Homeಮುಖಪುಟಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಆಚರಿಸದ ಗೋವಾ; ಕಾರಣ ಇಲ್ಲಿದೆ

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಆಚರಿಸದ ಗೋವಾ; ಕಾರಣ ಇಲ್ಲಿದೆ

- Advertisement -
- Advertisement -

ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಭಾನುವಾರ ದೇಶದಲ್ಲಿ ಸರಳವಾಗಿ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಆಗಸ್ಟ್ 15 ರಂದು ಆಚರಿಸಲಾಗುವ ಈ ದಿನದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳಲಾಗುತ್ತದೆ.

ದೇಶದಾದ್ಯಂತ ತ್ರಿವರ್ಣ ಧ್ವಜ ಹಾರಿಸಿ, ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆದಸಲಾಗುತ್ತದೆ. ಆದರೆ, ಗೋವಾದಲ್ಲಿ ಮಾತ್ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುವುದಿಲ್ಲ.

ಭಾರತ 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದರೂ ಕೂಡ ಗೋವಾ ಪೋರ್ಚುಗೀಸ್ ವಸಾಹತಿನ ಅಡಿಯಲ್ಲಿತ್ತು. ಪೋರ್ಚುಗೀಸರು ಗೋವಾದ ಸುಂದರವಾದ ಭೂಮಿ ಮತ್ತು ರಮಣೀಯ ಸೌಂದರ್ಯಕ್ಕಾಗಿ 450 ವರ್ಷಗಳಿಗೂ ಹೆಚ್ಚು ಕಾಲ ಆ ರಾಜ್ಯವನ್ನು ಆಳಿದ್ದಾರೆ. ಭಾರತವನ್ನು ಆಳದ ವಿದೇಶಿಗರಲ್ಲಿ ಪೋರ್ಚುಗೀಸರು ಮೊದಲ ವಸಾಹತುದಾರರು ಮತ್ತು ಕೊನೆಯದಾಗಿ ದೇಶವನ್ನು ತೊರೆದರು ಕೂಡ ಪೋರ್ಚುಗೀಸರು.

ಇದನ್ನೂ ಓದಿ: 75ನೇ ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

1510ರಲ್ಲಿ ಪೋರ್ಚುಗೀಸರು ಗೋವಾವನ್ನು ಆಕ್ರಮಿಸಿದ್ದರು. ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲ, ಗೋವಾದಲ್ಲಿ ಜನರು ಡಯಾಬಾಲಿಕ್ ಚಿತ್ರಹಿಂಸೆಗೆ ಒಳಗಾಗಿದ್ದರು. ಕೊಂಕಣಿ ಭಾಷೆಯನ್ನು ನಿಗ್ರಹಿಸುವುದು, ಹಿಂದೂಗಳು ಮತ್ತು ಗೋವಾ ಕ್ಯಾಥೊಲಿಕ್‌ಗಳ ಮೇಲೆ ಕಿರುಕುಳ ನೀಡುವುದರಿಂದ ಹಿಡಿದು ಹಿಂದೂ ದೇವಾಲಯಗಳ ನಾಶ ಮತ್ತು ಹಿಂದೂ ವಿವಾಹದ ಆಚರಣೆಗಳ ಮೇಲಿನ ನಿಷೇಧಗಳು ಗೋವಾದಲ್ಲಿದ್ದವು.

ಪೋರ್ಚುಗೀಸರ ಆಳ್ವಿಕೆಯ ಅಂತ್ಯ 18 ಜೂನ್, 1946 ರಂದು ಆರಂಭವಾಯಿತು. ಭಾರತದ ಉಳಿದ ಭಾಗಗಳು ಸ್ವಾತಂತ್ರ್ಯದತ್ತ ಸಾಗುತ್ತಿದ್ದಾಗ, ರಾಜಕೀಯ ನಾಯಕ ರಾಮ್ ಮನೋಹರ್ ಲೋಹಿಯಾ ಅವರು ಬರಹಗಾರ ಡಾ. ಜೂಲಿಯೊ ಮೆನೆಜೆಸ್ ಅವರೊಂದಿಗೆ ಗೋವಾಕ್ಕೆ ಭೇಟಿ ನೀಡಿದ್ದರು. ಗೋವಾ ಜನರ ಕಷ್ಟ ತಿಳಿದ ನಂತರ, ಲೋಹಿಯಾ ರಾಜ್ಯದಲ್ಲಿ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಿದರು.

ಪ್ರಭಾಕರ ವಿಠ್ಠಲ್ ಸಿನಾರಿ ಮತ್ತು ಅವರ ಆಪ್ತರು ಕ್ರಾಂತಿಕಾರಿ ಸಂಘಟನೆಯನ್ನು ಆಜಾದ್ ಗೋಮಂತಕ್ ದಳ(Azad Gomantak Dal) ರಚಿಸಿ, ಪೋರ್ಚುಗೀಸರ ವಿರುದ್ಧ ಹೋರಾಡಲು ಸಜ್ಜಾಯಿತು. ಇದರೊಂದಿಗೆ ಅನೇಕ ಸಂಘಟನೆಗಳು ಸೇರಿ ಯುನೈಟೆಡ್ ಫ್ರಂಟ್ ಆಫ್ ಲಿಬರೇಶನ್ ಎಂಬ ದೊಡ್ಡ ಒಕ್ಕೂಟವನ್ನು ರಚಿಸಿದರು.

ಗೋವಾ ವಿಮೋಚನೆಗಾಗಿ 1946 ರಲ್ಲಿ ಆರಂಭವಾದ ಸುದೀರ್ಘ ಹೋರಾಟದ ಫಲವಾಗಿ ಗೋವಾ ಪೋರ್ಚುಗೀಸರ ಆಳ್ವಿಕೆಯಿಂದ ಡಿಸೆಂಬರ್ 19, 1961 ರಂದು ಬಿಡುಗಡೆಯಾಯಿತು. ಹೀಗಾಗಿ ಪ್ರತಿ ವರ್ಷ ಡಿಸೆಂಬರ್‌ 19ರಂದು ಗೋವಾ ವಿಮೋಚನೆ ದಿನವನ್ನು ಆಚರಿಸಲಾಗುತ್ತದೆ.


ಇದನ್ನೂ ಓದಿ: ದೇಶ ಇನ್ನೂ ಕೊರೊನಾ ವಿರುದ್ದ ಹೋರಾಡುತ್ತಿದೆ; ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ: ರಾಷ್ಟ್ರಪತಿ ಕೋವಿಂದ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...