Homeಮುಖಪುಟಮಹಾರಾಷ್ಟ್ರ: ಶಿವಸೇನೆ- ಬಿಜೆಪಿ ಸರ್ಕಾರ ಉರುಳಿದರೆ ಅಜಿತ್‌ ಪವಾರ್‌ ಎನ್‌ಸಿಪಿ ಒಡೆಯುವರೇ?

ಮಹಾರಾಷ್ಟ್ರ: ಶಿವಸೇನೆ- ಬಿಜೆಪಿ ಸರ್ಕಾರ ಉರುಳಿದರೆ ಅಜಿತ್‌ ಪವಾರ್‌ ಎನ್‌ಸಿಪಿ ಒಡೆಯುವರೇ?

- Advertisement -
- Advertisement -

ಕಳೆದ ವರ್ಷ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯನ್ನು ಇಬ್ಬಾಗವಾಗಿಸಿ ಬೇರೊಂದು ಸರ್ಕಾರ (ಶಿಂಧೆ ಬಣದ ಶಿವಸೇನೆ-ಬಿಜೆಪಿ) ರಚನೆಗೆ ಕಾರಣವಾಗಿದ್ದ ಶಿವಸೇನೆ ಶಾಸಕರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದಲ್ಲಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ನಾಯಕ ಅಜಿತ್ ಪವಾರ್‌ ಯೋಚಿಸಿದ್ದಾರೆಂಬ ಗುಮಾನಿಗಳು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಪಕ್ಷದಿಂದ ಹೊರನಡೆದು ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ. 2019ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಮುಂಜಾನೆ ಪ್ರಮಾಣ ವಚನ ಸ್ವೀಕರಿಸಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದ ಅಜಿತ್ ಪವಾರ್ ಮತ್ತೊಮ್ಮೆ ಅದೇ ರೀತಿಯ ಪ್ಲಾನ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಕನಾಥ್ ಶಿಂಧೆ ಮಾದರಿಯಲ್ಲಿಯೇ ಬಂಡಾಯವೆದ್ದು, ರಾಜಕೀಯ ವಲಯದಲ್ಲಿ ಬೇರೆ ರೀತಿಯ ಪರಿಣಾಮಗಳನ್ನು ಉಂಟು ಮಾಡುವುದಕ್ಕಾಗಿ ಎನ್‌ಸಿಪಿ ಶಾಸಕರೊಂದಿಗೆ ಅಜಿತ್‌ ಸಂಪರ್ಕದಲ್ಲಿದ್ದಾರೆಂದು ವರದಿಯಾಗಿದೆ.

“ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ” ಎಂದು ಅಜಿತ್ ಪವಾರ್ ನಿರಾಕರಿಸಿದ್ದರೂ, ಎನ್‌ಸಿಪಿ ಶಾಸಕರು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಶಿವಸೇನೆಯನ್ನು ವಿಭಜಿಸಿದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಸರ್ವೋಚ್ಚ ನ್ಯಾಯಾಲಯ ಅವಲೋಕಿಸುತ್ತಿರುವ ಅನೇಕ ಸಂಗತಿಗಳು ಮಹಾರಾಷ್ಟ್ರದಲ್ಲಿನ ಆಡಳಿತರೂಢ ಮೈತ್ರಿಕೂಟದಲ್ಲಿ ಆತಂಕ ತಂದಿವೆ ಎನ್ನಲಾಗುತ್ತಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ನ್ಯಾಯಮೂರ್ತಿ ಎಂ ಆರ್ ಷಾ ಅವರು ಮೇ 15ರಂದು ನಿವೃತ್ತಿಯಾಗಲಿದ್ದಾರೆ. ಅದಕ್ಕೂ ಮೊದಲು ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯದಿಂದ ಹೊರಬೀಳುವ ಸಾಧ್ಯತೆಯಿದೆ.

ಆಡಳಿತಾರೂಢ ಮೈತ್ರಿಕೂಟಕ್ಕೆ ತೀರ್ಪು ಪ್ರತಿಕೂಲವಾಗಿಯಾದರೂ ಇರಬಹುದು ಅಥವಾ ಅನುಕೂಲವಾದರೂ ಆಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಅಜಿತ್ ಪವಾರ್ ಅವರ ದಂಗೆ ಯತ್ನ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ನಡೆಸಿರುವ ಪ್ಲಾನ್ ಬಿ ಎನ್ನಲಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿಯು ಅಜಿತ್ ಪವಾರ್ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಶರದ್ ಪವಾರ್ ಅವರು ತಮ್ಮ ಸೋದರಳಿಯನ ಯೋಜನೆಗಳ ಬಗ್ಗೆ ತಿಳಿದಿದ್ದಾರೆ ಹಾಗೂ ಒಗ್ಗಟ್ಟು ಕಾಪಾಡಿಕೊಳ್ಳಲು ಯೋಚಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಅಜಿತ್ ಪವಾರ್ ಅವರ ಇತ್ತೀಚಿನ ನಡೆಗೂ ಮತ್ತು ಅದಾನಿ ಗ್ರೂಪ್‌ ವಿರುದ್ಧ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಶರದ್ ಪವಾರ್ ವಿರೋಧಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿರಿ: ಹಿಂಡೆನ್‌ಬರ್ಗ್ ವರದಿಯು ಅದಾನಿ ಗ್ರೂಪ್‌ ಮೇಲಿನ ಉದ್ದೇಶಿತ ದಾಳಿಯಾಗಿದೆ: ಶರದ್ ಪವಾರ್‌

ಅಜಿತ್ ಅವರ ಕ್ರಮಗಳ ಹಿಂದೆ ವರಿಷ್ಠರ ಆಶೀರ್ವಾದ ಇರಬಹುದು ಎಂಬ ವರದಿಗಳನ್ನು ಮೂಲಗಳು ತಳ್ಳಿಹಾಕಿವೆ. ಶರದ್ ಪವಾರ್ ಅವರು ಬಿಜೆಪಿಯೊಂದಿಗೆ ತೀವ್ರ ವಿರೋಧವನ್ನು ಹೊಂದಿದ್ದಾರೆ ಎಂದು ಹೇಳುತ್ತಿವೆ.

ಜಂಟಿ ಸಂಸದೀಯ ಸಮಿತಿಯ ಕುರಿತು ಶರದ್ ಪವಾರ್ ಅವರು ಹೇಳಿಕೆ ನೀಡಿದ ನಂತರ ಅಜಿತ್ ಪವಾರ್ ಅಜ್ಞಾತವಾಗಿ ವ್ಯವಹರಿಸುತ್ತಿರುವುದು ಒಂದು ರೀತಿಯ ರಾಜಕೀಯ ವದಂತಿಗಳಿಗೆ ಅವಕಾಶ ನೀಡಿದೆ. ಪಕ್ಷದಲ್ಲಿ ಒಡಕು ಮೂಡುವುದನ್ನು ತಪ್ಪಿಸುವ ಸಲುವಾಗಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಎನ್‌ಸಿಪಿ ಪಕ್ಷದಲ್ಲಿ ಕೆಲವು ಬದಲಾವಣೆಗಳನ್ನು ಶೀಘ್ರದಲ್ಲೇ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...