Homeಚಳವಳಿಭಾರತದ ಮರೆತುಹೋದ ಮಹಿಳಾ ಸಾಧಕಿಯರಿವರು... : ಕೊನೆಯ ಕಂತು...

ಭಾರತದ ಮರೆತುಹೋದ ಮಹಿಳಾ ಸಾಧಕಿಯರಿವರು… : ಕೊನೆಯ ಕಂತು…

- Advertisement -
- Advertisement -

ಭಾರತದ ಸಂವಿಧಾನವನ್ನು 1949ರ ನವಂಬರ್ 26ರಂದು ಚುನಾಯಿತ ಸಂವಿಧಾನ ಸಭೆಯು ಅಂಗೀಕರಿಸಿತು. ಅದು ಜನವರಿ 26, 1950ರಲ್ಲಿ ಜಾರಿಗೆ ಬಂತು. ಸಂವಿಧಾನ ಸಭೆಯಲ್ಲಿ ಒಟ್ಟು 389 ಸದಸ್ಯರಿದ್ದರು. ಆದರೆ, ಸಂವಿಧಾನ ಸಭೆಯಲ್ಲಿದ್ದ ಆ ಕಾಲದ ಕೇವಲ 15 ಮಹಿಳೆಯರನ್ನು ನಾವು ಸಂಪೂರ್ಣ ಮರೆತುಬಿಟ್ಟಿದ್ದೇವೆ. ಅವರಲ್ಲಿ ಹತ್ತು ಮಂದಿಯ ಕಿರುಪರಿಚಯವನ್ನು ಮೊದಲ ಎರಡು ಭಾಗಗಳಲ್ಲಿ ನೀಡಲಾಗಿತ್ತು. ಈ ಮೂರನೆಯ ಭಾಗದಲ್ಲಿ ಇನ್ನೂ ಐವರು ಸಾಧಕಿಯರ ಪರಿಚಯ ನೀಡಲಾಗಿದೆ.

ಕೃಪೆ: ಫೆಮಿನಿಸಂ ಇನ್‌ ಇಂಡಿಯಾ

ಅನುವಾದ: ನಿಖಿಲ್ ಕೋಲ್ಪೆ

11. ರೇಣುಕಾ ರಾಯ್

ರೇಣುಕಾ ರಾಯ್ ಅವರು ಐಸಿಎಸ್ ಅಧಿಕಾರಿ ಸತೀಶ್ಚಂದ್ರ ರಾಯ್ ಮತ್ತು ಸಮಾಜ ಸೇವಕಿ ಹಾಗೂ ಆಲ್ ಇಂಡಿಯಾ ವುಮನ್ಸ್ ಕಾನ್ಫರೆನ್ಸ್ (ಎಐಡಬ್ಲ್ಯೂಸಿ) ಸದಸ್ಯೆಯಾಗಿದ್ದ ಚಾರುಲತಾ ಮುಖರ್ಜಿ ಅವರ ಮಗಳು. ಅವರು ಆ ಹೊತ್ತಿಗೇ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ  ಬಿಎ ಪದವಿ ಪಡೆದಿದ್ದರು.

ಚಿತ್ರಕೃಪೆ: ಇಂಡಿಯಾ ನೆಟ್‌ಝೋನ್

1934ರಲ್ಲಿ ಅವರು ಎಐಡಬ್ಲ್ಯೂಸಿಯ ಕಾನೂನು ಕಾರ್ಯದರ್ಶಿಯಾಗಿ ‘ಭಾರತದಲ್ಲಿ ಮಹಿಳೆಯರ ಕಾನೂನು ದೌರ್ಬಲ್ಯ: ತನಿಖಾ ಆಯೋಗಕ್ಕಾಗಿ ಒಂದು ಮನವಿ’ ಎಂಬ ದಾಖಲೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು. ಇದು ಶಾರದಾ ಮಸೂದೆಗೆ ಸಂಬಂಧಿಸಿದಂತೆ ಎಐಡಬ್ಲ್ಯೂಸಿಗೆ ಇದ್ದ ಅಸಮಾಧಾನವನ್ನು ಕ್ರೋಢೀಕರಿಸಿ, ಕಾನೂನಿಗೆ ಸಂಬಂಧಿಸಿ ಭಾರತೀಯ ಮಹಿಳೆಯರ ಸ್ಥಾನಮಾನ ಕುರಿತ ಹೋರಾಟಕ್ಕೆ ಅದರ ಬದ್ಧತೆಯನ್ನು ದೃಢಗೊಳಿಸಿತು. ರೇಣುಕಾ ಅವರು ಸಮಾನ ವೈಯಕ್ತಿಕ ಕಾನೂನಿಗಾಗಿ ವಾದಿಸಿದರು. ಭಾರತದಲ್ಲಿ ಮಹಿಳೆಯರ ಸ್ಥಾನಮಾನವು ಜಗತ್ತಿನಲ್ಲಿಯೇ ಅತ್ಯಂತ ತಾರತಮ್ಯದ್ದಾಗಿದೆ ಎಂಬುದು ಅವರ ವಾದವಾಗಿತ್ತು.

1943ರಿಂದ 1946ರ ತನಕ ಅವರು ಕೇಂದ್ರೀಯ ವಿಧಾನ ಸಭೆ (Central Legislative Assembly) ಮತ್ತು ತಾತ್ಕಾಲಿಕ ಸಂಸತ್ತಿನ ಸದಸ್ಯೆಯಾಗಿದ್ದರು. 1952-57ರಲ್ಲಿ ಅವರು ಪಶ್ಚಿಮ ಬಂಗಾಳದ ವಿಧಾನಸಭೆಯ ಸದಸ್ಯೆಯಾಗಿದ್ದರು ಮತ್ತು ಪರಿಹಾರ ಹಾಗೂ ಪುನರ್ವಸತಿ ಸಚಿವೆಯೂ ಆಗಿದ್ದರು. 1957ರಲ್ಲಿ ಮತ್ತು ಮತ್ತೆ 1962ರಲ್ಲಿ ಮಾಲ್ಡಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

12. ಸರೋಜಿನಿ ನಾಯ್ಡು
ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಮತ್ತು ರಾಜ್ಯಪಾಲೆಯಾಗಿ ನೇಮಕಗೊಂಡ ಮೊದಲ ಮಹಿಳೆ. ಕವಯಿತ್ರಿಯಾಗಿದ್ದ ಅವರನ್ನು ಜನಪ್ರಿಯವಾಗಿ ಭಾರತದ ಕೋಗಿಲೆ (ನೈಟಿಂಗೇಲ್ ಆಫ್ ಇಂಡಿಯಾ) ಎಂದು ಕರೆಯಲಾಗುತ್ತಿತ್ತು.

ಚಿತ್ರಕೃಪೆ: ಫೇಮಸ್‌ ಪೀಪಲ್‌

ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ, ನಂತರ ಕ್ಯಾಂಬ್ರಿಜ್‌ನ ಗರ್ಟನ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದ್ದರು. ಮಹಿಳೆಯರ ಮತದಾನದ ಹಕ್ಕುಗಳಿಗಾಗಿ ಇಂಗ್ಲೆಂಡ್‌ನಲ್ಲಿ ನಡೆದ ಹೋರಾಟದ ಅನುಭವ ಪಡೆದ ಅವರು, ಭಾರತಕ್ಕೆ ಹಿಂತಿರುಗಿದ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಪಾಲುಗೊಂಡರು.

1924ರಲ್ಲಿ ಅವರು ಆಫ್ರಿಕಾಕ್ಕೆ ಪ್ರವಾಸ ಕೈಗೊಂಡು ಅಲ್ಲಿನ ಭಾರತೀಯರ ಪರವಾಗಿ ಹೋರಾಡಿದರು. 1928-29ರಲ್ಲಿ ಅವರು ಉತ್ತರ ಅಮೆರಿಕಾ ಪ್ರವಾಸ ಕೈಗೊಂಡು ಕಾಂಗ್ರೆಸ್ ಚಳವಳಿಯ ಕುರಿತು ಉಪನ್ಯಾಸಗಳನ್ನು ನೀಡಿದರು. ಭಾರತದಕ್ಕೆ ಮರಳಿದ ಬಳಿಕ ಅವರ ಬ್ರಿಟಿಷ್ ವಿರೋಧಿ ನಿಲುವು ಹಲವು ಬಾರಿ ಜೈಲಿಗೆ ಹೋಗುವುದಕ್ಕೆ ಕಾರಣವಾಯಿತು (1930, 1932 ಮತ್ತು 1942-43). 1931ರಲ್ಲಿ ಎರಡನೇ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಅವರು ಗಾಂಧೀಜಿಯವರ ಜೊತೆ ಲಂಡನ್‌ಗೆ ತೆರಳಿದರು. ಸಾಹಿತ್ಯದಲ್ಲಿಯೂ ಸಾಧನೆ ಮಾಡಿದ್ದ ಅವರು, ರಾಯಲ್ ಸೊಸೈಟಿ ಆಫ್ ಲಿಟರೇಚರ್‌ನ ಫೆಲೋ ಆಗಿಯೂ ಆಯ್ಕೆಯಾಗಿದ್ದರು.

13. ಸುಚೇತಾ ಕೃಪಲಾನಿ
ಸುಚೇತಾ ಕೃಪಲಾನಿ ಅವರು ಈಗಿನ ಹರ್ಯಾಣದಲ್ಲಿರುವ ಅಂಬಾಲ ಪಟ್ಟಣದಲ್ಲಿ 1908ರಲ್ಲಿ ಹುಟ್ಟಿದರು. ಅವರನ್ನು ವಿಶೇಷವಾಗಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರ ಪಾತ್ರಕ್ಕಾಗಿ ನೆನಪಿಸಿಕೊಳ್ಳಲಾಗುತ್ತದೆ. 1940ರಲ್ಲಿ ಅವರು ಕಾಂಗ್ರೆಸ್‌ನ ಮಹಿಳಾ ಘಟಕವನ್ನು ಸ್ಥಾಪಿಸಿದರು.

ಚಿತ್ರಕೃಪೆ: ಇಂಡಿಯಾ

ಸ್ವಾತಂತ್ರ್ಯೋತ್ತರದಲ್ಲಿ ಅವರು ಹೊಸದಿಲ್ಲಿಯಿಂದ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದರು. ನಂತರ ಉತ್ತರ ಪ್ರದೇಶ ಸರಕಾರದಲ್ಲಿ ಕಾರ್ಮಿಕ, ಸಮುದಾಯ ಅಭಿವೃದ್ಧಿ ಹಾಗೂ ಕೈಗಾರಿಕಾ ಸಚಿವೆಯಾಗಿಯೂ ಸೇವೆ ಸಲ್ಲಿಸಿದರು. 1967ರಲ್ಲಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ.

14. ವಿಜಯಲಕ್ಷ್ಮೀ ಪಂಡಿತ್
ವಿಜಯಲಕ್ಷ್ಮೀ ಪಂಡಿತ್ ಅವರು ಜವಾಹರಲಾಲ್ ನೆಹರೂ ಅವರ ತಂಗಿಯಾಗಿದ್ದು, ಆಗಸ್ಟ್ 18, 1900ರಂದು ಅಲಹಾಬಾದ್‌‌ನಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾಗಿ 1933, 1940 ಮತ್ತು 1942-43ರಲ್ಲಿ ಮೂರು ಬಾರಿ ಸೆರೆವಾಸ ಅನುಭವಿಸಿದ್ದರು.

ಚಿತ್ರಕೃಪೆ: ಎನ್‌ಸೈಕ್ಲೋಪಿಡಿಯಾ

ಮೊದಲಿಗೆ ಅಲಹಾಬಾದ್ ಮುನಿಸಿಪಲ್ ಬೋರ್ಡ್‌ಗೆ ಆಯ್ಕೆಯಾದ ಅವರು, 1936ರಲ್ಲಿ ಯುನೈಟೆಡ್ ಪ್ರಾವಿನ್ಸಸ್ (ಹೆಚ್ಚುಕಡಿಮೆ ಈಗಿನ ಉತ್ತರ ಪ್ರದೇಶ) ವಿಧಾನಸಭೆಯ ಸದಸ್ಯೆಯಾದರು. 1937ರಲ್ಲಿ ಸ್ಥಳೀಯಾಡಳಿತ ಮತ್ತು ಸಾರ್ವಜನಿಕ ಆರೋಗ್ಯ ಸಚಿವೆಯಾದರು. ಅವರು ಕ್ಯಾಬಿನೆಟ್ ದರ್ಜೆಯ ಸಚಿವೆಯಾಗಿ ನೇಮಕಗೊಂಡ ಭಾರತದ ಮೊದಲ ಮಹಿಳೆ.

ಎರಡನೇ ವಿಶ್ವಯುದ್ಧದಲ್ಲಿ ಭಾರತವೂ ಪಾಲುದಾರ ಎಂಬ ಬ್ರಿಟಿಷ್ ಸರಕಾರದ ಘೋಷಣೆಯನ್ನು ಪ್ರತಿಭಟಿಸಿ 1939ರಲ್ಲಿ ಎಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಂತೆ ಅವರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. 1953 ಸೆಪ್ಟೆಂಬರ್‌ನಲ್ಲಿ ಅವರು ವಿಶ್ವಸಂಸ್ಥೆಯ ಜನರಲ್ ಅಸ್ಸೆಂಬ್ಲಿಯ ಅಧ್ಯಕ್ಷೆಯಾಗಿ ನೇಮಕಗೊಂಡರು. ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಹಾಗೂ ಮೊದಲ ಏಷ್ಯನ್ ಅವರಾಗಿದ್ದಾರೆ.

15. ಆನಿ ಮಸ್ಕರೇನ್
ಆನಿ ಮಸ್ಕರೇನ್ ಅವರು ಕೇರಳದ ತಿರುವನಂತಪುರದ ಕೆಥೋಲಿಕ್ ಕುಟುಂಬದಲ್ಲಿ ಜನಿಸಿದರು. ಅವರು ತಿರುವಾಂಕೂರು ಪ್ರಾಂತ್ಯ ಕಾಂಗ್ರೆಸ್ ಸೇರಿದ ಮೊದಲ ಮಹಿಳೆಯರಲ್ಲಿ ಒಬ್ಬರು. ತಿರುವಾಂಕೂರು ಪ್ರಾಂತ್ಯ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಮೊದಲ ಮಹಿಳೆ. ಸ್ವಾತಂತ್ರ್ಯಕ್ಕಾಗಿ ಮತ್ತು ತಿರುವಾಂಕೂರು ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಬೇಕೆಂದು ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಚಿತ್ರಕೃಪೆ: ವೀಥಿ

ತನ್ನ ರಾಜಕೀಯ ಚಟುವಟಿಕೆಗಳಿಗಾಗಿ 1939-1947ರ ನಡುವೆ ಹಲವಾರು ಬಾರಿ ಸೆರೆವಾಸ ಅನುಭವಿಸಿದರು. 1951ರ ಚುನಾವಣೆಯಲ್ಲಿ ಮೊದಲ ಲೋಕಸಭೆಗೆ ಆಯ್ಕೆಯಾದರು. ಅವರು ಕೇರಳದ ಮೊದಲ ಸಂಸತ್ಸದಸ್ಯೆ. ಆಗ ಆಯ್ಕೆಯಾಗಿದ್ಜ ಕೇವಲ ಹತ್ತು ಮಹಿಳೆಯರಲ್ಲಿ ಒಬ್ಬರು. ಸಂಸತ್ತಿಗೆ ಆಯ್ಕೆಯಾಗುವ ಮೊದಲು ಅವರು ಅಲ್ಪಾವಧಿಗೆ ಆರೋಗ್ಯ ಮತ್ತು ವಿದ್ಯುತ್ ಖಾತೆಯ ಉಸ್ತುವಾರಿ ಸಚಿವೆಯಾಗಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...