ಕೋವಿಡ್ ನಕಲಿ ಪರೀಕ್ಷಾ ಕಿಟ್‌ಗಳನ್ನು ತಯಾರಿಸುವ ಕಂಪನಿಯನ್ನು ನೋಯ್ಡಾ ಪೊಲೀಸರು ಪತ್ತೆಹಚ್ಚಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಲಯ 20ನೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಲಯ 7ರಲ್ಲಿರುವ ಕಂಪನಿಯಿಂದ ಸುಮಾರು ನಾಲ್ಕು ಲಕ್ಷ ನಕಲಿ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಪಿಪಿಇ ಜೊತೆಗೆ ಸ್ಯಾನಿಟರಿ ಪ್ಯಾಡ್ ಹಾಗೂ ಡೈಪರ್ ಕೂಡಾ ಧರಿಸಬೇಕು: ಮಹಿಳಾ ವೈದ್ಯೆಯರ ಸಂಕಷ್ಟ
“ಕೋವಿಡ್-19 ಟೆಸ್ಟ್ ಕಿಟ್ ತಯಾರಿಸುವ ಕಂಪನಿಯ ಪ್ರತಿನಿಧಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕಂಪನಿಯನ್ನು ಸೀಲ್ ಮಾಡಲಾಗಿದೆ. ಈ ಕಂಪನಿಯು ತನ್ನ ನಕಲಿ ಲೇಬಲ್‌ಗಳನ್ನು ಪರೀಕ್ಷಾ ಕಿಟ್‌ಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಿಕೊಂಡಿದೆ” ಎಂಬುದಾಗಿ ಪೊಲೀಸ್ ವಕ್ತಾರರು ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಈ ನಕಲಿ ಕಂಪನಿ ನಡೆಸುತ್ತಿರುವ ಮಾಲೀಕ ರಾಜೇಶ್ ಪ್ರಸಾದ್‌ನನ್ನು ಬಂಧಿಸಲಾಗಿದೆ. ಈತನನ್ನು ದೆಹಲಿಯ ಅಶೋಕ್ ನಗರದಲ್ಲಿರುವ ಆತನ ಮನೆಯಿಂದ ಕರೆದೊಯ್ಯಲಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್‌ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ
3.97 ಲಕ್ಷ ಪೌಚ್‌ಗಳು ಹೊಂದಿದ್ದ ನಕಲಿ ಕಿಟ್‌ಗಳನ್ನು ಕಂಪನಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಹಕ್ಕುಸ್ವಾಮ್ಯ ಕಾಯ್ದೆ 1957ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಪಿಇ ಕಿಟ್, ಔಷಧಿ ಪೂರೈಕೆ ಆಗುತ್ತಿಲ್ಲ; ರಾಜಕೀಯವಾಡದಿರಿ: ಬಿಜೆಪಿ ವಿರುದ್ದ ಮಹಾ ಸಿಎಂ ಕಿಡಿ