Homeಮುಖಪುಟಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಟೀಕಿಸುವ ಹಾಡು ಹಾಡಿದ್ದಕ್ಕೆ ರ‍್ಯಾಪರ್​​ಗಳ ವಿರುದ್ದ ಎಫ್‌ಐಆರ್‌ ದಾಖಲು

ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಟೀಕಿಸುವ ಹಾಡು ಹಾಡಿದ್ದಕ್ಕೆ ರ‍್ಯಾಪರ್​​ಗಳ ವಿರುದ್ದ ಎಫ್‌ಐಆರ್‌ ದಾಖಲು

- Advertisement -
- Advertisement -

ಬಿಜೆಪಿ-ಶಿವಸೇನೆ ನೇತೃತ್ವದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಟೀಕಿಸುವ ಹಾಡು ಹಾಡಿದ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ರ‍್ಯಾಪರ್​​ಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇಬ್ಬರು ರ‍್ಯಾಪರ್​​ಗಳ ಮೇಲೆ ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಲಾಗಿದ್ದು, ವಿಚಾರಣೆಗೂ ಒಳಪಡಿಸಲಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದಲ್ಲಿ ಬುಧವಾರ ರ‍್ಯಾಪರ್​​ ರಾಜ್ ಮುಂಗ್ಸೆ ವಿರುದ್ಧ ಥಾಣೆ ಜಿಲ್ಲೆಯ ಅಂಬರನಾಥ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರ‍್ಯಾಪರ್​​ ರಾಜ್ ಮುಂಗ್ಸೆ ತಮ್ಮ ಹಾಡಿನಲ್ಲಿ ಯಾರ ಹೆಸರನ್ನೂ ಬಳಸದೆ ಬಳಸದೇ ಸರ್ಕಾರವನ್ನು ಟೀಕಿಸಿದ್ದರು ಎನ್ನಲಾಗಿದೆ.

ಶುಕ್ರವಾರ ಮುಂಬೈನ ವಡಾಲಾ ಪ್ರದೇಶದ ಮತ್ತೋರ್ವ ರ‍್ಯಾಪರ್ ಉಮೇಶ್ ಖಾಡೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪರಾಧ ಗುಪ್ತಚರ ಘಟಕದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರ‍್ಯಾಪರ್ ಉಮೇಶ್ ಖಾಡೆ ಅವರು ”ಭೋಂಗ್ಲಿ ಕೇಲಿ ಜನತಾ” (ನೀವು ನಾಗರಿಕರನ್ನು ಬೆತ್ತಲೆಯಾಗಿಸಿದ್ದೀರಿ) ಎಂಬ ಹಾಡನ್ನು ಹಾಡಿದ್ದು, ಇದನ್ನು ತಮ್ಮ ಶಂಭೋ ಎಂಬ ಖಾತೆಯ ಹೆಸರನ್ನು ಹೊಂದಿರುವ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು. ಇದು ರಾಜಕಾರಣಿಗಳ ಸ್ವಾರ್ಥ ಮತ್ತು ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಒಳಗೊಂಡಿದೆ. ಈ ಹಾಡು ವೈರಲ್ ಆಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ; ಅಮಾನತುಗೊಂಡ ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್

ಉಪ ಪೊಲೀಸ್ ಕಮಿಷನರ್ (ಬಂದರು ವಲಯ) ಸಂಜಯ್ ಲಾಟ್ಕರ್ ಮಿಡ್ ಡೇ ಅವರು ಖಾಡೆ ಅವರನ್ನು ಗುರುವಾರ ವಿಚಾರಣೆಗೆ ಕರೆಯಲಾಯಿತು. ಆನಂತರ ಅವರನ್ನು ಹೋಗಲು ಅನುಮತಿಸಲಾಗಿದೆ ಬಂಧಿಸಿಲ್ಲ ಎಂದು ಶನಿವಾರ ಪಿಟಿಐ ವರದಿ ಮಾಡಿದೆ. ಅಗತ್ಯವಿದ್ದಾಗ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಖಾಡೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಲಾಟ್ಕರ್ ಹೇಳಿದರು.

ಕಲಾವಿದನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), 505(2) (ದ್ವೇಷ, ಅಥವಾ ಕೆಟ್ಟ ಇಚ್ಛೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಮಧ್ಯೆ ಖಾಡೆ ಅವರ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕ ಜಿತೇಂದ್ರ ಅವ್ಹಾದ್ ಆರೋಪಿಸಿದರು. ರಾಪರ್ ವಿರುದ್ಧದ ಪ್ರಕರಣವನ್ನು ಟೀಕಿಸಿದ ಅವರು, ಇದರಲ್ಲಿ ಯಾವುದೇ ಆಕ್ಷೇಪಾರ್ಹವಾದ ಸಾಹಿತ್ಯ ಇಲ್ಲ ಎಂದು ಹೇಳಿದರು.

”ಅವರು [ಖಾಡೆ] ಯಾರನ್ನೂ ಹೆಸರಿಸಿಲ್ಲ” ಎಂದು ಅವದ್ ಹೇಳಿದರು. ”ಅವರು ಈ ಹಾಡಿನಲ್ಲಿ ತಮ್ಮ ಬಡತನದ ಬಗ್ಗೆ ಹೇಳಿದ್ದಾರೆ. ಈಗ, ನಿಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸುವುದು ಅಪರಾಧವಾಗಿದ್ದರೆ, ತಮ್ಮ ತಲ್ಲಣವನ್ನು ಹೊರಹಾಕುವ ಪ್ರತಿಯೊಬ್ಬರನ್ನು ಬಂಧಿಸಿ” ಎಂದು ಜಿತೇಂದ್ರ ಅವ್ಹಾದ್ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...