Homeಮುಖಪುಟಟಿಎಸ್‌ಆರ್‌ಟಿಸಿ: ಸಂಜೆ 7: 30 ರ ನಂತರ ಮಹಿಳೆಯರು ಎಲ್ಲಾದರೂ ಬಸ್ಸು ಏರಬಹುದು!

ಟಿಎಸ್‌ಆರ್‌ಟಿಸಿ: ಸಂಜೆ 7: 30 ರ ನಂತರ ಮಹಿಳೆಯರು ಎಲ್ಲಾದರೂ ಬಸ್ಸು ಏರಬಹುದು!

- Advertisement -
- Advertisement -

ರಾತ್ರಿಯ ಸಮಯದಲ್ಲಿ ಮಹಿಳಾ ಸುರಕ್ಷತೆಗಾಗಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ಹೊಸ ಉಪಕ್ರಮವನ್ನು ಜಾರಿಗೆ ತಂದಿದೆ. ಹೈದರಾಬಾದ್‌‌ ನಗರದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಟಿಎಸ್‌ಆರ್‌ಟಿಸಿ ಎಲ್ಲಾ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಸಂಜೆ 7:30 ರ ನಂತರ ಮಹಿಳೆಯರ ಕೋರಿಕೆಯ ಮೇರೆಗೆ ಎಲ್ಲಿಯಾದರೂ ಬಸ್ ನಿಲ್ಲಿಸುವಂತೆ ಆದೇಶ ಹೊರಡಿಸಿದೆ.

ಸಂಜೆ 7:30 ರ ನಂತರ ಮಹಿಳೆಯರು ಎಲ್ಲಿ ಬೇಕಾದರೂ ಬಸ್ ಹತ್ತಬಹುದು ಮತ್ತು ಮಾರ್ಗದ ಮಧ್ಯೆ ಎಲ್ಲಿ ಬೇಕಾದರೂ ಇಳಿಯಬಹುದಾಗಿದೆ. ಇಳಿಯಲು ಮತ್ತು ಹತ್ತಲು ಅವರಿಗೆ ಬಸ್ ನಿಲ್ದಾಣಗಳ ಅಗತ್ಯವಿಲ್ಲ. ಪ್ರಸ್ತುತ ಈ ಉಪಕ್ರಮವನ್ನು ಗ್ರೇಟರ್ ಹೈದರಾಬಾದ್ ವಲಯದಲ್ಲಿ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಮತ್ತು ರಾತ್ರಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ಬಸ್ ಪ್ರಯಾಣವನ್ನು ಒದಗಿಸುವ ಕ್ರಮಗಳ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಸ್ ಚಾಲಕ ಅಥವಾ ಕಂಡಕ್ಟರ್ ನಿಯಮಗಳನ್ನು ಪಾಲಿಸದಿದ್ದರೆ, ಪ್ರಯಾಣಿಕರು ಡಿಪೋ ವ್ಯವಸ್ಥಾಪಕರನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ.

ಈ ಹಿನ್ನಲೆಯಲ್ಲಿ ಟಿಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರ ಸಂಪರ್ಕ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕಿರಿಯ ಶಾಲೆಯಲ್ಲಿ ‘ಬಿಸಿಎ’ ಪದವಿ! – ಅಮಿತ್ ಷಾ ಸಹಾಯಕ ಸಚಿವನ ಶೈಕ್ಷಣಿಕ ಅರ್ಹತೆ ವಿವಾದ

ಇದನ್ನೂ ಓದಿ: ಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...