Homeನ್ಯಾಯ ಪಥಸಿನಿಸುದ್ದಿ: ಯಾರು ಈ ಲೇಡಿ ಬ್ರೂಸ್ಲಿ?

ಸಿನಿಸುದ್ದಿ: ಯಾರು ಈ ಲೇಡಿ ಬ್ರೂಸ್ಲಿ?

- Advertisement -
- Advertisement -

ನವೆಂಬರ್ ಅಂತ್ಯದ ವಾರದಲ್ಲಿ ಇಡೀ ಭಾರತೀಯ ಚಿತ್ರರಂಗವನ್ನೇ ದಂಗಾಗಿಸಿ ಸಂಚಲನ ಮೂಡಿಸಿದ ಟೀಸರ್ ‘ಎಂಟರ್ ದಿ ಗರ್ಲ್ ಡ್ರಾಗನ್’ ಸಿನಿಮಾದ್ದು. ಅದರಲ್ಲೂ ಮಾಲಾಶ್ರೀಯವರನ್ನು ಮಾತ್ರ ಆಕ್ಷನ್ ಕ್ವೀನ್ ಆಗಿ ಕಂಡಿದ್ದ ಕನ್ನಡ ಸಿನಿ ಪ್ರೇಕ್ಷಕರಿಗಂತೂ ಕಣ್ ಕಣ್ ಬಿಡುವಷ್ಟು ಬೆರಗುಗೊಳಿಸಿದೆ.

ಕಾಂಟ್ರವರ್ಸಿ ನಿರ್ದೇಶಕನೆಂದೇ ಖ್ಯಾತಿ ಪಡೆದಿರುವ ರಾಜ್‍ಗೋಪಾಲ್‍ವರ್ಮ ನಿರ್ದೇಶಿಸಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೊದಲ ಮಾರ್ಷಲ್ ಆರ್ಟ್ ಸಿನಿಮಾ ಎಂದೇ ಖ್ಯಾತಿ ಪಡೆದುಕೊಂಡಿದೆ. ‘ನಿನ್ನನ್ನ ತಡೆಯೋ ಏಕೈಕ ಮನುಷ್ಯ ಅಂದ್ರೆ ಅದು ನೀನೇ’ ಎನ್ನುವ ಬ್ರೂಸ್ಲಿಯ ಸ್ಫೂರ್ತಿಯುತ ಡೈಲಾಗ್‍ನೊಂದಿಗೆ ಎಂಟ್ರಿ ಕೊಡುವ ಹಿರೋಯಿನ್ ಲೇಡಿ ಬ್ರೂಸ್ಲಿ ಪೂಜಾ ಭಾಲೇಕರ್.

ಪೂಜಾರ ಚೊಚ್ಚಲ ಸಿನಿಮಾ ಇದಾಗಿದ್ದರೂ, ಮೊದಲ ಸಿನಿಮಾದಲ್ಲೇ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಪೂಜಾ ಮೂಲತಃ ಮುಂಬೈನವರಾಗಿದ್ದು, ಅಲ್ಲಿಯೇ ಮಾರ್ಷಲ್ ಆರ್ಟ್ ಪ್ರಾಕ್ಟೀಸ್ ಕೂಡ ಮಾಡಿದ್ದಾರೆ. ಛಲವಂತ ಹೆಣ್ಣಿನ ಹಾದಿಯ ಮಾರ್ಷಲ್ ಆಟ್ರ್ಸ್, ಫಿಟ್ನೆಸ್, ಛಲ, ಪರ್ಸನಲ್ ಲೈಫ್, ಪ್ರೊಫೆಶನಲ್ ಲೈಫ್‍ಗಳೊಂದಿಗೆ ಈ ಸಿನಿಮಾವನ್ನು ಹೆಣೆಯಲಾಗಿದೆ.

ನೀನು ಏನು ಯೋಚನೆ ಮಾಡ್ತಿಯೋ ಅದೇ ನೀನಾಗ್ತಿಯ ಅನ್ನೋ ಮಾತಿನೊಂದಿಗೆ ಹೆಣ್ಣು ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸೂಚಿಸಿರುವ ಟ್ರೈಲರ್ ಬ್ರೂಸ್ಲಿಯ 80ನೇ ಹುಟ್ಟಿದ ದಿನದಂದು ರಿಲೀಸ್ ಆಗಿದೆ. ಇನ್ನು ಚಿತ್ರ ಡಿಸೆಂಬರ್ 13ರಂದು ತೆರೆಕಾಣಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...