Homeಎಕಾನಮಿಜಿಡಿಪಿ 5 ಟ್ರಿಲಿಯನ್ ಆಗಲು ಇನ್ನು 22 ವರ್ಷಗಳು ಬೇಕು: ಮಾಜಿ RBI ಗವರ್ನರ್‌ ಸಿ.ರಂಗರಾಜನ್

ಜಿಡಿಪಿ 5 ಟ್ರಿಲಿಯನ್ ಆಗಲು ಇನ್ನು 22 ವರ್ಷಗಳು ಬೇಕು: ಮಾಜಿ RBI ಗವರ್ನರ್‌ ಸಿ.ರಂಗರಾಜನ್

- Advertisement -
- Advertisement -

ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟ ಸ್ಥಿತಿಯಲ್ಲಿದೆ. ಹೀಗಾಗಿ 2025ಕ್ಕೆ 5 ಟ್ರಿಲಿಯನ್ ಗುರಿ ಸಾಧಿಸುತ್ತೇವೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕ ಬೆಳವಣಿಗೆಯ ಗುರಿ ಹೊಂದಿದೆ. ಆದರೆ ದೇಶದ ಆರ್ಥಿಕತೆಯ ಮೇಲೆ ಕಾರ್ಮೋಡಗಳು ಕವಿದಿದ್ದು ಗುರಿ ನಿರ್ವಹಣೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಆರ್ಥಿಕತೆಯ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಬೆಳವಣಿಗೆಯ ದರ ಕುಸಿದಿದೆ. 2016ರಲ್ಲಿ 8.2ರಷ್ಟಿದ್ದುದು 2019 ಭೌತಿಕ ವರ್ಷಕ್ಕೆ 6.8ಕ್ಕೆ ಕುಸಿದು ನಿಂತಿದೆ. ಈ ನಡುವೆ ಮೊದಲ ಕ್ವಾರ್ಟರ್ ನಲ್ಲಿ ಜಿಡಿಪಿ 5ಕ್ಕೆ ಕುಸಿದು ಆರು ವರ್ಷ ಹಿಂದಕ್ಕೆ ಹೋಗಿದೆ. ಎರಡನೇ ಕ್ವಾರ್ಟರ್ ನಲ್ಲಿ ಅಂದರೆ ಈಗ ಅದು 4.3ರಷ್ಟಿದೆ. ಆರ್.ಬಿ.ಐ ಅಕ್ಟೋಬರ್ ನಲ್ಲಿ ನೀತಿ ಪರಿಷ್ಕರಣೆ ಮಾಡಿದ ಬಳಿಕ ಎರಡು ತಿಂಗಳಲ್ಲಿ 90ಬಿಪಿಎಸ್ ಪಾಯಿಂಟ್ ಗೆ ಏರಿ 6.1ಕ್ಕೆ ನಿಂತಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಟ್ರಿಲಿಯನ್‌ಗೆ ಎಷ್ಟು ಸೊನ್ನೆ ಎಂದು ಕೇಳಿ ಗಮನಸೆಳೆದಿದ್ದ ಗೌರವ್‌ ವಲ್ಲಭ್‌ ಈಗ ಜಾರ್ಖಂಡ್‌ ಸಿಎಂ ಎದುರು ಕಣಕ್ಕೆ…

ಪ್ರಸ್ತುತ ನಮ್ಮ ಆರ್ಥಿಕತೆ 2.7 ಮಿಲಿಯನ್ ಮೇಲಿದೆ ಮತ್ತು ನಾವು ಇದನ್ನು ಮುಂದಿನ ಐದು ವರ್ಷದಲ್ಲಿ ದ್ವಿಗುಣಗೊಳಿಸುವ ಮಾತನಾಡುತ್ತಿದ್ದೇವೆ. 2025ರ ವೇಳೆಗೆ ನಾವು ಆ ಗುರಿ ಮುಟ್ಟಲು ವಾರ್ಷಿಕ 9ರಷ್ಟು ಹೆಚ್ಚುವರಿ ಗುರಿ ತಲುಪಬೇಕು. ಹೀಗಾಗಿ 5 ಟ್ರಿಲಿಯನ್ ಗುರಿ ಸಾಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

ನೀವು (ಸರ್ಕಾರ) ಇನ್ನು ಎರಡು ವರ್ಷಗಳನ್ನು ಮಾತ್ರ ಹೊಂದಿದ್ದೀರಿ. ಈ ವರ್ಷ ಜಿಡಿಪಿ 6ರರೊಳಗೆ ಇದೆ. ಮುಂದಿನ ವರ್ಷ ಅದು 7ರ ಗುರಿ ಮುಟ್ಟಬಹುದು. ಆನಂತರ ಆರ್ಥಿಕತೆ ವೃದ್ದಿಯಾಗಬಹುದು ಎಂದು ಅಹಮದಾಬಾದ್ ನಲ್ಲಿ ಜೆಬಿಎಸ್-ಐಸಿಎಫ್ಐ ಬ್ಯುಸಿನೆಸ್ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಜಿಡಿಪಿ 5 ಟ್ರಿಲಿಯನ್ ಆದರೆ ಕೆಳಮಧ್ಯಮ ವರ್ಗದ ಪ್ರತಿಯೊಬ್ಬರ ಈಗಿನ ತಲಾ ಆದಾಯ 1800 ಡಾಲರ್ ನಿಂದ 3600 ಡಾಲರ್ ಆಗಬಹುದು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿಯೊಬ್ಬರ ತಲಾ ಆದಾಯ 12,000 ಡಾಲರ್ ಇದೆ.  ಈ ಗುರಿ ಮುಟ್ಟಲು ನಮಗೆ 22 ವರ್ಷಗಳು ಬೇಕಾಗುತ್ತದೆ. ಅಷ್ಟೇ ಅಲ್ಲ ಜಿಡಿಪಿ ದರ ವಾರ್ಷಿಕ 9ರಷ್ಟು ಬೆಳವಣಿಯಾಗಬೇಕಾಗುತ್ತದೆ ಎಂದು ಹೇಳುವ ಮೂಲಕ ಮೋದಿ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಗುರಿ ಸಾಧಿಸಲು ಆಗುವುದಿಲ್ಲ ಎಂಬುದನ್ನು ಅಂಕಿಅಂಶಗಳ ಮೂಲಕ ದೃಢಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...