Homeರಾಷ್ಟ್ರೀಯದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ‘ಇಂಡಿಗೋ’ ವಿಮಾನದಲ್ಲಿ ಬೆಂಕಿ!

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ‘ಇಂಡಿಗೋ’ ವಿಮಾನದಲ್ಲಿ ಬೆಂಕಿ!

ಅಘಾತಕಾರಿ ಘಟನೆಯ ಬಗ್ಗೆ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ

- Advertisement -
- Advertisement -

ಟೇಕ್ ಆಫ್ ಸಮಯದಲ್ಲಿ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದ ರೆಕ್ಕೆಗಳಿಂದ ಬೆಂಕಿ ಕಿಡಿಗಳು ಕಾಣಿಸಿಕೊಂಡ ನಂತರ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವ ಘಟನೆ ಶುಕ್ರವಾರ ನಡೆದಿದೆ.

ಇಂಡಿಗೋ ವಿಮಾನ 6E-2131 ರ ವಿಮಾನದ ರೆಕ್ಕೆಯಲ್ಲಿ ಬೆಂಕಿ ಕಿಡಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಮತ್ತು ಎಲ್ಲಾ 177 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ಹೇಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಘಟನೆಯ ವಿಡಿಯೋವನ್ನು ಪ್ರಿಯಾಂಕಾ ಕುಮಾರ್ ಎಂಬ ಪ್ರಯಾಣಿಕ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ದೆಹಲಿ ರನ್‌ವೇಯಲ್ಲಿ ಭಯಾನಕ ಅನುಭವ! ಇದು ಟೇಕ್-ಆಫ್ ವೀಡಿಯೊ ಆಗಿರಬೇಕು ಆದರೆ ಇದು ಸಂಭವಿಸಿದೆ” ಎಂದು ಅವರು ತಮ್ಮ ಟ್ವಿಟರ್ ವೀಡಿಯೊದಲ್ಲಿ ಹೇಳಿದ್ದಾರೆ. ವಿಡಿಯೊದಲ್ಲಿ ವಿಮಾನದ ರೆಕ್ಕೆಗಳ ಕೆಳಗೆ ಕಿಡಿಗಳು ಬರುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಕೃತಿಚೌರ್ಯ ಆರೋಪ: ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿಗೆ ಕೇರಳ ನ್ಯಾಯಾಲಯ ತಡೆಯಾಜ್ಞೆ

“22.08 ಗಂಟೆಗೆ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಿಯಂತ್ರಣ ಕೊಠಡಿಯಿಂದ, ದೆಹಲಿ-ಬೆಂಗಳೂರು ಪ್ರಯಾಣಿಸುತ್ತಿದ್ದ 6E 2131 ವಿಮಾನದ ಇಂಜಿನ್‌ನಲ್ಲಿ ಬೆಂಕಿಯ ಸಮಸ್ಯೆಯ ಕುರಿತು ಕರೆ ಬಂದಿದೆ” ಎಂದು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ಹೇಳಿವೆ. ವಿಮಾನದಲ್ಲಿ 177 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಇದ್ದರು ಎಂದು ಅವರು ಹೇಳಿದ್ದು, ವಿಮಾನವು ರನ್‌ವೇಯಲ್ಲಿ ಟೇಕ್-ಆಫ್‌ ಮಾಡುತ್ತಿತ್ತು ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸುವಂತೆ ಒಕ್ಕೂಟ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ಆದೇಶಿಸಿದೆ.

ಘಟನೆ ನಡೆದ ತಕ್ಷಣ, ಇಂಡಿಗೋ ಏರ್‌ಲೈನ್ಸ್ ಪ್ರೆಸ್ಸರ್ ಹೊರಡಿಸಿದ್ದು,“ದೆಹಲಿಯಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿರುವ ವಿಮಾನ 6E2131 ಟೇಕ್-ಆಫ್ ಮಾಡುತ್ತಿದ್ದಾಗ ತಾಂತ್ರಿಕ ದೋಷ ಉಂಟಾಗಿದೆ. ತಕ್ಷಣವೆ ಪೈಲಟ್ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಿದರು ಮತ್ತು ವಿಮಾನವು ಹಿಂತಿರುಗಿತು” ಎಂದು ಹೇಳಿದೆ.

“ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ” ಎಂದು ಅದು ಹೇಳಿದೆ.

ಇದನ್ನೂ ಓದಿ: ಪತ್ರಕರ್ತರಿಗೆ ಲಂಚ ಪ್ರಕರಣ: ಬೊಮ್ಮಾಯಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಜುಲೈನಲ್ಲಿ, ಮುಂಬೈನಿಂದ ಲೇಹ್‌ಗೆ ತೆರಳುತ್ತಿದ್ದ ಗೋ ಫಸ್ಟ್ (ಗೋಏರ್) ವಿಮಾನದ ಎಂಜಿನ್‌ನಲ್ಲಿ ಉಂಟಾದ ದೋಷದಿಂದಾಗಿ ದೆಹಲಿಗೆ ವಾಪಾಸಾಗಿತ್ತು. ಮತ್ತೊಂದು ಘಟನೆ ಕೂಡಾ ಅದೇ ಏರ್‌ಲೈನ್‌ನಲ್ಲಿ ನಡೆದಿದ್ದು, ಶ್ರೀನಗರರಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ತೊಂದರೆ ಉಂಟಾದ ನಂತರ ವಾಪಾಸಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...