Homeಮುಖಪುಟದೆಹಲಿ: ಮುಸ್ಲಿಮರ ಧಾರ್ಮಿಕ ಮೆರವಣಿಗೆಯನ್ನು ಕೋಮು ಪ್ರತಿಭಟನೆ ಎಂದು ಸುಳ್ಳು ಪ್ರಚಾರ

ದೆಹಲಿ: ಮುಸ್ಲಿಮರ ಧಾರ್ಮಿಕ ಮೆರವಣಿಗೆಯನ್ನು ಕೋಮು ಪ್ರತಿಭಟನೆ ಎಂದು ಸುಳ್ಳು ಪ್ರಚಾರ

- Advertisement -
- Advertisement -

ಜಿ20 ಶೃಂಗಸಭೆಗೆ ವೇದಿಕೆ ಸಿದ್ದಗೊಳ್ಳುತ್ತಿದ್ದಂತೆ ದೆಹಲಿಯಲ್ಲಿ ಶಿಯಾ ಮುಸ್ಲಿಮರ ಧಾರ್ಮಿಕ ಮೆರವಣಿಗೆಯನ್ನು ಕೋಮು ಪ್ರತಿಭಟನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮುಸ್ಲಿಂ ಸಮುದಾಯದ ಧಾರ್ಮಿಕ ಮೆರವಣಿಗೆ ಬಗ್ಗೆ ಪ್ರತಿಷ್ಠಿತ ಶೃಂಗಸಭೆಗೆ ಮುಂಚಿತವಾಗಿ ಕೋಮು ಪ್ರತಿಭಟನೆ ಮಾಡಿ ಏನನ್ನಾದರೂ ಯೋಜಿಸಲಾಗಿದೆಯೇ ಎಂದು ಆಶ್ಚರ್ಯ ಪಡುತ್ತವೆ ಎಂದು ಪೋಸ್ಟ್‌ ಮಾಡಿದ್ದರು.

ಈ ಕುರಿತು ದೆಹಲಿ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದು, ಚೆಹ್ಲುಮ್ ಮೆರವಣಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರತಿಭಟನೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿದೆ. ಚೆಹ್ಲುಮ್ ಮೆರವಣಿಗೆ ಸಾಂಪ್ರದಾಯಿಕ ಮೆರವಣಿಗೆಯನ್ನು ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆದು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶಿಯಾ ಮುಸ್ಲಿಂ ಸಮುದಾಯದವರು ಗುರುವಾರ ದೆಹಲಿಯಲ್ಲಿ ಚೆಹ್ಲುಮ್ ಆಚರಿಸಿದರು. ದೆಹಲಿಯಲ್ಲಿ ಪ್ರವಾದಿ ಹಜರತ್ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಹುತಾತ್ಮತೆಯನ್ನು ಸ್ಮರಿಸುವ ಸಲುವಾಗಿ ಮೊಹರಂ ನಂತರ 40ನೇ ದಿನದಂದು ಚೆಹ್ಲುಮ್‌ನ್ನು ಆಚರಿಸಲಾಗುತ್ತದೆ.

ಜಿ20 ಶೃಂಗಸಭೆಯ ಕಾರಣದಿಂದ ಬುಧವಾರ ಬೆಳಗ್ಗೆ 8.30ಕ್ಕೆ ಪಹಾರಿ ಭೋಜ್ಲಾದಿಂದ ಮೆರವಣಿಗೆ ಪ್ರಾರಂಭಿಸಲಾಗಿತ್ತು. ಮೆರವಣಿಗೆ ದರ್ಗಾ ಶಾ-ಎ-ಮರ್ದಾನ್‌ನಿಂದ ಚಿಟ್ಲಿ ಕಬಾರ್, ಮಟಿಯಾ ಮಹಲ್, ಜಮಾ ಮಸೀದಿ, ಹೌಜ್ ಖಾಜಿ, ಅಜ್ಮೇರಿ ಗೇಟ್, ಪಹರ್‌ಗಂಜ್ ಸೇತುವೆ, ಚೆಲ್ಮ್ಸ್‌ಫೋರ್ಡ್ ರಸ್ತೆಗಳಲ್ಲಿ ಸಾಗಿದೆ.

ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9-10 ರಂದು ನಡೆಯಲಿದೆ. ಶೃಂಗಸಭೆಯು ಮೊದಲ ಬಾರಿಗೆ ಭಾರತದಲ್ಲಿ ನಡೆಯಲಿದೆ. ವಿಶ್ವದ ಪ್ರಬಲ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಪ್ರತಿಷ್ಠಿತ ಸಭೆಗೆ ಭದ್ರತೆಗೆ ಬೇಕಿದ್ದ ಎಲ್ಲಾ ವ್ಯವಸ್ಥೆಗಳನ್ನು ಸರಕಾರ ಮಾಡಿದೆ.

ಇದನ್ನು ಓದಿ: ಆಂಧ್ರಪ್ರದೇಶ: ಟೊಮೆಟೊಗಳನ್ನು ಬೀದಿಗೆ ಎಸೆದು ರೈತರಿಂದ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...