Homeಮುಖಪುಟರೈತರ 'ದಿಲ್ಲಿ ಚಲೋ' ಕರೆಗೆ ಬೆದರಿದ ಸರ್ಕಾರ: ರಸ್ತೆಗಳು ಬಂದ್, ಇಂಟರ್‌ನೆಟ್‌ ಸ್ಥಗಿತ

ರೈತರ ‘ದಿಲ್ಲಿ ಚಲೋ’ ಕರೆಗೆ ಬೆದರಿದ ಸರ್ಕಾರ: ರಸ್ತೆಗಳು ಬಂದ್, ಇಂಟರ್‌ನೆಟ್‌ ಸ್ಥಗಿತ

- Advertisement -
- Advertisement -

ಫೆಬ್ರವರಿ 13ರಂದು ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ವಿವಿಧ ಭಾಗಗಳ ರೈತರು ಕೇಂದ್ರದ ಸರ್ಕಾರದ ವಿರುದ್ದ ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದು, ರೈತರು ರಾಜಧಾನಿ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ರಸ್ತೆಗಳನ್ನೇ ಮುಚ್ಚಿದ್ದಾರೆ.

ಹರಿಯಾಣ ಸರ್ಕಾರದ ಆದೇಶನುಸಾರ ಶನಿವಾರ ಪಂಜಾಬ್‌ನ ಗಡಿಯಾದ ಹರಿಯಾಣದ ಅಂಬಾಲಾದಲ್ಲಿ ರಸ್ತೆಯನ್ನು ಪೊಲೀಸರು ಮುಚ್ಚಿದ್ದಾರೆ. ಫೆಬ್ರವರಿ 11ರ ಬೆಳಿಗ್ಗೆ 6 ರಿಂದ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ ಎಸ್‌ಎಂಎಸ್‌ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.

ವರದಿಗಳ ಪ್ರಕಾರ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 13ರ ಮಧ್ಯಾಹ್ನ 23:59 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಹರಿಯಾಣ ಪೊಲೀಸರು ಅಂಬಾಲಾದ ಘಗ್ಗರ್ ನದಿಯ ಹೆದ್ದಾರಿಯ ಎರಡೂ ಬದಿಗಳನ್ನು ಮುಚ್ಚಲು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಲೋಹದ ಶೀಟ್‌ಗಳನ್ನು ಅಳವಡಿಸಿದ್ದಾರೆ. ರೈತರು ಟ್ರ್ಯಾಕ್ಟರ್‌ಗಳ ಮೂಲಕ ಹೆದ್ದಾರಿಗೆ ಬರುವುದನ್ನು ತಡೆಯಲು ಘಗ್ಗರ್ ನದಿಯ ಬದಿಯನ್ನು ಅಗೆದು ಹೊಂಡ ನಿರ್ಮಿಸಲಾಗಿದೆ.

ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳಲ್ಲಿ ಪಂಜಾಬ್-ಹರಿಯಾಣ ಗಡಿಗಳನ್ನು ಪೊಲೀಸರು ಮುಚ್ಚಿದ್ದಾರೆ. ಜನರು ಮುಖ್ಯ ರಸ್ತೆಗಳಲ್ಲಿ ಪ್ರಯಾಣವನ್ನು ಕಡಿಮೆಗೊಳಿಸುವಂತೆ ಮತ್ತು ಫೆಬ್ರವರಿ 13 ರಂದು ಅಗತ್ಯ ಕಾರ್ಯಗಳಿಗೆ ಮಾತ್ರ ಹೊರಗೆ ಬರುವಂತೆ ನಿರ್ದೇಶಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಘಟನೆ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200ಕ್ಕೂ ಹೆಚ್ಚು ರೈತ ಸಂಘಗಳು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಅಂಗೀಕರಿಸಿ ಕಾನೂನು ಜಾರಿಗೆ ತರುವಂತೆ ಕೇಂದ್ರವನ್ನು ಒತ್ತಾಯಿಸಿ ಫೆಬ್ರವರಿ 13 ರಂದು ‘ದಿಲ್ಲಿ ಚಲೋ’ ಹಮ್ಮಿಕೊಂಡಿದೆ.

2020ರಲ್ಲಿ ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆದ ಹೋರಾಟದ ವೇಳೆ ಪಂಜಾಬ್ ಮತ್ತು ಅಂಬಾಲಾದ ವಿವಿಧ ಪ್ರದೇಶಗಳ ರೈತರು ಹೆಚ್ಚಿನ ಸಂಖ್ಯೆಯ ಶಂಭು ಗಡಿಯಲ್ಲಿ ಜಮಾಯಿಸಿದ್ದರು. ಪೊಲೀಸರ ಅಡೆತಡೆಗಳನ್ನು ಬೇಧಿಸಿ ಅವರು ದೆಹಲಿಯತ್ತ ನುಗ್ಗಿದ್ದರು. ಹಾಗಾಗಿ, ಈ ಬಾರಿ ಸರ್ಕಾರದ ಹೆದರಿದಂತೆ ಗೋಚರಿಸುತ್ತಿದ್ದು, ರೈತರು ದಿಲ್ಲಿ ಚಲೋ ಘೋಷಿಸಿದ ಬೆನ್ನಲ್ಲೆ, ಅವರನ್ನು ತಡೆಯಲು ಎಲ್ಲಾ ಕಸರತ್ತು ಮಾಡುತ್ತಿದೆ.

ತಂಬ್‌ನೈಲ್ ಚಿತ್ರ ಸಾಂದರ್ಭಿಕ

ಇದನ್ನೂ ಓದಿ : ಹುದ್ದೆ ತೊರೆಯುವ ಬಗ್ಗೆಯೂ ಯೋಚಿಸಿದೆ..ರಾಜ್ಯಸಭೆ ಅಧಿವೇಶನದ ವೇಳೆ ಕೆರಳಿದ ಸ್ಪೀಕರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...