Homeಚಳವಳಿಭಾಷೆಗೆ ಧರ್ಮದ ಹಂಗಿಲ್ಲ: ಫಿರೋಜ್‌ ಖಾನ್‌ ಪ್ರಕರಣದಲ್ಲಿ ನೆಟ್ಟಿಗರ ಅಭಿಪ್ರಾಯಗಳು....

ಭಾಷೆಗೆ ಧರ್ಮದ ಹಂಗಿಲ್ಲ: ಫಿರೋಜ್‌ ಖಾನ್‌ ಪ್ರಕರಣದಲ್ಲಿ ನೆಟ್ಟಿಗರ ಅಭಿಪ್ರಾಯಗಳು….

- Advertisement -
- Advertisement -

ಮೊದಲನೆಯ ಫೋಟೋದಲ್ಲಿರುವವರ ಹೆಸರು ಗೋಪಾಲಿಕ ಅಂತರ್ಜನಂ..ಸಂಪ್ರದಾಯವಾದಿ ನಂಬೂದಿರಿ ಬ್ರಾಹ್ಮಣ ಕುಟುಂಬದ ಮಗಳು.
ಕಳೆದ 29 ವರ್ಷದಿಂದ ಮಲಪ್ಪುರಂ ಜಿಲ್ಲೆಯ ಸರಕಾರೀ ಶಾಲೆಯೊಂದರಲ್ಲಿ ಅರೇಬಿಕ್ ಶಿಕ್ಷಕಿ..
ಅನ್ಯಮತೀಯ ಅದ್ಯಾಪಕಿಗೆ ಮೊದಲು ಕರ್ಮಠರಿಂದ ವಿರೋಧ ವ್ಯಕ್ತವಾದರೂ ನಂತರ ಊರವರ , ವಿದ್ಯಾರ್ಥಿಗಳ ಹೆಮ್ಮೆಗೆ ಪಾತ್ರವಾದ ಈ ಅಧ್ಯಾಪಕಿಯನ್ನು ವಿಶ್ವ ಅರೇಬಿಕ್ ದಿನದಂದು ಮಲಪ್ಪುರಂ ಜಿಲ್ಲೆಯ ಸಮಸ್ತ ಮುಸ್ಲಿಂ ಸಂಘಟನೆಗಳು ಆದರಿಸಿ ಸನ್ಮಾನಿಸಿತ್ತು..

ಎರಡನೆಯ ಚಿತ್ರದಲ್ಲಿರುವವರು ಡಾ. ಫಿರೋಜ್ ಖಾನ್.
ತಾತ ಪ್ರಸಿದ್ಧ ಭಜನೆಕಾರ ಗಫೂರ್ ಖಾನರಿಂದ ತೊಡಗಿ ಸ್ವಯಂ ಸಂಸ್ಕೃತ ಅಭ್ಯಸಿಸಿದ್ದ ತಂದೆ ರಂಜಾನ್ ಖಾನ್ ರವರೆಗೆ ಸಂಸ್ಕೃತದ ಸೆಳೆತ ರಕ್ತದಲ್ಲೇ ಇದ್ದ ವಿದ್ಯಾರ್ಥಿ.

ಸಂಸ್ಕೃತ ಅಧ್ಯಯನದಲ್ಲಿ ಶಾಸ್ತ್ರಿ, ಶಿಕ್ಷಾ ಶಾಸ್ತ್ರಿ, ಆಚಾರ್ಯ ಅಧ್ಯಯನ ಮುಗಿಸಿ ಜೈಪುರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಪಿಹೆಚ್ ಡಿ ಪದವಿ ಪಡೆದ ಪ್ರತಿಭಾವಂತ.
ತನ್ನ ಅರ್ಹತೆಯ ಮೇರೆಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರೊಫೆಸರ್ ಆಗಿ ಆಯ್ಕೆಯಾದ ಫಿರೋಜ್ ಮುಸಲ್ಮಾನ ಎನ್ನುವ ಒಂದೇ ಕಾರಣಕ್ಕಾಗಿ ಅಲ್ಲಿಯ “ದೇಶಪ್ರೇಮಿ” ವಿದ್ಯಾರ್ಥಿಗಳ ವಿರೋಧದಿಂದಾಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡುವಂತಾಯಿತು…
ಮೊದಲನೆಯವರಿಗೆ ಸಮಾಜ, ಸಮುದಾಯ ಎರಡೂ ಸ್ವಾಗತಿಸಿ ಗೌರವಿಸಿದರೆ ಎರಡನೆಯವರು ಮೋದಿಜಿಯ ಸ್ವಂತ ಕ್ಷೇತ್ರದಲ್ಲೇ ಯಾರ ಸಹಕಾರವೂ ದೊರೆಯದೆ ತನ್ನ ಧರ್ಮದ ಕಾರಣದಿಂದ ಸೋಲೊಪ್ಪಿಕೊಂಡರು…

ವ್ಯತ್ಯಾಸ ಇಷ್ಟೇ.. ಮೊದಲನೆಯದು ನಡೆದದ್ದು ಕೇರಳದಲ್ಲಿ .. ಎರಡನೆಯದು ಯೋಗಿಯ ರಾಮರಾಜ್ಯದಲ್ಲಿ… ಎಂದು ಕಿಶನ್‌ ಕುಮಾರ್‌ ಹೆಗಡೆಯವರು ಪ್ರಸ್ತುತ ವಿದ್ಯಾಮಾನಕ್ಕೆ ಮೌಲಿಕ ಬೆಳಕು ಚೆಲ್ಲಿದ್ದಾರೆ.

ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಇನ್ನು “ಆಚಂಗಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ವನ್ನು ಮಡಿಬಟ್ಟೆಯಲ್ಲಿ ಸುತ್ತಿಟ್ಟಿದ್ದರೆ. ನಮಗೆ ಎಸ್.ಕೆ. ಕರೀಂಖಾನರಂತ ಮೇರು ವ್ಯಕ್ತಿಗಳು ದೊರೆಯುತ್ತಿರಲಿಲ್ಲ”

ತಾನು ಗಳಿಸಿದ ಜ್ಞಾನವನ್ಬು ಇತರರಿಗೆ ಹಂಚಲೇಬೇಕೆಂದು ಈ ನೆಲದಲ್ಲಿ ಕಾನೂನಿಲ್ಲ. ಆದರೆ ಅದು ಆಶಯ. ಸಂವಿಧಾನದ ಆಶಯ ಕೂಡಾ. ನಾರಾಯಣ ಶಾಸ್ತ್ರಿಯವರು ಕರೀಂಖಾನರಿಗೆ ಸಂಸ್ಕೃತ ಕಲಿಸಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ಇನ್ನೂ ಸಂವಿಧಾನ ರಚನೆಯೂ ಆಗಿರಲಿಲ್ಲ.

ನಾರಾಯಣ ಶಾಸ್ತ್ರಿಗಳ ನಡೆ ನಮ್ಮ ಪರಂಪರೆಯಾಗಬೇಕಿತ್ತು. ದುರಾದೃಷ್ಡವೆಂದರೆ ಅವರ ಮುಂದುವರಿಕೆಯಾಗಬೇಕಾದವರು ಮುಸ್ಲಿಮನಿಂದ ಸಂಸ್ಕೃತ ಕಲಿಯಲಾರೆವೆಂದು ಹೋಮ ಹವನ ಮಾಡುತ್ತ ಕುಳಿತಿದ್ದಾರೆ ” ಎಂದು ಪ್ರಸಾದ್ ರಕ್ಷಿದಿಯವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಂಸ್ಕೃತ ಕಲಿಸಲು ಮುಸ್ಲಿಂ ಪ್ರಾಧ್ಯಾಪಕರನ್ನು ನೇಮಿಸಿಕೊಂಡ ಬಂಗಾಳದ ರಾಮಕೃಷ್ಣ ಮಿಷನ್ ವಿದ್ಯಾಮಂದಿರ..

ಸಂಸ್ಕೃತದಿಂದ ಸಂಸ್ಕೃತಿ ಎಂಬ ಮಾತು ಅರ್ಥಹೀನ ಎಂಬುದಕ್ಕೆ ಬನಾರಸ್ ವಿಶ್ವವಿದ್ಯಾಲಯದ
ಈ ಅಸಂಸ್ಕೃತ ವಿದ್ಯಾರ್ಥಿಗಳೇ ಸಾಕ್ಷಿ. ಉರ್ದು ಜ್ಞಾನಪೀಠ ಪ್ರಶಸ್ತಿ‌ ಪುರಸ್ಕೃತರು
ಪ್ರೊ ಗೋಪಿಚಂದ್ ನಾರಂಗ್. ಭಾಷೆಗೂ ಮತಧರ್ಮಕ್ಕೂ ಸಂಬಂಧವಿಲ್ಲ. ವಿಶ್ವವಿದ್ಯಾನಿಲಯಗಳ ಜೊತೆ ಮತಧರ್ಮಗಳ ಹೆಸರುಗಳನ್ನು ಮೊದಲು ಕಿತ್ತೊಗೆಯಬೇಕು. ಅವು ಮತಧರ್ಮ ನಿರಪೇಕ್ಷತೆಗೆ ಸಲ್ಲುವುದಿಲ್ಲ. ಬನಾರಸ್ ಸಂಸ್ಕೃತ ವಿದ್ಯಾರ್ಥಿಗಳ ವರ್ತನೆ ಜಗತ್ತಿನ ಎದುರು ಭಾರತ ತಲೆತಗ್ಗಿಸುವಂತೆ ಮಾಡಿದೆ ಎಂದು ಪಂಡಿತಾರಾಧ್ಯ ಮೈಸೂರುರವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...