Homeಮುಖಪುಟರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ರಾಹುಲ್‌ ಗಾಂಧಿಯ 5 ಪ್ರಶ್ನೆಗಳು

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ರಾಹುಲ್‌ ಗಾಂಧಿಯ 5 ಪ್ರಶ್ನೆಗಳು

- Advertisement -
- Advertisement -

ಲಡಾಖ್‌ನಲ್ಲಿನ ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಟ್ವೀಟ್‌ ಮಾಡಿ “ಗಾಲ್ವಾನ್‌ನಲ್ಲಿನ ಸೈನಿಕರ ನಷ್ಟವು ತುಂಬಾ ಕಳವಳಕಾರಿ ಮತ್ತು ನೋವಿನ ಸಂಗತಿಯಾಗಿದೆ. ನಮ್ಮ ಸೈನಿಕರು ಕರ್ತವ್ಯದ ಸಾಲಿನಲ್ಲಿ ಅನುಕರಣೀಯ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು” ಎಂದಿದ್ದರು. ಇದಕ್ಕೆ ಉತ್ತರಿಸಿರುವ ರಾಹುಲ್ ಗಾಂಧಿ

ಅದು ತುಂಬಾ ನೋವಿನಿಂದ ಕೂಡಿದ್ದರೆ:

1. ನಿಮ್ಮ ಟ್ವೀಟ್‌ನಲ್ಲಿ ಚೀನಾ ಹೆಸರಿಸದೆ ಭಾರತೀಯ ಸೇನೆಯನ್ನು ಏಕೆ ಅವಮಾನಿಸುತ್ತೀರಿ?
2. ಸಂತಾಪ ಸೂಚಿಸಲು 2 ದಿನಗಳನ್ನು ಏಕೆ ತೆಗೆದುಕೊಳ್ಳಬೇಕು?
3. ಸೈನಿಕರು ಹುತಾತ್ಮರಾಗುತ್ತಿದ್ದರೂ ರ್‍ಯಾಲಿಗಳನ್ನು ಏಕೆ ನಡೆಸುತ್ತಿದ್ದೀರಿ?
4. ಕ್ರೋನಿ ಮಾಧ್ಯಮಗಳು ಸೈನ್ಯವನ್ನು ದೂಷಿಸುತ್ತಿರುವಾಗ ಏಕೆ ಅವಿತುಕೊಂಡಿದ್ದೀರಿ?
5. ಭಾರತ ಸರ್ಕಾರದ ಬದಲಿಗೆ ಪೇಯ್ಡ್ ಮಾಧ್ಯಮಗಳು ಸೈನ್ಯವನ್ನು ದೂಷಿಸುವುದು ಏಕೆ?

ಎಂದು ರಾಹುಲ್ ರಕ್ಷಣಾ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: ಗಡಿಯಲ್ಲಿ ಸೈನಿಕರ ಸಾವು: ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು – ಸಿದ್ದರಾಮಯ್ಯ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...