Homeದಿಟನಾಗರಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಎಂಬ ಯೋಜನೆಯೆ ಇಲ್ಲ; ಮೋಸ ಹೋಗದಿರಿ!

ಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಎಂಬ ಯೋಜನೆಯೆ ಇಲ್ಲ; ಮೋಸ ಹೋಗದಿರಿ!

- Advertisement -
- Advertisement -

“ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ, ಪ್ರಧಾನಿ ಮೋದಿ ಜಾರಿಗೆ ತಂದಿರುವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಅಡಿಯಲ್ಲಿ, ಪತ್ರಿ ತಿಂಗಳು 2000 ರೂ. ಸಿಗುತ್ತದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವು ದಾಖಲಾತಿಗಳನ್ನು ‘ಸಿಎಸ್‌ಸಿ’ ಎಂಬ ಪೋರ್ಟಲ್‌ಗೆ ಸಲ್ಲಿಸಬೇಕು ಎಂದು ವೈರಲ್‌ ಸಂದೇಶ ಹೇಳುತ್ತದೆ.

ವಾಟ್ಸಪ್‌ನಲ್ಲಿ ಹರಿದಾಡುತ್ತಿರವ ಸಂದೇಶದಲ್ಲಿ, “ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ. ಅದು ಹೇಗೆಂದರೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆ. ಅದು ಯಾವುದೆಂದರೆ ‘ಪಿ ಎಂ ಕನ್ಯಾ ಯೋಜನೆ’. ಪಿ ಎಂ ಕನ್ಯಾ ಯೋಜನೆಗೆ ಅಜಿ೯ ಸಲ್ಲಿಸಲು; ವಯಸ್ಸಿನ ಮಿತಿ 05 ರಿಂದ 18 ವಷ೯ದೊಳಗಿನವರು, ಆಧಾರ ಕಾರ್ಡ್, ಬ್ಯಾಂಕ್ ಪಾಸಬುಕ್, ಮಗುವಿನ 2 ಭಾವಚಿತ್ರ, ತಂದೆ ತಾಯಿಯ ವಾಷಿ೯ಕ ವರಮಾನ 2 ಲಕ್ಷ ರೂ ದಾಟಿರಬಾರದು” ಎಂದು ಹೇಳಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಸೋನಿಯಾ ಗಾಂಧಿಯ ಎಡಿಟೆಡ್‌‌ ಚಿತ್ರವನ್ನು ಹಂಚುತ್ತಿರುವ ಬಿಜೆಪಿ

ಅಷ್ಟೇ ಅಲ್ಲದೆ, “ಅಜಿ೯ಯನ್ನು CSC ಗೆ ಹೋಗಿ ಅಜಿ೯ಯನ್ನು ಸಲ್ಲಿಸಬೇಕು. ಸಲ್ಲಿಸಿದ ನಂತರ ನಿಮಗೆ ಒಂದು ರಶೀದಿ ಕೊಡುತ್ತಾರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮತ್ಯಾಕೆ ತಡಾ ಈಗಲೇ ಹೋಗಿ ಪ್ರಧಾನಮಂತ್ರಿ ಕನ್ಯಾ ಆಯುಷ್ ಯೋಜನೆಗೆ ಅಜಿ೯ ಸಲ್ಲಿಸಿ. ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬಹುದು” ಎಂದು ಹುರಿದುಂಬಿಸಲಾಗಿದೆ.

ವಾಟ್ಸಪ್ ಮಾತ್ರವಲ್ಲದೆ, ಫೇಸ್‌ಬುಕ್‌ನಲ್ಲಿ ಕೂಡಾ ಈ ಸಂದೇಶದ ಹರಿದಾಡುತ್ತಿದೆ. ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಕೂಡಾ ನೋಡಬಹುದಾಗಿದೆ.

ಇದನ್ನೂ ಓದಿ: ಲಸಿಕೆ ಪಡೆದ ಎಲ್ಲರೂ 2 ವರ್ಷಗಳಲ್ಲಿ ಸಾಯುತ್ತಾರೆ: ಈ ವ್ಯಾಟ್ಸಾಪ್ ವದಂತಿ ನಂಬಬೇಡಿ 

ಫ್ಯಾಕ್ಟ್‌ಚೆಕ್‌

‘ಪಿಎಂ ಕನ್ಯಾ ಆಯುಷ್ ಯೋಜನೆ’ ಎಂಬ ಹೆಸರಿನ ಯಾವುದೆ ಯೋಜನೆಯನ್ನು ಒಕ್ಕೂಟ ಸರ್ಕಾರ ಇದುವರೆಗೂ ರೂಪಿಸಿಲ್ಲ. ಈ ರೀತಿಯ ಯಾವುದೆ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ(PIB) ಸ್ಪಷ್ಟಪಡಿಸಿದೆ. ಈ ಸಂದೇಶವು ಕಳೆದ ವರ್ಷವೆ ವೈರಲ್ ಆಗಿತ್ತು. ಇದೀಗ ಕನ್ನಡದಲ್ಲಿ ಭಾಷಾಂತರಗೊಂಡು ಹರಿದಾಡುತ್ತಿದೆ.

ಈ ಬಗ್ಗೆ PIB ಫ್ಯಾಕ್ಟ್‌ಚೆಕ್ ಕೂಡಾ ಮಾಡಿದ್ದು, “ಈ ಪ್ರತಿಪಾದನೆಗಳು ನಕಲಿಯಾಗಿದ್ದು, ಒಕ್ಕೂಟ ಸರ್ಕಾರದ ಅಡಿಯಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ. ದಯವಿಟ್ಟು ಅಂತಹ ನಕಲಿ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ” ಎಂದು ಅದು ಎಚ್ಚರಿಸಿದೆ.

ಒಟ್ಟಿನಲ್ಲಿ, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಎಂಬ ಯೋಜನೆ ನಕಲಿಯಾಗಿದೆ. ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2000 ರೂ. ಸಿಗುವ ಯಾವುದೆ ಯೋಜನೆಯನ್ನು ಒಕ್ಕೂಟ ಸರ್ಕಾರ ರೂಪಿಸಿಲ್ಲ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...