Homeಮುಖಪುಟಅತಂತ್ರ ವಿಧಾನಸಭೆಯತ್ತ ಗೋವಾ: ಯಾರಿಗೂ ಬಹುಮತವಿಲ್ಲದಿದ್ದರೂ ಬಿಜೆಪಿ ಮೇಲುಗೈ

ಅತಂತ್ರ ವಿಧಾನಸಭೆಯತ್ತ ಗೋವಾ: ಯಾರಿಗೂ ಬಹುಮತವಿಲ್ಲದಿದ್ದರೂ ಬಿಜೆಪಿ ಮೇಲುಗೈ

05 ಸ್ಥಾನ ಗಳಿಸಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

- Advertisement -
- Advertisement -

ಗೋವಾ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಒಟ್ಟು 40 ಕ್ಷೇತ್ರಗಳ ಗೋವಾದಲ್ಲಿ ಯಾವ ಪಕ್ಷವೂ ಬಹುಮತದ 21 ಸ್ಥಾನಕ್ಕಿಂತ ಹೆಚ್ಚಿನ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಮತ ಎಣಿಕೆ ಮುಗಿಯುವವರೆಗೂ ಇದೇ ಟ್ರೆಂಡ್ ಮುಂದುವರೆದಲ್ಲಿ ಗೋವಾ ಅಂತತ್ರ ವಿಧಾನಸಭೆ ಏರ್ಪಡುವ ಸಂಭವವಿದೆ.

ಇದುವರೆಗಿನ ಮತ ಎಣಿಕೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷ ಎನಿಸಿದೆ. ಕಾಂಗ್ರೆಸ್ ಮೈತ್ರಿಕೂಟ 13 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ 05 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಆಪ್ ಒಂದು ಸ್ಥಾನದಲ್ಲಿ ಮತ್ತು ಇತರರು 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟಿನಲ್ಲಿ ಮ್ಯಾಜಿಕ್ ಸಂಖ್ಯೆ 21 ದಾಟುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ.

05 ಸ್ಥಾನ ಗಳಿಸಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಮೈತ್ರಿ ಮಾಡಿಕೊಂಡು ಎಂಜಿಪಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಗೋವಾ ಚುನಾವಣಾ ಫಲಿತಾಂಶದ ನಂತರ ಟಿಎಂಸಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಮ್ಮ ಪಕ್ಷವು ತನ್ನ ನಿಲುವನ್ನು ನಿರ್ಧರಿಸುತ್ತದೆ ಆದರೆ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಎಂಜಿಪಿ ಶಾಸಕ ಸುದಿನ್ ಧವಲಿಕರ್ ಶನಿವಾರ ಹೇಳಿದ್ದರು.


ಇದನ್ನೂ ಓದಿ: ಪಂಜಾಬ್ ಚುನಾವಣೆ: ಆಪ್‌ಗೆ ಭರ್ಜರಿ ಮುನ್ನಡೆ – ಹಿನ್ನಡೆ ಅನುಭವಿಸುತ್ತಿರುವ ಸಿಎಂ ಚನ್ನಿ, ನವಜೋತ್…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಪ್ರಚಾರ ಮಾಡುತ್ತಿದ್ದಾರೆ’: ವಿಡಿಯೋ ಸಂದೇಶದಲ್ಲಿ ಮೋದಿ, ಬಿಜೆಪಿ ವಿರುದ್ಧ ಸೋನಿಯಾ...

0
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗರು ದೇಶದಲ್ಲಿ ಸಂಕಷ್ಟದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ, ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಜ್ವಲ ಭವಿಷ್ಯಕ್ಕಾಗಿ ನಾಗರಿಕರು...