HomeದಿಟನಾಗರFact Check: ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ವಿತರಿಸುವ ಹಾಲಿನಲ್ಲಿ ಸ್ನಾನ ಮಾಡಿದ್ದಾರೆ ಎಂಬುವುದು ಸುಳ್ಳು

Fact Check: ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ವಿತರಿಸುವ ಹಾಲಿನಲ್ಲಿ ಸ್ನಾನ ಮಾಡಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

“ಹಾಲನ್ನು ಹಲಾಲ್ ಮಾಡಲು ಅವರು ಏನು ಮಾಡುತ್ತಾರೆ? ಹಾಲಿನಲ್ಲಿ ಸ್ನಾನ ಮಾಡಿ ಹಿಂದೂಗಳಿಗೆ ಹಂಚುತ್ತಾರೆ” ಎಂಬ ಬರಹದೊಂದಿಗೆ ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Tathvam-asi(@ssaratht) ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಕೇರಳದ ಮುಸ್ಲಿಂ ವ್ಯಕ್ತಿ ಹಾಲನ್ನು ಹಲಾಲ್ ಮಾಡಲು ಅದರಲ್ಲಿ ಸ್ನಾನ ಮಾಡಿದ್ದಾರೆ” ಎಂದು ಹೇಳಲಾಗಿದೆ.

ಪೋಸ್ಟ್ ಲಿಂಕ್ 

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ನಾವು ವೈರಲ್ ವಿಡಿಯೋವನ್ನು ಗೂಗಲ್‌ನಲ್ಲಿ ಹುಡುಕಾಡಿದಾಗ ನವೆಂಬರ್ 9,2020ರಂದು ಎನ್‌ಡಿ ಟಿವಿ ವಿಡಿಯೋ ಕುರಿತು ಪ್ರಕಟಿಸಿದ ಸುದ್ದಿಯೊಂದು ದೊರೆತಿದೆ. ಸುದ್ದಿಯಲ್ಲಿ “ಕೆಲಸಗಾರನೊಬ್ಬ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್ ಆದ ಬಳಿಕ ಟರ್ಕಿ(ತುರ್ಕಿ) ಯಲ್ಲಿ ಡೈರಿ ಪ್ಲಾಂಟ್ ಅನ್ನು ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.

ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ “ಒಬ್ಬ ವ್ಯಕ್ತಿ ಹಾಲು ತುಂಬಿದ ದೊಡ್ಡ ಕಡಾಯಿಯಲ್ಲಿ ಕುಳಿತು, ಮಗ್‌ನಲ್ಲಿ ಹಾಲನ್ನು ತನ್ನ ತಲೆಯ ಮೇಲೆ ಸುರಿಯುತ್ತಿರುವುದು ಕಾಣಬಹುದು ಎಂದು ಹೇಳಲಾಗಿದೆ.

ಸುದ್ದಿ ಲಿಂಕ್ ಇಲ್ಲಿದೆ 

‘hurriyetdailynews.com’ಎಂಬ ವೆಬ್‌ಸೈಟ್‌ ನವೆಂಬರ್ 6, 2020ರಂದು ಪ್ರಕಟಿಸಿದ ಸುದ್ದಿಯಲ್ಲಿ “ಸೆಂಟ್ರಲ್ ಅನಾಟೋಲಿಯನ್ ಪ್ರಾಂತ್ಯದ ಕೊನ್ಯಾದಲ್ಲಿ ಡೈರಿ ಪ್ಲಾಂಟ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಕಡಾಯಿಯಲ್ಲಿ ಮಾರಾಟಕ್ಕೆ ಸಿದ್ಧಪಡಿಸಿದ ಹಾಲಿನಲ್ಲಿ ಸ್ನಾನ ಮಾಡುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಟರ್ಕಿಯ ಸುದ್ದಿ ವೆಬ್‌ಸೈಟ್‌ trthaber.com ಜೂನ್ 10,2022 ರ ಪ್ರಕಟಿಸಿದ ಸುದ್ದಿಯಲ್ಲೂ “ಟರ್ಕಿಯ ಕೊನ್ಯಾ ಎಂಬಲ್ಲಿನ ಹಾಲಿನ ಡೈರಿಯಲ್ಲಿ, ಅಲ್ಲಿನ ಉದ್ಯೋಗಿ ಎಮ್ರೆ ಸಯಾರ್ ಎಂಬಾತ ಹಾಲಿನ ಕಡಾಯಿಯಲ್ಲಿ ಸ್ನಾನ ಮಾಡಿದ್ದಾರೆ. ಅದನ್ನು ಆತನ ಸಹೊದ್ಯೋಗಿ ಉಗುರ್ ತುರ್ಗುಟ್ ವಿಡಿಯೋ ಮಾಡಿ ಟಿಕ್‌ ಟಾಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಇಬ್ಬರನ್ನೂ ಬಂಧಿಸಲಾಗಿದೆ” ಎಂದು ಹೇಳಲಾಗಿದೆ.

ಸುದ್ದಿ ಲಿಂಕ್ ಇಲ್ಲಿದೆ 

ನಾವು ನಡೆಸಿದ ಪರಿಶೀಲನೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದಂತೆ ಕೇರಳದ ವ್ಯಕ್ತಿ ಹಾಲನ್ನು ಹಲಾಲ್ ಮಾಡಲು, ಅದರಲ್ಲಿ ಸ್ನಾನ ಮಾಡಿದ್ದಾರೆ. ಹಿಂದೂಗಳಿಗೆ ಹಂಚುವ ಹಾಲಿನಲ್ಲಿ ಮುಸ್ಲಿಂ ವ್ಯಕ್ತಿ ಸ್ನಾನ ಮಾಡಿದ್ದಾರೆ ಎಂಬುವುದು ಸುಳ್ಳು ಎಂದು ತಿಳಿದು ಬಂದಿದೆ.

ವೈರಲ್ ವಿಡಿಯೋ ಟರ್ಕಿಯ ಕೊನ್ಯಾ ಎಂಬಲ್ಲಿನ ಹಾಲಿನ ಡೈರಿಯಲ್ಲಿ ವ್ಯಕ್ತಿಯೊಬ್ಬ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡಿ, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದು ಎಂದು ಖಚಿತವಾಗಿದೆ. 

ಇದನ್ನೂ ಓದಿ : Fact Check: ಮೋದಿ ಗೆಲ್ತಾರೆ ಎಂದಿದ್ದಕ್ಕೆ ತಮಿಳುನಾಡಿನಲ್ಲಿ ಗಿಣಿ ಶಾಸ್ತ್ರದವರನ್ನು ಬಂಧಿಸಲಾಗಿದೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...