HomeದಿಟನಾಗರFact Check: ರಾಹುಲ್ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆಂದು ಎಡಿಟೆಡ್ ವಿಡಿಯೋ ಹಂಚಿಕೆ

Fact Check: ರಾಹುಲ್ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆಂದು ಎಡಿಟೆಡ್ ವಿಡಿಯೋ ಹಂಚಿಕೆ

- Advertisement -
- Advertisement -

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ 50 ಮತ್ತು 15 ನ್ನು ಕೂಡಿಸಿದರೆ 73 ಆಗುತ್ತದೆ ಎಂದು
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ವಿಡಿಯೋ ಹಂಚಿಕೊಂಡಿದ್ದು, ರಾಹುಲ್‌ ಗಾಂಧಿಯವರು ದೊಡ್ಡ ನಾಯಕ ಎಂದು ಹೇಳಲಾಗುತ್ತದೆ. ಆದರೆ, ಅವರು ದಡ್ಡ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾರೆ.

ಫ್ಯಾಕ್ಟ್‌ಚೆಕ್‌ : ಈ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನವನ್ನು ನಾನುಗೌರಿ.ಕಾಂ ಮಾಡಿದೆ. ಇದಕ್ಕಾಗಿ ನಾವು ರಾಹುಲ್ ಗಾಂಧಿಯವರ ಇತ್ತೀಚಿನ ಭಾಷಣಗಳ ವಿಡಿಯೋ ಹುಡುಕಿದ್ದೇವೆ. ಈ ವೇಳೆ ನಮಗೆ, ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ಯ ಸಂದರ್ಭದ ವಿಡಿಯೋವೊಂದು ಲಭ್ಯವಾಗಿದೆ. ಯೂಟ್ಯೂಬ್‌ನಲ್ಲಿ ಇರುವ ರಾಹುಲ್ ಗಾಂಧಿಯವರ ಭಾಷಣದ ವಿಡಿಯೋದಲ್ಲಿ ಅವರು ತಪ್ಪು ಲೆಕ್ಕ ಹೇಳಿರುವುದು ಕಂಡು ಬಂದಿಲ್ಲ. ಹಾಗಾಗಿ, ಇದು ಎಡಿಟೆಡ್ ವಿಡಿಯೋ ಎಂಬುವುದು ಖಚಿತವಾಗಿದೆ.

ವಿಡಿಯೋದ ಯೂಟ್ಯೂಬ್ ಲಿಂಕ್ ಇಲ್ಲಿದೆ 

ಫೆ.8ರಂದು ಭಾರತ್ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ಒಡಿಶಾದಲ್ಲಿ ಬುಡಕಟ್ಟು ಜನರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಮತ್ತು ಮೀಸಲಾತಿ ಪಾಲನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರು 50, 15 ಮತ್ತು 8 ಒಟ್ಟಾರೆಯಾಗಿ 73% ಆಗುತ್ತದೆ ಎಂದು ಹೇಳಿದ್ದಾರೆ. ಅಂದರೆ, ಇಲ್ಲಿ ರಾಹುಲ್‌ ಗಾಂಧಿ ಅವರು ಶೇಕಡಾವಾರು ಲೆಕ್ಕವನ್ನು ಹೇಳಿದ್ದಾರೆಯೇ ಹೊರತು, ಅಂಕಿ ಅಂಶಗಳನ್ನು ಕೂಡಿಸಿ ಹೇಳಿದ್ಧಲ್ಲ ಎಂಬುವುದು ಖಚಿತ.

ರಾಹುಲ್ ಗಾಂಧಿಯವರ ಭಾಷಣವನ್ನು ಕಾಂಗ್ರೆಸ್ ಫೆ.8ರಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅದು ಹೀಗಿದೆ.. “ಪತ್ರಕರ್ತರೊಬ್ಬರು ನನ್ನನ್ನು ಕೇಳಿದರು, ರಾಹುಲ್ ಜೀ ನೀವು ಜಾತಿ ಗಣತಿ ಮತ್ತು ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೀರಿ. ಇದು ದೇಶವನ್ನು ವಿಭಜಿಸುತ್ತಿಲ್ಲವೇ?. ನಾನು ಅವರಿಗೆ ಪ್ರತಿಕ್ರಿಯೆಯಾಗಿ ಕೇಳಿದೆ, ಮಾಧ್ಯಮದ ಕ್ಷೇತ್ರದಲ್ಲಿ ಹಿಂದುಳಿದ, ದಲಿತ, ಬುಡಕಟ್ಟು ವರ್ಗದ ಎಷ್ಟು ಜನರು ಮಾಲೀಕರಾಗಿದ್ದಾರೆ? ಎಂದು. ಅವರು ಮೌನವಾದರು. ದೇಶದಲ್ಲಿ ಸುಮಾರು 50 ಶೇ. ಒಬಿಸಿಗಳು, 15 ಶೇ. ದಲಿತರು ಮತ್ತು 8 ಶೇ. ಆದಿವಾಸಿಗಳು ಇದ್ದಾರೆ, ಇದು ಒಟ್ಟು 73 ಶೇ. ಆಗಿದೆ. ಅಂದರೆ ಶೇ.73 ರಷ್ಟು ಜನರಿಗೆ ಏನೂ ಸಿಗುತ್ತಿಲ್ಲ ಎಂದಲ್ಲವೇ? ಹಾಗಾದರೆ ಭಾರತ ಹೇಗೆ ಒಗ್ಗಟ್ಟಾಗುತ್ತದೆ? ಎಂದು ನಾನು ಕೇಳಿದೆ.”

ಕಾಂಗ್ರೆಸ್‌ ಹಾಕಿರುವ ಈ ಪೋಸ್ಟ್‌ನಲ್ಲಿ ಶೇಖಡವಾರು ಲೆಕ್ಕದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಮತ್ತು ಮೀಸಲಾತಿ ಕುರಿತು ರಾಹುಲ್ ನೀಡಿರುವ ಹೇಳಿಕೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ, ರಾಹುಲ್ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ.

ಇದನ್ನೂ ಓದಿ : Fact Check: ‘ದಿಲ್ಲಿ ಚಲೋ’ ಪ್ರತಿಭಟನಾ ನಿರತ ರೈತರು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...