Homeಮುಖಪುಟಫೈಜ್ ಅಹಮದ್ ಫೈಜ್‍ರ ಹಮ್ ದೇಖೇಂಗೇ ಕವಿತೆಯೂ ವೈದಿಕಮಣಿಗಳ ಸಂಕುಚಿತ ಬುದ್ಧಿಯೂ

ಫೈಜ್ ಅಹಮದ್ ಫೈಜ್‍ರ ಹಮ್ ದೇಖೇಂಗೇ ಕವಿತೆಯೂ ವೈದಿಕಮಣಿಗಳ ಸಂಕುಚಿತ ಬುದ್ಧಿಯೂ

- Advertisement -
- Advertisement -

ಪಾಕಿಸ್ತಾನದ ಸುಪ್ರಸಿದ್ಧ ಕವಿ ಫೈಜ್ ಅಹಮದ್ ಫೈಜ್ ಅವರ ಕವಿತೆಯೊಂದರ ಕುರಿತು ವಿವಾದ ಭುಗಿಲೆದ್ದಿದೆ. ದೆಹಲಿಯ ಮಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ್ದ ಅನಾಗರಿಕ ಹಲ್ಲೆ ದೌರ್ಜನ್ಯವನ್ನು ಖಂಡಿಸಿ, ಜಾಮಿಯಾ ವಿದ್ಯಾರ್ಥಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿ ಕಳೆದ ಡಿಸೆಂಬರ್ 17ರಂದು ಐಐಟಿ ಕಾನ್ಪುರ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಫೈಜ್ ಬರೆದಿದ್ದ “ಹಮ್ ದೇಖೇಂಗೇ” ಕವಿತೆಯನ್ನು ವಾಚಿಸಲಾಗಿತ್ತು. ಇನ್‍ಸ್ಪೈರ್ ಎಂಬ ವಿಜ್ಞಾನ ಕಾರ್ಯಕ್ರಮದಡಿ ಇದೇ ಐಐಟಿಯಲ್ಲಿ ಐದು ವರ್ಷಗಳ ಅವಧಿಗೆ ಕರಾರಿನ ಮೇಲೆ ಬೋಧಕನಾಗಿ 2016ರಲ್ಲಿ ನೇಮಕಗೊಂಡಿರುವ ವಸಿ ಶರ್ಮಾ ಎಂಬ ಪ್ರಾಧ್ಯಾಪಕ ಮತ್ತು ಇತರ 16 ಜನರು “ಹಮ್ ದೇಖೇಂಗೇ ಕವಿತೆ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುತ್ತದೆ” ಎಂದು ಆಡಳಿತಾಂಗಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ ಆಡಳಿತಾಂಗವು ಆರು ಮಂದಿ ಪ್ರಾಧ್ಯಾಪಕರ ಸಮಿತಿಯೊಂದನ್ನು ನೇಮಿಸಿ ದೂರಿನ ಕುರಿತು ತನಿಖೆ ನಡೆಸಿ ದೂರಿನಲ್ಲಿ ಏನಾದರೂ ಹುರುಳಿದೆಯೋ ಎಂದು ವರದಿ ನೀಡಲು ತಿಳಿಸಿದೆ. ದ ಹಿಂದೂ ಪತ್ರಿಕೆಯಲ್ಲಿ ವರದಿಯಾದಂತೆ ಆಡಳಿತಾಂಗವು ಸ್ಪಷ್ಟಪಡಿಸಿರುವ ಪ್ರಕಾರ ತನಿಖಾ ಸಮಿತಿಯು ಕವಿತೆ ಹಿಂದೂ ವಿರೋಧಿಯೇ ಅಲ್ಲವೇ ಎಂಬ ಕುರಿತು ತನಿಖೆ ನಡೆಸುವುದಿಲ್ಲ, ಆದರೆ ಅದರ ಕುರಿತು ದೂರು ನೀಡಿರುವವರು ತಿಳಿಸಿರುವಂತೆ ಆ ಕವಿತೆಯನ್ನು ವಾಚಿಸಿದವರಲ್ಲಿ ದುರುದ್ದೇಶವಿತ್ತೇ ಎಂಬ ಕುರಿತು ವರದಿ ನೀಡುತ್ತದೆ.

ಫೈಜ್ ಅಹಮದ್ ಫೈಜ್ ಅವರ ಕವಿತೆಯ ಕುರಿತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಇಂತಹ ತನಿಖೆಯನ್ನು ನಡೆಸುತ್ತಿರುವುದೇ ಹಾಸ್ಯಾಸ್ಪದ ಎಂಬ ಅಭಿಪ್ರಾಯವನ್ನು ದೇಶದ ಸಾಂಸ್ಕೃತಿಕ ಲೋಕದ ಹಲವಾರು ಗಣ್ಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ. ಫೈಜ್ ಅವರ ಬದುಕು, ಕಾವ್ಯದ ಅಲ್ಪಸ್ವಲ್ಪ ಪರಿಚಯವಿದ್ದವರಿಗೂ ಇಂತಹ ಆರೋಪ ಎಷ್ಟು ಬಾಲಿಶಃ ಎಂಬುದು ಅರ್ಥವಾಗುತ್ತದೆ.

ಹಮ್ ದೇಖೇಂಗೆ ಕವಿತೆಯಲ್ಲಿ ಏನಿದೆ?

ಫೈಜ್ ಅವರ ಹಮ್ ದೇಖೇಂಗೇ ಕವಿತೆ ಹಿಂದೂ ಧರ್ಮವನ್ನು ನಾಶ ಮಾಡಿ ಇಸ್ಲಾಂ ದೇಶವನ್ನು ಸ್ಥಾಪಿಸುವ ಕರೆ ನೀಡುವ ಕವಿತೆ ಎಂಬುದು ವಸಿ ಶರ್ಮನ ಮುಖ್ಯ ಆರೋಪ. ಅದಕ್ಕೆ ಅವನು ಈ ಕವಿತೆಯಲ್ಲಿ ಬರುವ ವಾಕ್ಯಗಳಲ್ಲಿನ ಕೆಲವು ಪದಗಳನ್ನು ಉಲ್ಲೇಖಿಸುತ್ತಾನೆ.
“ಜಬ್ ಅರ್ಜ್-ಎ-ಖುದಾ ಕೆ ಕಾಬೆ ಸೆ/ಸಬ್ ಬುತ್ ಉಠವಾಯೇ ಜಾಯೇಂಗೇ, ಹಮ್ ಅಹ್ಲ್-ಎ-ಸಫಾ ಮರ್ದೂದೆ ಹರಮ್/ಮಸನದ್ ಪೆ ಬಿಠಾಯೇ ಜಾಯೇಂಗೇ/ಸಬ್ ತಾಜ್ ಉಛಲೆ ಜಾಯೆಂಗೇ/ಸಬ್ ತಖ್ತ್ ಗಿರಾಯೇ ಜಾಯೆಂಗೆ/ಬಸ್ ನಾಮ್ ರಹೇಗಾ ಅಲ್ಲಾಹ್ ಕಾ” ಈ ಸಾಲುಗಳಲ್ಲಿ ಫೈಜ್ ಕವಿ ಎಲ್ಲಾ ವಿಗ್ರಹಗಳನ್ನು ನಾಶ ಮಾಡಿ ಕೇವಲ ಅಲ್ಲಾಹನ ಹೆಸರೊಂದೇ ಉಳಿಯುವ ಆ ದಿನವನ್ನು ನಾವು ನೋಡುತ್ತೇವೆ ಎಂದು ಹೇಳಿದ್ದಾನೆ ಹೀಗಾಗಿ ಇದು ನಮ್ಮ ಧರ್ಮವಿರೋಧಿ ಕವಿತೆಯಾಗಿದೆ ಎಂಬುದು ಶರ್ಮಾನ ವರಾತ. ಇವನ ವಾದವನ್ನು ನೋಡಿ ನಿಜಕ್ಕೂ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಈ ಶರ್ಮಾ ಈ ಹಿಂದೆ “ಲವ್ ಜಿಹಾದ್” ಬಗ್ಗೆಯೂ ಇಂತಹುದೇ ಆರೋಪಗಳನ್ನು ಮಾಡಿ ತನ್ನನ್ನು ತಾನು ಇಸ್ಲಾಮಿ ಜಿಹಾದಿಗಳ ವಿರುದ್ಧ ಧ್ವನಿ ಎತ್ತುತ್ತಿರುವ ಭಾರೀ ಪಂಡಿತ ಎಂದು ಬಿಂಬಿಸಿಕೊಂಡಿರುವಾತ.

ಈ ವಸಿ ಶರ್ಮಾ ಹೇಳಿಕೇಳಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಕೊಂಡಿರುವಾತ. ಅವನು ಫೈಜ್ ಅವರಂತಹ ಮಹಾನ್ ಕವಿಗಳ ಕವಿತೆಗಳನ್ನು ಅವುಗಳಲ್ಲಿರುವ ಉಪಮೆ, ರೂಪಕಗಳನ್ನು ಅರ್ಥಮಾಡಿಕೋ ಎಂದರೆ ಅವನಿಗೆ ಅದು ಸುಲಭದ ಕೆಲಸವಲ್ಲ. ಅಷ್ಟಕ್ಕೂ ಮನಸ್ಸಿನಲ್ಲಿ ಮತೋನ್ಮಾದದ ವಿಷವನ್ನೇ ತುಂಬಿಕೊಂಡಿದ್ದಾಗಲಂತೂ ಯಾವುದೇ ಕವಿತೆ ಆಶಯಗಳೂ ಅರ್ಥವಾಗುವುದು ಕಷ್ಟ.
ಆದರೆ ಈ ಕವಿತೆ ಮತ್ತು ಇದರ ಬಗ್ಗೆ ವಸಿ ಶರ್ಮಾನಂತರವು ಎತ್ತಿರುವ ತಕರಾರು ಮತಾಂಧ ಮನಸ್ಸುಗಳ ಆಲೋಚನಾ ದಾಟಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಮಾತ್ರವಲ್ಲ ಈ ವಿವಾದದ ನಂತರದಲ್ಲಿ ದೇಶದ ಸಹಸ್ರಾರು ಜನರು ಫೈಜ್ ಎಂಬ ಮಹಾಕವಿಯ ಬದುಕನ್ನು ಮತ್ತು ಆತನ ಕವಿತೆಗಳನ್ನು ಹುಡುಕಿಕೊಂಡು ತಿಳಿದುಕೊಳ್ಳುವಂತಾಗಿದೆ.

ಹಮ್ ದೇಖೇಂಗೇ ಕವಿತೆಯನ್ನು ಫೈಜ್ ಅಹಮದ್ ಫೈಜ್ ಬರೆದಿದ್ದು 1979ರಲ್ಲಿ. ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಬುಟ್ಟೋ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಮಿಲಿಟರಿ ಜನರಲ್ ಜಿಯಾ ಉಲ್ ಹಕ್ ಕಟ್ಟರ್ ಪಂಥೀಯನಾಗಿದ್ದು ಇಡೀ ಪಾಕಿಸ್ತಾನವನ್ನು ಮತಾಂಧತೆಯೆಡೆಗೆ ದೂಡುತ್ತಿದ್ದ ಸನ್ನಿವೇಶದಲ್ಲಿ ಅವನ ದುರಾಡಳಿತದ ಅಂತ್ಯವನ್ನು ಬಯಸಿ ಫೈಜ್ ಬರೆದಿದ್ದ ಕವಿತೆಯೇ ‘ಹಮ್ ದೇಖೇಂಗೆ’. 1984ರಲ್ಲಿ ಫೈಜ್ ನಿಧನದ ಮರುವರ್ಷ ಅಂದರೆ 1985ರಲ್ಲಿ ಪಾಕಿಸ್ತಾನದ ಮಹಿಳೆಯರು ಸೀರೆ ಉಡುವಂತಿಲ್ಲ ಎಂಬ ಉಘಲಕ್ ಶಾಸನವನ್ನು ಜಿಯಾ ಉಲ್ ಹಕ್ ಘೋಷಿಸಿದ್ದ. ಈ ಶಾಸನವನ್ನು ಖಂಡಿಸಿ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ಇಕ್ಬಾಲ್ ಬಾನೋ ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ಕಪ್ಪು ಸೀರೆಯುಟ್ಟುಕೊಂಡು ಬಂದು ಫೈಜ್ ಅವರ “ಹಮ್ ದೇಖೇಂಗೇ” ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದರು. ಫೈಜ್ ಬರೆದ ಈ ಹಾಡಿನ ಗಾಯನವನ್ನು ಕೇಳಲೆಂದೇ ಅಂದು ಸುಮಾರು 50,000 ಜನರು ನೆರೆದಿದ್ದರು ಎಂದು ಹೇಳಲಾಗುತ್ತದೆ. ಹಾಡಿನುದ್ದಕ್ಕೂ ಕರತಾಡನ ಮಾಡುತ್ತಿದ್ದ ಜನರು ಹಾಡಿನ ಕೊನೆಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಅಂದು ಇಕ್ಬಾಲ್ ಹಾಡಿದ್ದ ಈ ಗಾಯನದ ಧ್ವನಿಮುದ್ರಿಕೆಯನ್ನು ಹೇಗೋ ರಕ್ಷಿಸಿಕೊಂಡು ಬರಲಾಗಿದ್ದು ಇಂದಿಗೂ ಯೂಟ್ಯೂಬಿನಲ್ಲಿ ಕೇಳಲು ಲಭ್ಯವಿದೆ. ತದನಂತರದಲ್ಲಿ ಈ ಹಮ್ ದೇಖೇಂಗೇ ಕವಿತೆ ಒಂದು ಕ್ರಾಂತಿಗೀತೆಯಂತೆ ದಬ್ಬಾಳಿಕೆ ನಡೆಸುವ ಸರ್ಕಾರಗಳ ವಿರುದ್ಧದ ಹೋರಾಟಗಳಲ್ಲಿ ರಾಷ್ಟ್ರಗೀತೆಯಂತೆ ಹಾಡಲಾಗುತ್ತಿದೆ.

ವಾಸ್ತವದಲ್ಲಿ ಫೈಜ್ ಒಬ್ಬ ಎಡಪಂಥೀಯ ಕವಿ. ಅವರ ಪ್ರತಿ ಕವಿತೆಗಳಲ್ಲಿ ಪ್ರೇಮ ಮತ್ತು ಕ್ರಾಂತಿಯ ಸಂದೇಶಗಳ ಹೊರತಾಗಿರುವುದು ಏನೂ ಇಲ್ಲ. ಹಮ್ ದೇಖೇಂಗೇ ಕವಿತೆಯಲ್ಲಿ ಅವರು ಬಳಸಿರುವ ದೈವಿಕವಾದ ಪದಪುಂಜಗಳನ್ನು ಈ ಕವಿತೆಯ ಆಶಯ ಮತ್ತು ಅದು ಹುಟ್ಟಿದ ಸಂದರ್ಭದಿಂದ ಹೊರತಾಗಿ ನೊಡಹೋದರೆ ವಸಿ ಶರ್ಮಾನಂತಹ ಕೂಪಮಂಡೂಕಗಳ ಮಾತುಗಳಲ್ಲಿ ಸತ್ಯವಿದೆ ಅನಿಸಬಹುದು. ಮೇಲೆ ಉಲ್ಲೇಖಿಸಿರುವ ವಿವಾದಿತ ಸಾಲುಗಳಲ್ಲಿ ಕವಿ ಫೈಜ್ ಸರ್ವಾಧಿಕಾರಿ ಜಿಯಾ ಉಲ್ ಹಕ್‍ನನ್ನು ಧರೆಯ ಮೇಲಿನ ಪೊಳ್ಳುತನಗಳಿಗೆ ಹೋಲಿಸುತ್ತಾರೆ. ಸರ್ವಾಧಿಕಾರಿಗಳ ಸಿಂಹಾಸನಗಳು ಧರೆಗುರುಳುವ ಆ ದಿನ ದ್ರೋಹಿಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ನಿಜವಾದ ಹೃದಯವಂತು ಹಕ್ಕಿನ ಗದ್ದುಗೆ ಏರುತ್ತೇವೆ, ಬೂಟಾಟಿಕೆಯ ದೊರೆಗಳು ನಾಶವಾಗಿ ಅಂತಿಮವಾಗಿ ಸರ್ವಶಕ್ತನ ಹೆಸರೊಂದೇ ಉಳಿಯುತ್ತದೆ ಎಂಬುದು ಈ ಕವಿತೆಯ ಸಾಲುಗಳ ಸಾರ. ಇಲ್ಲಿ ಅಲ್ಲಾಹುವಿನ ಎಂಬ ಇಸ್ಲಾಂ ಧರ್ಮದ ದೇವರನ್ನು ಸೂಚಿಸುವ ಪದವನ್ನು ಫೈಜ್ ಬಳಸಿದ್ದಾರೆ ನಿಜ. ಆದರೆ ಫೈಜ್ ನಂಬುವ ಅಲ್ಲಾಹ್ ಯಾರು ಎಲ್ಲಿದ್ದಾನೆ ಎಂಬುದನ್ನು ಇದೇ ಕವಿತೆಯ ಮುಂದಿನ ಪ್ಯಾರಾದಲ್ಲಿರುವ ಸಾಲುಗಳು ತಿಳಿಸುತ್ತವೆ. ಅದರಲ್ಲಿ ಫೈಜ್ ಹೇಳುತ್ತಾರೆ “ಜೊ ನಾಮ್ ರಹೇಗಾ ಅಲ್ಲಾಹ್ ಕಾ/ ಜೊ ಗಾಯೆಬ್ ಭೀ ಹೇ ಜಾಜಿರ್ ಭೀ/ ಜೊ ಮಂಜಿರ್ ಭೀ/ಉಠ್ಠೇಗಾ ಅನಲ್ ಹಕ್ ಕಾ ನಾರಾ/ಜೊ ಮೈಂ ಭೀ ಹೂಂ ಓರ್ ತುಮ್ ಭೀ ಹೋ” ಇವುಗಳ ಭಾವಾರ್ಥ ಹೀಗಿದೆ: ಅಲ್ಲಾಹನ ಹೆಸರೊಂದೇ ಉಳಿಯುತ್ತದೆ, ನಾನು ಮತ್ತು ನೀನು ಇಬ್ಬರೂ ದೇವರ ಪ್ರೀತಿಗೆ ಪಾತ್ರರಾಗುವ ಆ ದಿನ ಅನಲ್ ಹಕ್‍ನ ಘೋಷ ಮೊಳಗಲಿದೆ, ಆ ದಿನ ನಾನು ಮತ್ತು ನೀನು ದೇವರಾಗಲಿದ್ದೇವೆ.

ಇದರ ಮೂಲಕ ಫೈಜ್ ಇಸ್ಲಾಂ ಮತಾಂಧತೆಯನ್ನು ಪ್ರಚುರಪಡಿಸುತ್ತಿಲ್ಲ ಬದಲಿಗೆ, ಜಗತ್ತಿನ ಎಲ್ಲಾ ಧರ್ಮಗಳ ಜನರು ಒಪ್ಪಿಕೊಂಡಿರುವ ಆಧ್ಯಾತ್ಮಿಕ ತತ್ವವನ್ನು ತಮ್ಮ ಕವಿತೆಯ ಮೂಲಕ ಹೇಳುತ್ತಿದ್ದಾರೆ. ಇಲ್ಲಿ ಫೈಜ್ ಬಳಸಿರುವ ‘ಅನಲ್ ಹಕ್” ಪದವನ್ನು ನೀಡಿದ್ದು ಧಾರ್ಮಿಕ ಮೂಲಭೂತವಾದಕ್ಕೆ ತನ್ನದೇ ರೀತಿಯಲ್ಲಿ ಸೆಡ್ಡು ಹೊಡೆದ ಸೂಫಿ ಪಂಥ. ಕ್ರಿ.ಶ. 922ರಲ್ಲಿ ಪರ್ಷಿಯಾದ ಅನುಭಾವಿ ಸೂಫಿ ಸಂತ ಮನ್ಸೂರ್ ಅಲ್ ಹಲ್ಲಾಝ್ ಈ ‘ಅನಲ್ ಹಕ್’ ಎಂಬ ನುಡಿಗಟ್ಟನ್ನು ಸೂಫಿ ಸಾಹಿತ್ಯದಲ್ಲಿ ಬಳಕೆಗೆ ತಂದ ಕಾರಣದಿಂದ ಆತನನ್ನು “ಧರ್ಮದ್ರೋಹ”ದ ಆರೋಪದಲ್ಲಿ ಗಲ್ಲಿಗೇರಿಸಲಾಗಿತ್ತು. ಯಾಕೆಂದರೆ ಈ ನುಡಿಗಟ್ಟಿನ ಮೂಲಕ ಸೂಫಿ ಕವಿ ಹೇಳಿದ್ದು ನಾನು ಮತ್ತು ದೇವರು ಬೇರೆ ಅಲ್ಲ, ನಾನೇ ಸತ್ಯ, ನಾನೇ ದೇವರು, ನಮ್ಮ ಅಹಂನ್ನು ಕಳಚಿಕೊಂಡು, ನಮ್ಮೊಳಗಿನ ಅಂತಿಮ ಸತ್ಯವನ್ನು ಕಂಡುಕೊಳ್ಳುವ ಮೂಲಕವೇ ದೇವರನ್ನು ಕಂಡುಕೊಳ್ಳಬೇಕು ಎಂದು. ಆ ಸ್ಥಿತಿಯೇ ಅನಲ್ ಹಕ್ ಎನ್ನಲಾಗಿದೆ. ಆದರೆ ದೇವರೆಂದರೆ ಇದು, ಧರ್ಮವೆಂದರೆ ಇದು ಎಂದು ಬರೆದುಕೊಂಡು ಕುಳಿತವರಿಗೆ ಈ ತತ್ವವನ್ನು ಅರಗಿಸಿಕೊಳ್ಳುವುದು ಕಷ್ಟ. ಮನ್ಸೂರ್ ಬರೆಯುತ್ತಾನೆ, “ಹೃದಯದ ಕಣ್ಣಿನಿಂದ ನನ್ನ ದೇವರನ್ನು ನಾನು ನೋಡಿದೆ, ಆಗ ನಾನು ಕೇಳಿದೆ “ನೀನು ಯಾರು”, ಅದಕ್ಕವನುತ್ತರಿಸಿದ “ನೀನು”. ಇದನ್ನೇ ಅಲ್ಲವೇ ನಮ್ಮ ಕಬೀರನೂ ಹೇಳಿದ್ದು, ಶಿಶುನಾಳ ಶರೀಫರೂ ಹೇಳಿದ್ದು? ಹಾಗಿದ್ದ ಮೇಲೆ ಹಿಂದೂ ಧರ್ಮದ ವಿರೋಧದ ಪ್ರಶ್ನೆ ಎಲ್ಲಿ ಬರುತ್ತದೆ? ಫೈಜ್ ತಮ್ಮ ಕವಿತೆಯಲ್ಲಿ ಮಾರ್ದನಿಸಿದ ಮನ್ಸೂರನ ಸೂಫಿ ತತ್ವ ಬೇರೆಯಲ್ಲ ಉಪನಿಷತ್ತುಗಳಲ್ಲಿ ಹೇಳಲಾದ ಅದ್ವೈತ ತತ್ವ ಬೇರೆಯಲ್ಲ. ನಮ್ಮ ನೋಡುವ ಕಣ್ಣು, ಸ್ವೀಕರಿಸುವ ಒಳಗಣ್ಣು ಹೃದಯಗಳು ಪರಿಶುದ್ಧವಾಗಿದ್ದರೆ ಇದನ್ನು ಅರಿಯುವುದು ಕಷ್ಟವೇನಲ್ಲ ಆದರೆ ವೈದಿಕ ವಿಷಜಂತು ವಸಿ ಶರ್ಮಾನಂತ ಮತಾಂಧರಿಗೆ ಪ್ರತಿಯೊಂದೂ ಹಿಂದು ಧರ್ಮ ವಿರೋಧಿಯಾಗಿಯೇ ಕಾಣಿಸುವುದು, ಫೈಜ್ ಕವಿತೆಯನ್ನು ಹಾಡುವ, ಅದನ್ನು ಸಮರ್ಥಿಸುವ ಪ್ರತಿಯೊಬ್ಬರೂ ಐಸಿಸ್‍ನ ಸಮರ್ಥಕರಂತೆ ತೋರುತ್ತಿರುವುದು ಅಚ್ಚರಿಯೂ ಅಲ್ಲ ಹೊಸ ವಿಷಯ ಅಂತೂ ಅಲ್ಲವೇ ಅಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...