Homeಕರ್ನಾಟಕಕೃತಿಚೌರ್ಯ ಆರೋಪ: ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿಗೆ ಕೇರಳ ನ್ಯಾಯಾಲಯ ತಡೆಯಾಜ್ಞೆ

ಕೃತಿಚೌರ್ಯ ಆರೋಪ: ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿಗೆ ಕೇರಳ ನ್ಯಾಯಾಲಯ ತಡೆಯಾಜ್ಞೆ

- Advertisement -
- Advertisement -

ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿನ ವಿರುದ್ಧ ಕೇರಳ ಮೂಲದ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ದಾಖಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಾಲಯ, ಹಾಡನ್ನು ಪ್ಲೇ ಮಾಡದಂತೆ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್‌ಗಳಿಗೆ ತಡೆಯಾಜ್ಞೆ ನೀಡಿದೆ.

ಕಾಂತಾರ ಚಿತ್ರದ ವರಾಹ ರೂಪಂ ಹಾಡು ಮತ್ತು 2015 ರಲ್ಲಿ ಬಿಡುಗಡೆಯಾದ ಥಕ್ಕುಡಂ ಬ್ರಿಡ್ಜ್‌‌ನ ‘ನವರಸಂ’ ಗೀತೆ ನಡುವೆ ‘ಸಾಮ್ಯತೆ’ ಇದೆ ಎಂದು ಆರೋಪಿಸಲಾಗಿದೆ. ಕೇರಳದ ನ್ಯಾಯಾಲಯ ನೀಡಿದ ತಡೆಯಾಜ್ಞೆ ಬಗ್ಗೆ ಇನ್ಸ್‌ಟ್ರಾಗ್ರಾಂ‌‌ನಲ್ಲಿ ಹಂಚಿಕೊಂಡಿದ್ದು,“ಎಲ್ಲರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೋಝಿಕ್ಕೋ‌ಡ್‌ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು, ಅಮೇಜಾನ್, ಯೂಟ್ಯೂಬ್‌, ಸ್ಪೋಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರರು ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಥೈಕ್ಕುಡಂ ಬ್ರಿಡ್ಜ್‌ನ ಅನುಮತಿಯಿಲ್ಲದೆ ನುಡಿಸದಂತೆ ತಡೆಯಾಜ್ಞೆ ನೀಡಿದ್ದಾರೆ ಎಂದು ಇನ್ಸ್‌ಗ್ರಾಮ್‌ ಪೋಸ್ಟ್‌ನಲ್ಲಿ ಥೈಕ್ಕುಡಂ ಬ್ರಿಡ್ಜ್‌‌ ಬರೆದಿದೆ.

 

View this post on Instagram

 

A post shared by Thaikkudam Bridge (@thaikkudambridge)

ಇದನ್ನ ಓದಿ: ಕಾಂತಾರ: ಟ್ಯೂನ್‌ ಕದ್ದ ಆರೋಪ; ಕಾನೂನು ಕ್ರಮಕ್ಕೆ ಮುಂದಾದ ಕೇರಳ ಸಂಸ್ಥೆ

ಥೈಕ್ಕುಡಂ ಬ್ರಿಡ್ಜ್‌ ಸಂಗೀತದ ಪರವಾಗಿ ಭಾರತದ ಸುಪ್ರೀಂ ಕೋರ್ಟ್ ವಕೀಲರಾದ ಸತೀಶ್ ಮೂರ್ತಿ ಅವರು ತಡೆಯಾಜ್ಞೆಗಾಗಿ ಮೊಕದ್ದಮೆ ಹೂಡಿದ್ದಾರೆ ಎಂದು ಇನ್ಸ್‌ಟ್ರಾಗ್ರಾಂ ಪೋಸ್ಟ್ ಹೇಳಿದೆ. ಇನ್ನು ಮುಂದಕ್ಕೆ ವರಾಹ ರೂಪಂ ಹಾಡನ್ನು ಪ್ಲೇ ಮಾಡಬೇಕಾದರೆ ಕಾಂತಾರ ಚಿತ್ರ ತಂಡವೂ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.

‘ಕಾಂತಾರ’ ಚಿತ್ರತಂಡದಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ‘ಥೈಕ್ಕುಡಂ ಬ್ರಿಡ್ಜ್’ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು. ಈ ಬಗ್ಗೆ ಬರೆದುಕೊಂಡಿದ್ದ ಅದು,“‘ಥೈಕ್ಕುಡಂ ಬ್ರಿಡ್ಜ್’ಗೂ ‘ಕಾಂತಾರ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ನಮ್ಮ ಕೇಳುಗರು ತಿಳಿದುಕೊಳ್ಳಬೇಕು. ನಮ್ಮ ‘ನವರಸಂ’ ಮತ್ತು ಕಾಂತಾರದ ‘ವರಾಹ ರೂಪಂ’ ಹಾಡಿನ ನಡುವೆ ಸ್ಪಷ್ಟ ಹೋಲಿಕೆಗಳು ಕಂಡು ಬಂದಿವೆ. ಆದ್ದರಿಂದ ಇದು ಹಕ್ಕುಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗಿದೆ” ಎಂದು ತಿಳಿಸಿತ್ತು.

“ನಮ್ಮ ದೃಷ್ಟಿಕೋದಲ್ಲಿ ‘ಸ್ಫೂರ್ತಿ’ ಮತ್ತು ‘ಚೌರ್ಯ’ ಎರಡೂ ವಿಭಿನ್ನ ಮತ್ತು ನಿರ್ವಿವಾದ. ಆದ್ದರಿಂದ ನಾವು ಇದಕ್ಕೆ ಕಾರಣವಾದ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಯಸುತ್ತೇವೆ. ಈ ವಿಷಯದಲ್ಲಿ ನಾವು ನಮ್ಮ ಕೇಳುಗರ ಬೆಂಬಲವನ್ನು ಅಪೇಕ್ಷಿಸುತ್ತೇವೆ. ಈ ಬಗ್ಗೆ ಪ್ರಚಾರ ಮಾಡಲು ನಿಮ್ಮನ್ನು ನಾವು ಕೋರುತ್ತೇವೆ. ಅಲ್ಲದೆ, ಸಂಗೀತದ ಹಕ್ಕುಸ್ವಾಮ್ಯವನ್ನು ರಕ್ಷಿಸುವ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಹ ಕಲಾವಿದರನ್ನು ನಾವು ವಿನಂತಿಸುತ್ತೇವೆ” ಎಂದು ಥೈಕ್ಕುಡಂ ಬ್ರಿಡ್ಜ್ ತಿಳಿಸಿತ್ತು.

ಇದನ್ನ ಓದಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ’ ಸಿನಿಮಾ ಅಭೂತಪೂರ್ವ ಯಶಸ್ಸು ಪಡೆದಿದ್ದು, ಅಜನೀಶ್ ಬಿ.ಲೋಕನಾಥ್ ಸಂಗೀತ ನಿರ್ದೇಶಿಸಿದ್ದಾರೆ. ‘ವರಹ ರೂಪಂ’ ಹಾಗೂ ‘ಸಿಂಗಾರ ಸಿರಿಯೇ’ ಹಾಡಿನ ಟ್ಯೂನ್‌ಗಳ ಮೇಲೆ ಕೃತಿಚೌರ್ಯದ ಆಕ್ಷೇಪಗಳನ್ನು ಹಲವಾರು ಪ್ರೇಕ್ಷಕರು ಈ ಹಿಂದೆಯೆ ಮಾಡಿದ್ದರು. ಅಲ್ಲದೆ ಚಿತ್ರದ ‘ಸಿಂಗಾರ ಸಿರಿಯೇ’ ಹಾಡಿಗೂ ‘ಅಜಯ್‌- ಅತುಲ್‌’ ಅವರ ‘ಅಪ್ಸರ ಆಲಿ’ ಹಾಡಿಗೂ ಸಾಮ್ಯತೆಯನ್ನು ಪ್ರೇಕ್ಷಕರು ಗುರುತಿಸಿದ್ದರು.

ಈ ಕುರಿತು ಇತ್ತೀಚೆಗೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ಸಂಗೀತ ನಿರ್ದೇಶಕ ಅಜನೀಶ್‌ ಬಿ.ಲೋಕನಾಥ್, “ವರಹ ರೂಪಂ ಹಾಡು ರ್‍ಯಾಕ್‌ ಮ್ಯೂಸಿಕ್ ಶೈಲಿಯದ್ದಾಗಿದೆ. ಆದರೆ ರಾಗ ಸಂಯೋಜನೆ ಸಂಪೂರ್ಣ ಭಿನ್ನವಾಗಿದೆ. ಶೈಲಿ ಹಾಗೂ ರಾಗದ ಛಾಯೆ ಒಂದೇ ರೀತಿ ಇರುವುದರಿಂದ ‘ವರಹಾ ರೂಪಂ’ಗೂ ‘ನವರಸಂ’ಗೂ ಸಾಮ್ಯತೆ ಇದೆ ಅನಿಸುತ್ತದೆ. ಖಂಡಿತವಾಗಿಯೂ ನವರಸಂನಿಂದ ಸ್ಫೂರ್ತಿ ಇದೆ. ರಾಗ ಛಾಯೆ ಹಾಗೂ ಶೈಲಿ ಒಂದೇ ಆಗಿದ್ದರಿಂದ ಹೋಲಿಕೆ ಬರುತ್ತದೆ” ಎಂದಿದ್ದರು.

“ಸಿಂಗಾರ ಸಿರಿಯೇ ಹಾಡಿಗೂ ಅಪ್ಸರ ಅಲಿ ಹಾಡಿಗೂ ಸಂಬಂಧವಿಲ್ಲ. ಕೊರಸ್ ಬರುವ ಕಡೆ ಸಾಮ್ಯತೆ ಇದೆ ಎನಿಸುತ್ತದೆ” ಎಂದು ಸ್ಪಷ್ಪಪಡಿಸಿದ್ದರು.

ಇದನ್ನ ಓದಿ: ಕಾಂತಾರ ಮತ್ತು ಭಾರತದ ಪ್ರಜೆಗಳಾದ ನಾವು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...