Homeಮುಖಪುಟಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ಕಂಬಿ ಹಿಂದೆ ತಳ್ಳುವುದು ಬಿಜೆಪಿ ಉದ್ದೇಶ: ಕೇಜ್ರಿವಾಲ್

ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ಕಂಬಿ ಹಿಂದೆ ತಳ್ಳುವುದು ಬಿಜೆಪಿ ಉದ್ದೇಶ: ಕೇಜ್ರಿವಾಲ್

- Advertisement -
- Advertisement -

ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ಕಂಬಿ ಹಿಂದೆ ತಳ್ಳುವುದು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉದ್ದೇಶ. ಈ ಮೂಲಕ ಚುನಾವಣಾ ಪ್ರಚಾರದಿಂದ ತಡೆಯಬಹುದು ಎಂಬುವುದು ಅವರ ತಂತ್ರ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಬಂಧಿಸುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ನಾಯಕರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇಂದು ಮಧ್ಯಾಹ್ನ ತನ್ನ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಎರಡು ವರ್ಷಗಳಿಂದ ಇಡಿ ತನಿಖೆ ನಡೆಸುತ್ತಿದ್ದರೂ, ನನ್ನ ಬಳಿ ಒಂದು ಪೈಸೆಯ ಅವ್ಯಹಾರ ಪತ್ತೆ ಮಾಡಲು ಅವರಿಂದ ಆಗಿಲ್ಲ ಎಂದಿದ್ದಾರೆ.

“ಕಳೆದ ಎರಡು ವರ್ಷಗಳಿಂದ ಈ ತನಿಖೆ ನಡೆಯುತ್ತಿದೆ. ಆದರೆ ಒಂದು ಪೈಸೆಯ ಅವ್ಯವಹಾರ ಕಂಡುಬಂದಿಲ್ಲ. ಯಾರ ವಿರುದ್ಧವೂ ಅವರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಯಾವುದೂ ಸಾಬೀತಾಗಿಲ್ಲ. ಈಗ ಬಿಜೆಪಿಯವರು ನನ್ನನ್ನು ಬಂಧಿಸಲು ಬಯಸುತ್ತಿದ್ದಾರೆ. ನನ್ನ ದೊಡ್ಡ ಶಕ್ತಿ ನನ್ನ ಪ್ರಾಮಾಣಿಕತೆ. ಸುಳ್ಳು ಪ್ರಕರಣಗಳು ಮತ್ತು ನಕಲಿ ಸಮನ್ಸ್‌ಗಳ ಮೂಲಕ ಅವರು ನನ್ನ ಇಮೇಜ್‌ಗೆ ಧಕ್ಕೆ ತರಲು ಬಯಸುತ್ತಿದ್ದಾರೆ. ಬಿಜೆಪಿಯ ಉದ್ದೇಶ ತನಿಖೆ ನಡೆಸುವುದಲ್ಲ, ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಮಾಡದಂತೆ ತಡೆಯುವುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ

ಇಡಿ ನೀಡುತ್ತಿರುವ ಸಮನ್ಸ್‌ಗಳೆಲ್ಲವೂ ನಕಲಿ ಮತ್ತು ಅಕ್ರಮ ಎಂದು ನನ್ನ ವಕೀಲರು ಹೇಳಿದ್ದಾರೆ. ನಾನು ಎಲ್ಲೂ ತಪ್ಪಿಸಿಕೊಂಡಿಲ್ಲ. ಹಾಗಾಗಿ, ಅವರು ಸಮನ್ಸ್ ನೀಡುವ ಅಗತ್ಯ ಬರುವುದಿಲ್ಲ. ನನಗೆ ಯಾಕೆ ಸಮನ್ಸ್ ನೀಡಬಾರದು ಎಂದು ನಾನು ಇಡಿಗೆ ಪತ್ರ ಬರೆದು ವಿವರಿಸಿದ್ದೇನೆ. ಆದರೆ, ಇಡಿ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಇದರರ್ಥ ಅವರ ಬಳಿ ಯಾವುದೇ ಉತ್ತರ ಇಲ್ಲ ಎಂದಲ್ಲವೇ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣ ಆರೋಪ ಸಂಬಂಧ ಇಡಿ ತನಿಖೆ ಆರಂಭಿಸಿ ಎರಡು ವರ್ಷಗಳಾಗಿವೆ. ಇದುವರೆಗೆ ಇಲ್ಲದ ಸಮನ್ಸ್ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಯಾಕೆ ಬರ್ತಿದೆ? ಎಂದು ಕ್ರೇಜಿವಾಲ್ ಪ್ರಶ್ನಿಸಿದ್ದಾರೆ.

ಎಂಟು ತಿಂಗಳ ಹಿಂದೆ ಸಿಬಿಐ (ಕೇಂದ್ರ ತನಿಖಾ ದಳ) ನನಗೆ ಸಮನ್ಸ್ ನೀಡಿತ್ತು. ನಾನು ಖುದ್ದಾಗಿ ಹಾಜರಾಗಿ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಈಗ ಲೋಕಸಭೆ ಚುನಾವಣೆಗೆ ಎರಡು ತಿಂಗಳಿರುವಾಗ ಇಡಿ ನನಗೆ ಸಮನ್ಸ್ ನೀಡುತ್ತಿದೆ. ಬಿಜೆಪಿಯ ಉದ್ದೇಶ ನನ್ನನ್ನು ಪ್ರಶ್ನಿಸುವುದಲ್ಲ, ನನ್ನನ್ನು ಬಂಧಿಸುವುದು ಎಂದು ಕೇಜ್ರಿವಾಲ್ ಪುನರುಚ್ಚರಿಸಿದ್ದಾರೆ.

ಅಬಕಾರಿ ನೀತಿ ಹಗರಣ ಸಂಬಂಧ ನಡೆಯುವ ಎಲ್ಲಾ ತನಿಖೆಗಳಿಗೆ ನಾನು ಸಹಕರಿಸುತ್ತೇನೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ನಿನ್ನೆ(3) ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ ಅವರಿಗೆ ಇಡಿ ಮೂರನೇ ಸಮನ್ಸ್ ನೀಡಿದ್ದಾರೆ. ಅದನ್ನೂ ಅವರು ತಿರಸ್ಕರಿಸಿದ್ದಾರೆ.

ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ ಅಬಕಾರಿ ನೀತಿಯನ್ನು ರೂಪಿಸಲು ಕೇಜ್ರಿವಾಲ್ ನೇತೃತ್ವದ ಎಎಪಿ ₹100 ಕೋಟಿ ಕಿಕ್‌ಬ್ಯಾಕ್ ಪಡೆದಿದೆ ಮತ್ತು ಇದರ ಭಾಗವನ್ನು ಗೋವಾ ಚುನಾವಣಾ ಪ್ರಚಾರದಲ್ಲಿ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ.

ಇದನ್ನೂ ಓದಿ: ಇಡಿಯಿಂದ ಕೇಜ್ರಿವಾಲ್ ಬಂಧನ ಸಾಧ್ಯತೆ: ಆತಂಕ ವ್ಯಕ್ತಪಡಿಸಿದ ಎಎಪಿ ನಾಯಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...