Homeಕರ್ನಾಟಕಅರಸು ಪ್ರಶಸ್ತಿ ನಿಲ್ಲಿಸಿದ್ದೇಕೆ? ಬಿ.ಚಂದ್ರೇಗೌಡರ ಪ್ರಶ್ನೆ..

ಅರಸು ಪ್ರಶಸ್ತಿ ನಿಲ್ಲಿಸಿದ್ದೇಕೆ? ಬಿ.ಚಂದ್ರೇಗೌಡರ ಪ್ರಶ್ನೆ..

- Advertisement -
- Advertisement -

ಪ್ರತಿ ವರ್ಷ ರಾಜ್ಯ ಸರ್ಕಾರ ದೇವರಾಜ ಅರಸು ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಯನ್ನು ಈ ಬಾರಿಯಿಂದ ರಾಜ್ಯ ಬಿಜೆಪಿ ಸರಕಾರ ನಿಲ್ಲಿಸಿಬಿಟ್ಟಿದೆ. ಇದಕ್ಕಾಗಿ ಅದು ಕೊಡುತ್ತಿರುವ ಕಾರಣ, ರಾಜ್ಯದಲ್ಲಿ ನೆರೆಹಾವಳಿಯಿಂದಾಗಿ ಪ್ರಶಸ್ತಿ ಕೊಡಲು ಸರ್ಕಾರದ ಬಳಿ ಹಣವಿಲ್ಲವಂತೆ. ಅದು ಎಷ್ಟು? ಕೇವಲ ಐದು ಲಕ್ಷ…!

ಆದರೆ ನಿಜವಾಗಿ ಇದು ಅಪ್ಪಟ ಸುಳ್ಳು. ಏಕೆಂದರೆ ಈ ಸರಕಾರದ ಕೆಲವು ನಿರ್ಧಾರಗಳು ಅದೆಲ್ಲಿಂದಲೋ ಬರುತ್ತವೆ. ಅವು ಅಧಿಕಾರಿಗಳ ಮುಖಾಂತರ ಜಾರಿಯಾಗುತ್ತವೆ. ಅರಸು ಪ್ರಶಸ್ತಿ ವಿಷಯದಲ್ಲೂ ಕೂಡ ಜನಪ್ರತಿನಿಧಿಗಳ ಬದಲು ಅಧಿಕಾರಿಗಳೇ ಪ್ರಶಸ್ತಿ ನೀಡಬಾರದೆಂದು ನಮಗೆ ಮೌಖಿಕ ಸಂದೇಶವಿದೆ ಎನ್ನುತ್ತಾರೆ. ಯಾರಿಂದ ಎಂದರೆ ಬಾಯಿಬಿಡುವುದಿಲ್ಲ. ನಿಜಕ್ಕೂ ಸಾಮಾಜಿಕ ಕಳಕಳಿ ಇದ್ದ ಅಧಿಕಾರಿಗಳು ಕೂಡ ಅಸಹಾಯಕರಾಗಿ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ: ವರ್ಷ ಕಳೆದರೂ ದೇವರಾಜ ಅರಸು ಪ್ರಶಸ್ತಿ ಪ್ರಕಟಿಸದ ಬಿಜೆಪಿ ಸರ್ಕಾರ : ಏನಿರಬಹುದು ಹುನ್ನಾರ?

ಇದು ಹೇಳಿಕೇಳಿ ಬಿಜೆಪಿ ಸರಕಾರ. ಸಾಮಾಜಿಕ ಪರಿವರ್ತನೆಯ ವಿರೋಧಿ ಆದ್ದರಿಂದ ಸ್ಥಗಿತಗೊಂಡ ಸಮಾಜವನ್ನ ಸಾಮಾಜಿಕ ನ್ಯಾಯದಿಂದ ಮುಂದೆ ನೂಕಿದ ಅರಸು ಕಂಡರೆ ಬಿಜೆಪಿಗಳಿಗಾಗುವುದಿಲ್ಲ. ಆದ್ದರಿಂದ ಒಂದು ವ್ಯವಸ್ಥಿತ ಸಂಚಿನಿಂದ ಅರಸು ಪ್ರಶಸ್ತಿಯನ್ನು ಆಯ್ಕೆಮಾಡಲು ನೇಮಕವಾಗುವ ಸಮಿತಿಯನ್ನೇ ರಚಿಸಿಲ್ಲ. ಜೊತೆಗೆ ಆ ಪ್ರಸ್ತಾಪವೇ ನಡೆಯದಂತೆ ನೋಡಿಕೊಂಡಿದೆ.

ಹಾಗೆ ನೋಡಿದರೆ ಈ ಸರಕಾರದ ಅಜೆಂಡಾಗಳು ನಿಗೂಢವಾಗಿದೆ. ಅದನ್ನ ಜಾರಿ ಮಾಡುವುದರಲ್ಲಿ ಅದು ಸದ್ದುಗದ್ದಲವಿಲ್ಲದೆ ನಡೆದುಕೊಳ್ಳುತ್ತದೆ. ಅದಕ್ಕೊಂದು ಉದಾಹರಣೆ ಎಂದರೆ ಈ ಅರಸು ಪ್ರಶಸ್ತಿ. ಅದಕ್ಕಾಗಿ ಕೊಡಲು ಸರಕಾರದಲ್ಲಿ ಐದು ಲಕ್ಷ ಹಣವಿಲ್ಲ ಎನ್ನುವುದಾದರೆ, ರಾಜ್ಯೋತ್ಸವ ಪ್ರಶಸ್ತಿಯಂತೆ ಈ ಪ್ರಶಸ್ತಿಯ ಮೊತ್ತವನ್ನ ಸಹ ಒಂದು ಲಕ್ಷಕ್ಕೆ ಇಳಿಸಬಹುದಿತ್ತಲ್ಲವೇ? ಲಕ್ಷ ಕೋಟಿ ಬಜೆಟ್‌ ಮಂಡಿಸುವ ಸರ್ಕಾರದ ಬಳಿ ಒಂದು ಲಕ್ಷ ಹಣವಿಲ್ಲವೆಂದರೆ ಜನ ನಂಬುತ್ತಾರೆಯೇ? ದರಿದ್ರ ಸರಕಾರಕ್ಕೆ ಇವು ಅವಮಾನದ ಸಂಗತಿಗಳಾಗುವುದಿಲ್ಲ.

ಈ ಮೊದಲು ಎರಡು ಲಕ್ಷವಿದ್ದ ಪ್ರಶಸ್ತಿಯ ಬೆಲೆಯನ್ನ ಸಿದ್ದರಾಮಯ್ಯನವರ ಸರಕಾರ ಐದು ಲಕ್ಷಕ್ಕೆ ಏರಿಸಿತ್ತು. ಒಂದು ಸರಕಾರ ಪ್ರಶಸ್ತಿ ಮೊತ್ತ ಏರಿಸಿದರೆ ಮತ್ತೊಂದು ಸರಕಾರ ಆ ಮೊತ್ತವನ್ನ ಇಳಿಸಿದರೆ ಯಾರಿಗೂ ಅವಮಾನವಾಗುವುದಿಲ್ಲ. ನಮ್ಮ ನಡುವಿನ ಸಮಾಜ ಸುಧಾರಕರು ಹಣಕ್ಕಾಗಿ ಸೇವೆ ಮಾಡುವವರಲ್ಲ. ಆದರೆ ಬಿಜೆಪಿಯ ಉದ್ದೇಶವೇ ಅರಸುರವರನ್ನ ಜನಮನದಿಂದ ಮರೆಯಾಗಿಸುವುದು. ಅದಕ್ಕಾಗಿ ಈ ಸೇಡಿನ ಕ್ರಮ ಕೈಗೊಂಡಿದ್ದಾರೆ.

ಬಿಜೆಪಿಗಳು ಅರಸು ಪ್ರಶಸ್ತಿಯಂತಹ ವಿಷಯಗಳನ್ನ ತಣ್ಣಗೆ ಜಾರಿ ಮಾಡಿ ಪರಿಣಾಮ ನೋಡುತ್ತವೆ. ಪ್ರತಿಕ್ರಿಯೆ ಇಲ್ಲದಿದ್ದರೆ ಅದು ಮುಂದಿನ ವರ್ಷದಿಂದ ಮೂಲೆಗೆ ಬೀಳುವುದು ಗ್ಯಾರಂಟಿ. ಈಗಾಗಲೇ ಅಂಬೇಡ್ಕರ್ ಸಂವಿಧಾನ ರೂಪಿಸಿರಲಿಲ್ಲ, ಕ್ರೂಡೀಕರಿಸಿದರು ಎಂಬ ಸುದ್ದಿ ಮಾಡಿ ಅದರ ಪರಿಣಾಮ ಗ್ರಹಿಸತೊಡಗಿದ್ದಾರೆ. ಅಂಬೇಡ್ಕರ್ ವಿಷಯ ದಲಿತರಿಗೆ ಸಂಬಂಧಿಸಿದ್ದೆಂದು ಹಲವರು ಸುಮ್ಮನಿದ್ದಾರೆ. ಇದೇ ಬಿಜೆಪಿಗಳಿಗೆ ಸಂತಸದ ಸುದ್ದಿ.

ಇದನ್ನೂ ಓದಿ: ಸಂವಿಧಾನ ದಿನ: ಅಂಬೇಡ್ಕರ್‌ ಬದಲಿಗೆ ಶ್ಯಾಂ ಪ್ರಸಾದ್‌ ಮುಖರ್ಜಿ ಫೋಟೋ ಹಾಕಿದ್ದಕ್ಕೆ ಛೀಮಾರಿ, ನಂತರ ಬದಲಾವಣೆ.

ಆದರೆ ಅಂಬೇಡ್ಕರ್ ಕೆಣಕಿದ ಕಾರಣಕ್ಕೆ ನಾಡಿನ ಪ್ರಜ್ಞಾವಂತ ಸಮಾಜ ಕ್ರೋಧಗೊಂಡಿದೆ. ಪ್ರತಿಭಟನೆ ಮಾಡಿದವರು ಮಾತ್ರ ತಳಸಮುದಾಯದವರು. ಆದ್ದರಿಂದ ಅವರ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿ ನಿಲ್ಲಿಸಿದ್ದರ ಬಗ್ಗೆ ಎಲ್ಲೂ ಸೊಲ್ಲೆತ್ತಿಲ್ಲ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅರಸು ತರದ ಸಾಮಾಜಿಕ ಪರಿವರ್ತನೆಯ ಹರಿಕಾರ ಹಿಂದೆ ಬಂದಿಲ್ಲ. ಮುಂದೆ ಬರುವುದೂ ಅಸಂಭವ. ಆದ್ದರಿಂದ ಸತ್ತಂತಿರುವ ಫಲಾನುಭವಿಗಳು ಎಚ್ಚೆತ್ತು ತಮ್ಮ ದನಿ ಗುರುತಿಸಿಕೊಳ್ಳದಿದ್ದರೆ ಇಲ್ಲಿ ಗೋಳ್ವಾರ್ಕರ್ ಪ್ರಶಸ್ತಿ ಜಾರಿಗೆ ಬರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಹಿಂದ ವರ್ಗದ ನಾಯಕರಾಗಿದ್ದ ಅರಸುರವರ ಹೆಸರು ಚಾಲ್ತಿಯಲ್ಲಿರದಂತೆ ಮಾಡುವುದೇ ಮನುವಾದಿಗಳ ಹುನ್ನಾರ.

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...