Homeಮುಖಪುಟ‘ಶೌಚಾಲಯದ ನೀರು ಕುಡಿಯಲು ಒತ್ತಾಯಿಸಲಾಗಿತ್ತು’: ನೈಜೀರಿಯಾದಲ್ಲಿ ಬಂಧಿಯಾಗಿದ್ದ ಕೇರಳ ನಾವಿಕರ ಮಾತು

‘ಶೌಚಾಲಯದ ನೀರು ಕುಡಿಯಲು ಒತ್ತಾಯಿಸಲಾಗಿತ್ತು’: ನೈಜೀರಿಯಾದಲ್ಲಿ ಬಂಧಿಯಾಗಿದ್ದ ಕೇರಳ ನಾವಿಕರ ಮಾತು

- Advertisement -
- Advertisement -

ಬಂಧನಕ್ಕೊಳಗಾಗಿ ಹತ್ತು ತಿಂಗಳ ನಂತರ ನೈಜೀರಿಯಾದಿಂದ ಬಿಡುಗಡೆಯಾಗಿರುವ ಕೇರಳದ ಮೂವರು ನಾವಿಕರು ತಾವು ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದು, “ಸೆರೆಯಲ್ಲಿದ್ದಾಗ ಶೌಚಾಲಯದ ನೀರನ್ನು ಕುಡಿಯಲು ಒತ್ತಾಯಿಸಲಾಯಿತು” ಎಂದು ಹೇಳಿದ್ದಾರೆ.

ಹತ್ತು ತಿಂಗಳಿಂದ ಸೆರೆಯಲ್ಲಿದ್ದ ನಾವಿಕರು ಜೂನ್ 10ರಂದು ತಮ್ಮ ನಿವಾಸಗಳನ್ನು ತಲುಪಿಸಿದ್ದಾರೆ.

ಹಡಗಿನ ಮುಖ್ಯ ಅಧಿಕಾರಿಯಾಗಿದ್ದ ಕೊಚ್ಚಿಯ ಸಾನು ಜೋಸೆಫ್, ಆಯಿಲರ್ ಮಿಲ್ಟನ್ ಡಿ ಕೌತ್, ಕೊಲ್ಲಂನ ಹಡಗಿನ ಮೂರನೇ ಅಧಿಕಾರಿ ವಿ ವಿಜಿತ್ ಬಂಧನಕ್ಕೊಳಗಾದವರಲ್ಲಿ ಮೂವರು.

ಹಡಗು ತನ್ನ ಪ್ರಾದೇಶಿಕ ನೀರಿನ ಗಡಿಯನ್ನು ದಾಟಿದೆ ಎಂಬ ಆರೋಪದ ಮೇಲೆ ಹಡಗು ಮತ್ತು ಅದರ ಸಿಬ್ಬಂದಿಯನ್ನು ‘ಈಕ್ವಟೋರಿಯಲ್ ಗಿನಿಯಾ’ ದೇಶವು ಮೊದಲು ಬಂಧಿಸಿತು. ಮೂರು ತಿಂಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.

16 ಭಾರತೀಯರನ್ನು ಒಳಗೊಂಡ 26 ಸದಸ್ಯ ಸಿಬ್ಬಂದಿ ಇದರಲ್ಲಿದ್ದರು. ಆ ಪೈಕಿ ಮೂವರು ಕೇರಳೀಯರಿದ್ದರು. ಎಂಟು ಮಂದಿ ಶ್ರೀಲಂಕಾ ಮೂಲದವರಾಗಿದ್ದರು. ಆಗಸ್ಟ್ 2022ರಲ್ಲಿ ಈಕ್ವಟೋರಿಯಲ್ ಗಿನಿಯಾದಲ್ಲಿ ಮೊದಲು ಬಂಧಿಸಲಾಯಿತು. ನವೆಂಬರ್‌ನಲ್ಲಿ ನೈಜೀರಿಯಾ ದೇಶಕ್ಕೆ ಅವರನ್ನು ಒಪ್ಪಿಸಲಾಗಿತ್ತು.

ಇದನ್ನೂ ಓದಿರಿ: ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಎಎಪಿ ರ್‍ಯಾಲಿ; ‘ನಾಳೆ ನಿಮ್ಮ ಸರದಿ’ ಎಂದು ಎಚ್ಚರಿಸಿದ ಕೇಜ್ರೀವಾಲ್

ಶಿಪ್ಪಿಂಗ್ ಕಂಪನಿಯು ಈಕ್ವಟೋರಿಯಲ್ ಗಿನಿಯಾ ದೇಶಕ್ಕೆ ಭಾರಿ ಮೊತ್ತವನ್ನು ಪಾವತಿಸಿದೆ ಎಂಬ ವರದಿಗಳಿವೆ. ಆದರೆ ಆರಂಭದಲ್ಲಿ ಬಿಡುಗಡೆ ಮಾಡಲಾಗಿರಲಿಲ್ಲ. ಇದರ ನಡುವೆ ನೈಜೀರಿಯಾ ಸರ್ಕಾರವು ಹೊಸ ಆರೋಪವನ್ನು ಮಾಡಿತು. ಹಡಗಿನ ಸಿಬ್ಬಂದಿ ನೈಜೀರಿಯಾದ ತೈಲ ಟ್ಯಾಂಕರ್‌ಗಳಿಂದ ತೈಲವನ್ನು ಕಳ್ಳಸಾಗಣೆ ಮಾಡಿದ್ದಾರೆ ಎಂದು ದೂರಿತು.

ನೈಜೀರಿಯಾದ ಪೊಲೀಸರು ಹಡಗು ಮತ್ತು ನಾವಿಕರನ್ನು ಕಸ್ಟಡಿಗೆ ತೆಗೆದುಕೊಂಡರು. ಮುಂದಿನ ಎಂಟು ತಿಂಗಳ ಕಾಲ ಅಗ್ನಿಪರೀಕ್ಷೆಯನ್ನು ನಾವಿಕರು ಎದುರಿಸಬೇಕಾಯಿತು. ಭಾರತ ಸರ್ಕಾರ ಮತ್ತು ಹಲವಾರು ಇತರ ಏಜೆನ್ಸಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ನಾವಿಕರನ್ನು ಬಿಡುಗಡೆಗೊಳಿಸಿದವು.

ನಾವಿಕರು ಸೆರೆಯಲ್ಲಿದ್ದಾಗ ಸಾಕಷ್ಟು ಸಂಕಷ್ಟ ಅನುಭವಿಸಿದರು. ಅನಾರೋಗ್ಯಕ್ಕೆ ಒಳಗಾದರು. ಮಲೇರಿಯಾ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅವರು ಭರವಸೆಯನ್ನೇ ಕಳೆದುಕೊಂಡಿದ್ದರು. “ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಮತ್ತೆ ನೋಡುವ ನಿರೀಕ್ಷೆಯೇ ಇರಲಿಲ್ಲ” ಎಂದು ನಾವಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...