HomeದಿಟನಾಗರFact Check : ದೋಸೆ ಕುರಿತ ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟೆಡ್

Fact Check : ದೋಸೆ ಕುರಿತ ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟೆಡ್

- Advertisement -
- Advertisement -

ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಆಯೋಜಿಸಿದ್ದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಮಾಡಿದ್ದು ಎನ್ನಲಾದ ಭಾಷಣದ ವಿಡಿಯೋವೊಂದು ವೈರಲ್ ಆಗಿದೆ.

ಹದಿನಾರು ನಿಮಿಷದ ವಿಡಿಯೋದಲ್ಲಿ “ನೀವು, ನನಗೆ ದೋಸೆ ಇಷ್ಟ ಎಂದು ಹೇಳುತ್ತೀರಿ. ಇಲ್ಲಿಗೆ ಬಂದು ತಮಿಳುನಾಡಿನ ಜನರಿಗೆ ನೀವು ದೋಸೆ ಇಷ್ಟಪಡುತ್ತೀರಿ ಎಂದು ಹೇಳುತ್ತೀರಿ. ಅದೇ ಸಮಯದಲ್ಲಿ, ನೀವೂ ದೋಸೆ ಇಷ್ಟಪಡುತ್ತೀರಿ ಎಂದು ಹೇಳುತ್ತೀರಿ. ನಿಮಗೆ ದೋಸೆ ಇಷ್ಟವಾಗಬಹುದು, ವಡೆ ಕೂಡ ಇಷ್ಟವಾಗಬಹುದು” ಎಂದು ರಾಹುಲ್ ಗಾಂಧಿ ಅಸ್ಪಷ್ಟವಾಗಿ ಹೇಳಿರುವುದು ಇದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಮಾತನಾಡಿದ್ದು ಎನ್ನಲಾದ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ. ವಿಡಿಯೋದಲ್ಲಿರುವ ‘ನ್ಯೂಸ್ 18 ತಮಿಳು’ ಲೋಗೋ ಗಮನಿಸಿದ ನಾವು ನ್ಯೂಸ್‌ 18 ತಮಿಳಿನ ಅಧಿಕೃತ ಯೂಟ್ಯೂಬ್ ಚಾನೆಲ್ ಪರಿಶೀಲಿಸಿದ್ದೇವೆ. ಈ ವೇಳೆ ಏಪ್ರಿಲ್ 12 ರಂದು ನೇರ ಪ್ರಸಾರ ಮಾಡಲಾದ ಮೂಲ ವಿಡಿಯೋ ನಮಗೆ ದೊರೆತಿದೆ.

ಯೂಟ್ಯೂಬ್ ವಿಡಿಯೋ ಲಿಂಕ್ ಇಲ್ಲಿದೆ 

‘ಕೊಯಮತ್ತೂರಿನಲ್ಲಿ ಒಂದೇ ವೇದಿಕೆಯಲ್ಲಿ ಎಂ.ಕೆ.ಸ್ಟಾಲಿನ್, ರಾಹುಲ್ ಗಾಂಧಿ ಚುನಾವಣಾ ಪ್ರಚಾರ | MK Stalin | Rahul’ ಎಂಬ ತಮಿಳು ಭಾಷೆಯ ಶೀರ್ಷಿಕೆಯ 11 ಗಂಟೆ 55 ಸೆಕೆಂಡ್‌ನ ಸುದೀರ್ಘ ವಿಡಿಯೋದಲ್ಲಿ 46 ನಿಮಿಷ 11 ಸೆಕೆಂಡ್‌ನಿಂದ ವೈರಲ್ ಕ್ಲಿಪ್‌ನಲ್ಲಿರುವ ಅಂಶಗಳಿವೆ.

“ನೀವು ಇಲ್ಲಿಗೆ ಬರ್ತೀರಿ ನನಗೆ ದೋಸೆ ಇಷ್ಟ ಎಂದು ಹೇಳುತ್ತೀರಿ. ನಂತರ ನೀವು ದೆಹಲಿಗೆ ಹೋಗಿ ಹೇಳುತ್ತೀರಿ ಒಂದು ದೇಶ, ಒಬ್ಬ ನಾಯಕ, ಒಂದು ಭಾಷೆ ಎಂದು ಹೇಳುತ್ತೀರಿ. ಒಂದು ಭಾಷೆ ಯಾಕೆ? ತಮಿಳಿಗೆ ಯಾಕೆ ಜಾಗವಿಲ್ಲ, ಬಂಗಾಳಿಗೆ ಯಾಕೆ ಜಾಗವಿಲ್ಲ, ಕನ್ನಡಕ್ಕೆ ಯಾಕೆ ಜಾಗವಿಲ್ಲ, ಮಣಿಪುರಿಗೆ ಯಾಕೆ ಜಾಗವಿಲ್ಲ? ನೀವು ಇಲ್ಲಿಗೆ ಬರುತ್ತೀರಿ ತಮಿಳು ನಾಡಿನ ಜನರಿಗೆ ಹೇಳುತ್ತೀರಿ ನೀವು ದೋಸೆ ಇಷ್ಟ ಪಡುತ್ತೀರಿ ಎಂದು, ನಂತರ ನೀವು ಅವರನ್ನು ಅವಮಾನಿಸುತ್ತೀರಿ. ಅವರ ಭಾಷೆ, ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತೀರಿ. ನೀವು ದೋಸೆ ಇಷ್ಟ ಎನ್ನುತ್ತೀರಿ. ಆದರೆ, ತಮಿಳು ರೈತರು ಹಸಿವಿನಿಂದ ಬಳಲುತ್ತಿದ್ದಾರೆ, ತಮಿಳು ಯುವಕರು ನಿರುದ್ಯೋಗಿಗಳು. ನೀವು ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್‌ಟಿ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯನ್ನು ನಾಶಪಡಿಸಿದ್ದೀರಿ. ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು ತೆರಿಗೆ ಪಾವತಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದಾರೆ.

ನಾವು ಮೇಲೆ ಹೇಳಿದ ವಿಷಯಗಳನ್ನೊಳಗೊಂಡ ವಿಡಿಯೋವನ್ನು ಏಪ್ರಿಲ್ 12, 2024ರಂದು ಕಾಂಗ್ರೆಸ್‌ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಅದರಲ್ಲೂ ರಾಹುಲ್ ಗಾಂಧಿ ದೋಸೆಯ ಉದಾಹರಣೆ ಕೊಟ್ಟು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವುದು ಇದೆ.

ನಾವು ನಡೆಸಿದ ಪರಿಶೀಲನೆಯಲ್ಲಿ, ರಾಹುಲ್ ಗಾಂಧಿ ಕೊಯಮತ್ತೂರಿನಲ್ಲಿ ನಡೆಸಿದ ಭಾಷಣದ ವಿಡಿಯೋವನ್ನು ಸಂಪೂರ್ಣವಾಗಿ ಎಡಿಟ್ ಮಾಡಿ ಅಸಂಬದ್ದ ಅರ್ಥ ಬರುವಂತೆ ತಿರುಚಿ ಹಂಚಿಕೊಂಡಿರುವುದು ಗೊತ್ತಾಗಿದೆ.

ಇದನ್ನೂ ಓದಿ : Fact Check : ಇದು ಅಲ್ಲಾ vs ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...