Homeಮುಖಪುಟ'ದೆಹಲಿ ಚಲೋ' 2 ದಿನಗಳವರೆಗೆ ಸ್ಥಗಿತ: ಯುವ ರೈತನ ಸಾವಿಗೆ ಪೊಲೀಸ್‌ ಫೈರಿಂಗ್ ಕಾರಣ?

‘ದೆಹಲಿ ಚಲೋ’ 2 ದಿನಗಳವರೆಗೆ ಸ್ಥಗಿತ: ಯುವ ರೈತನ ಸಾವಿಗೆ ಪೊಲೀಸ್‌ ಫೈರಿಂಗ್ ಕಾರಣ?

- Advertisement -
- Advertisement -

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ದೆಹಲಿ ಚಲೋವನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ ಎಂದು  ರೈತ ಸಂಘಟನೆಗಳು ತಿಳಿಸಿದೆ.

ಹರ್ಯಾಣದ ಖಾನೌರಿ ಗಡಿಯಲ್ಲಿ ನಿನ್ನೆ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರೊಂದಿಗೆ ಘರ್ಷಣೆಯಲ್ಲಿ ಓರ್ವ ಯುವ ರೈತ ಸಾವನ್ನಪ್ಪಿದ್ದರು. ಅಖಿಲ ಭಾರತ ಕಿಸಾನ್ ಸಭಾ, 23 ವರ್ಷದ ಶುಭಕರನ್ ಸಿಂಗ್ ಪೊಲೀಸ್‌  ಫೈರಿಂಗ್‌ನಲ್ಲಿ ಬುಲೆಟ್‌ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇದನ್ನು ಹರ್ಯಾಣ ಪೊಲೀಸರು ನಿರಾಕರಿಸಿದ್ದಾರೆ. ಧರಣಿ ಸತ್ಯಾಗ್ರಹ ಮುಂದುವರಿಯಲಿದ್ದರೂ ರೈತರು ‘ದೆಹಲಿ ಚಲೋ’ ಮೆರವಣಿಗೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿದ್ದಾರೆ.

ವೈದ್ಯರ ಹೇಳಿಕೆ:

ಶುಭ್ ಕರಣ್ ಸಿಂಗ್ ಅವರನ್ನು ಕರೆದೊಯ್ಯಲಾದ ಪಟಿಯಾಲಾ ಆಸ್ಪತ್ರೆಯ ವೈದ್ಯರು, ಅವರಿಗೆ ಬುಲೆಟ್ ಗಾಯವಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಕುರಿತ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ.

ಖಾನೌರಿಯಿಂದ ನಮ್ಮ ಬಳಿಗೆ ಮೂವರು ರೋಗಿಗಳು ಬಂದಿದ್ದಾರೆ. ಅವರಲ್ಲಿ ಒಬ್ಬರು ಬರುವಾಗಲೇ ಮೃತಪಟ್ಟಿದ್ದಾರೆ, ಇನ್ನಿಬ್ಬರ ಆರೋಗ್ಯ ಸ್ಥಿರವಾಗಿದೆ ಮತ್ತು ಬುಲೆಟ್‌ನಿಂದ ಗಾಯಗೊಂಡಿದ್ದಾರೆ ಎಂದು ತೋರುತ್ತದೆ. ಆದರೆ ಅದನ್ನು ಖಚಿತಪಡಿಸಲು ಈಗ ಸಾಧ್ಯವಿಲ್ಲ ಎಂದು ಪಟಿಯಾಲದ ರಾಜೇಂದ್ರ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ರೇಖಿ ಹೇಳಿದ್ದಾರೆ.

ಮೃತ ವ್ಯಕ್ತಿಯ ತಲೆಯ ಮೇಲೆ ಬುಲೆಟ್ ಗಾಯವಾಗಿತ್ತು, ಆದರೆ ಗುಂಡಿನ ಗಾತ್ರದ ಕುರಿತು ಹೆಚ್ಚಿನ ವಿವರಗಳನ್ನು ಮರಣೋತ್ತರ ಪರೀಕ್ಷೆಯ ನಂತರವೇ ದೃಢೀಕರಿಸಬಹುದು ಎಂದು ವೈದ್ಯರು ದೃಢಪಡಿಸಿದ್ದಾರೆ.

ಎಂಎಸ್ಪಿ ಕುರಿತು ಕೇಂದ್ರದ 5 ವರ್ಷದ ಒಪ್ಪಂದವನ್ನು ರೈತರು ತಿರಸ್ಕರಿಸಿದ್ದರು. ಇದರ ಬೆನ್ನಲ್ಲೆ ದೆಹಲಿ ಚಲೋ ಪುನರಾರಂಭಿಸುವುದಾಗಿ ರೈತ ಮುಖಂಡರು ಹೇಳಿದ್ದರು. ಹರ್ಯಾಣ ಪೊಲೀಸರು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ಭೇದಿಸುವ ರೈತರ ಪ್ರಯತ್ನವನ್ನು ವಿಫಲಗೊಳಿಸಲು ಅಶ್ರುವಾಯು ಪ್ರಯೋಗ ಮಾಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಹರ್ಯಾಣ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ ಇಂದು ರೈತರ ಪ್ರತಿಭಟನೆಯಲ್ಲಿ ಯಾವುದೇ ರೈತ ಸಾವನ್ನಪ್ಪಿಲ್ಲ. ಇದು ಕೇವಲ ವದಂತಿಯಾಗಿದೆ. ಖಾನೌರಿ ಗಡಿಯಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ಪ್ರತಿಭಟನಾಕಾರ ಗಾಯಗೊಂಡಿರುವ ಬಗ್ಗೆ ಮಾಹಿತಿ ಇದೆ, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಯುವ ರೈತನ ಸಾವನ್ನು ಖಚಿತಪಡಿಸಿದ್ದಾರೆ. ಘಟನೆಯಿಂದ ನನಗೆ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ.

ಘಟನೆಯನ್ನು ಖಂಡಿಸಿದ ಸಂಯುಕ್ತ ಕಿಸಾನ್ ಮೋರ್ಚಾ;

ಪ್ರತಿಭಟನಾ ನಿರತ ಯುವಕರು ಮತ್ತು ರೈತರನ್ನು ದೇಶದ ಶತ್ರುಗಳಂತೆ ಪರಿಗಣಿಸುತ್ತಿರುವ ಮೋದಿ ಸರ್ಕಾರವನ್ನು ಎಐಕೆಎಂಎಸ್ ಖಂಡಿಸಿದೆ. ಅವರು ಉತ್ಪಾದಿಸುವ ಮತ್ತು ದೇಶದ ಆರ್ಥಿಕತೆಯ ತಮ್ಮ ಪಾಲನ್ನು ಮಾತ್ರ ಕೇಳುವ ಜನರ ಮೇಲೆ ಅವರು ಸಶಸ್ತ್ರ ದಾಳಿ ನಡೆಸಿದ್ದಾರೆ. ಸರ್ಕಾರ ಮತ್ತು ಅವರ ಆರ್‌ಎಸ್‌ಎಸ್, ಬಿಜೆಪಿ ಭಾರತೀಯ ರೈತರನ್ನು ಶೋಷಿಸಲು ಕಾರ್ಪೊರೇಟ್, ಎಂಎನ್‌ಸಿಗಳು ಮತ್ತು ವಿದೇಶಿ ಶಕ್ತಿಗಳ ಹಿತಾಸಕ್ತಿಗಳನ್ನು ಪೂರೈಸುತ್ತಿವೆ. ಈ ಹತ್ಯೆಯು ಮೋದಿ ಆಡಳಿತದ ಕ್ರೌರ್ಯವನ್ನು ಬಯಲು ಮಾಡುತ್ತಿದೆ, ಅದು ರೈತ ಸ್ನೇಹಿ ಎಂದು ಹೇಳಿಕೊಳ್ಳುತ್ತಿದೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣದ ಬಿಜೆಪಿ ಸರ್ಕಾರ ದೆಹಲಿಯತ್ತ ಸಾಗುತ್ತಿರುವ ಪ್ರತಿಭಟನಾ ನಿರತ ರೈತರನ್ನು ಶತ್ರು ಸೈನಿಕರಂತೆ ನಡೆಸಿಕೊಳ್ಳುತ್ತಿದೆ ಮತ್ತು ಯುದ್ಧ ನಡೆಸುತ್ತಿದೆ ಎಂದು ಹೇಳಿಕೊಂಡಿದೆ.

ಡಿಸೆಂಬರ್ 9, 2021ರಂದು ಎಸ್‌ಕೆಎಂ ಜೊತೆಗಿನ ಒಪ್ಪಂದವನ್ನು ಕಾರ್ಯಗತಗೊಳಿಸಲು ವಿಫಲವಾದ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರಕಾರ ಪ್ರಸ್ತುತ ಬಿಕ್ಕಟ್ಟಿಗೆ ಸಂಪೂರ್ಣ ಜವಾಬ್ದಾರರು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.

ಶುಭ್ ಕರಣ್ ಸಿಂಗ್

ಹರ್ಯಾಣದ ಖಾನೌರಿ ಗಡಿಯಲ್ಲಿ ನಿನ್ನೆ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರೊಂದಿಗೆ ಘರ್ಷಣೆಯ ವೇಳೆ ಮೃತ 23 ವರ್ಷದ ಶುಭ್ ಕರಣ್ ಸಿಂಗ್ ಬಟಿಂಡಾ ನಿವಾಸಿ. ಅವರು ಬಟಿಂಡಾ ಜಿಲ್ಲೆಯ ವಾಲೋ ಗ್ರಾಮದ ನಿವಾಸಿಗಳಾದ ಚರಂಜಿತ್ ಸಿಂಗ್ ಅವರ ಪುತ್ರರಾಗಿದ್ದಾರೆ. ಅವರ ಮೃತದೇಹವನ್ನು ರಾಜೇಂದ್ರ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಯುವ ರೈತ 2 ಎಕರೆ ಜಮೀನಿನ ಮಾಲೀಕ. ಅವರ ತಾಯಿ ನಿಧನರಾಗಿದ್ದರು.  ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ಅವರು ತನ್ನ ಅಜ್ಜಿ ಜೊತೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ: ರಾಮನಗರ: ವಕೀಲರ ಪ್ರತಿಭಟನೆ; ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...