆರು ತಿಂಗಳ ನಂತರ ಬಬೆಳಕಿಗೆ ಬಂದಿದ್ದು, ಬಡ ರೈತರಿಗೆ ನೋಟಿಸ್ ಕೊಟ್ಟಿದ್ದ ತನಿಖಾ ಸಂಸ್ಥೆ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ರಾಜಕೀಯ ಪಕ್ಷಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಇಡಿ ಟೀಕೆಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ವಿರೋಧ ಹೆಚ್ಚಾದ ನಂತರ ಎಚ್ಚೆತ್ತಿಕೊಂಡಿರುವ ಇಡಿ, ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ?

ದಲಿತ ಸಮುದಾಯಕ್ಕೆ ಸೇರಿದ ಎಸ್ ಕನ್ನಯ್ಯನ್ ಮತ್ತು ಅವರ ಸಹೋದರ ಎಸ್ ಕೃಷ್ಣನ್ ಅವರು ತಮ್ಮ ಜಮೀನಿನ ಸುತ್ತಲೂ ಅನಧಿಕೃತ ವಿದ್ಯುತ್ ಬೇಲಿಗಳನ್ನು ಸ್ಥಾಪಿಸಿದ್ದರು, ಇದರ ಪರಿಣಾಮವಾಗಿ ಎರಡು ಕಾಡೆಮ್ಮೆಗಳು ವಿದ್ಯುತ್ ಆಘಾತಕ್ಕೆ ಕಾರಣವಾಗಿವೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 2(16), 2(36), ಮತ್ತು ಸೆಕ್ಷನ್ 51(1) ರೊಂದಿಗೆ ಸೆಕ್ಷನ್ 9 ರ ಅಡಿಯಲ್ಲಿ 2017 ರಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ, ಡಿಸೆಂಬರ್ 28, 2021 ರಂದು ವಿಚಾರಣಾ ನ್ಯಾಯಾಲಯವು ಕೃಷ್ಣನ್ ಮತ್ತು ಕನ್ನಯ್ಯನ್ ಇಬ್ಬರನ್ನೂ ಖುಲಾಸೆಗೊಳಿಸಿತು. ಈ ಪ್ರಕರಣದಲ್ಲಿ ಸಹೋದರರು ಖುಲಾಸೆಗೊಂಡ ನಂತರವೂ, ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಅರಣ್ಯ ಇಲಾಖೆಯಿಂದ ಇಡಿ ಹಳೆಯ ಎಫ್ಐಆರ್ ಪಡೆದುಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅನಾಮಧೇಯ ಪತ್ರವನ್ನು ಆಧರಿಸಿ ಮಾರ್ಚ್ 2022 ರಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇಬ್ಬರ ವಿರುದ್ದ ತನಿಖೆ ಪ್ರಾರಂಭಿಸಿತ್ತು.

ಜುಲೈ 5, 2023 ರಂದು ನೀಡಲಾದ ಆರು ತಿಂಗಳ ಹಳೆಯ ಸಮನ್ಸ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡಿದ ನಂತರ ವಿವಾದ ಭುಗಿಲೆದ್ದಿತು. ತಮಿಳುನಾಡಿನ ರಾಜಕೀಯ ಪಕ್ಷಗಳು ಮತ್ತು ಕಾರ್ಯಕರ್ತರು ಸಮನ್ಸ್ ಮತ್ತು ಎಫ್ಐಆರ್‌ಗೆ ಸಮಾನವಾದ ಇಸಿಐಆರ್ (ಜಾರಿ ಪ್ರಕರಣದ ಮಾಹಿತಿ ವರದಿ) ಎರಡರಲ್ಲೂ ಇಬ್ಬರು ರೈತರ ಜಾತಿಯನ್ನು ಉಲ್ಲೇಖಿಸಿರುವ ಇಡಿ, ಅಪರಾಧ ಮಾಡಿದೆ ಎಂದು ಆಕ್ರೋಶ ಹೊರಹಾಕಿ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಇಡಿ ಕ್ರಮಗಳು ಸ್ಥಳೀಯ ಬಿಜೆಪಿ ನಾಯಕ ಜಿ. ಗುಣಶೇಖರ್ ಅವರೊಂದಿಗೆ ರೈತ ಸಹೋದರರು ನಡೆಸುತ್ತಿರುವ ಪ್ರತ್ಯೇಕ ಕಾನೂನು ಹೋರಾಟದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ರೈತರ ಪರ ವಕೀಲ ಜಿ ಪ್ರವೀಣಾ ಹೇಳಿದ್ದಾರೆ. ಅತ್ತೂರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಗುಣಶೇಖರ್ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಜಮೀನು ಕಬಳಿಸಲು ರೈತರನ್ನು ಬೆದರಿಸುವ ತಂತ್ರವಾಗಿ ದೂರು ನೀಡಲಾಗಿದೆ ಎನ್ನಲಾಗಿದೆ.

ವಕೀಲ ಪ್ರವೀಣಾ ಅವರು ಇಡಿ ಉದ್ದೇಶಗಳನ್ನು ಪ್ರಶ್ನಿಸಿದ್ದಲ್ಲದೆ, ಇಡಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕರೆ ನೀಡಿದರು. ಪ್ರಕರಣವನ್ನು ತನಿಖಾ ಸಂಸ್ಥೆಯ ನಿರ್ವಹಿಸುತ್ತಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

‘ತಮಿಳುನಾಡು ಪೊಲೀಸರು ಇಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ನಾವು ಬಯಸುತ್ತೇವೆ. ನಾವು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಅವರು ಹೇಳಿದರು.

‘ತನಿಖೆಯನ್ನು ಆರಂಭಿಸಿದ ಪೂರ್ವಾಪರ ಅಪರಾಧವನ್ನು ಪೂರ್ಣಗೊಳಿಸಿದ ಮೇಲೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ’ ಎಂದು ಇಡಿ ಸ್ಪಷ್ಟಪಡಿಸಿದೆ.

ಪಿಎಂಎಲ್ಎ ಪ್ರಕರಣಗಳಲ್ಲಿ ಅನುಸರಿಸಲಾದ “ನಿಯಮಿತ ಕಾರ್ಯವಿಧಾನ” ವಾಗಿ ಕನ್ನಯ್ಯನ್ ಮತ್ತು ಮತ್ತು ಕೃಷ್ಣನ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಅಧಿಕಾರಿಯೊಬ್ಬರು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. ‘ಅವರನ್ನು (ರೈತರನ್ನು) ಆ ದಿನ ನಾವು ವಿಚಾರಣೆ ನಡೆಸಿಲ್ಲ. ಬದಲಿಗೆ ಜುಲೈ 5 ರಂದು ರೈತರೊಂದಿಗೆ ಹಾಜರಾದ ವಕೀಲರು ಚೆನ್ನೈನ ಇಡಿ ಕಚೇರಿಯಲ್ಲಿ ಗದ್ದಲವನ್ನು ಸೃಷ್ಟಿಸಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ; ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ಕಂಬಿ ಹಿಂದೆ ತಳ್ಳುವುದು ಬಿಜೆಪಿ ಉದ್ದೇಶ: ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...