Homeಮುಖಪುಟಮೇಕೆ ಕಳ್ಳತನ ಆರೋಪ | ಇಬ್ಬರು ಯುಕರನ್ನು ಥಳಿಸಿ ಕೊಂದ ಗುಂಪು

ಮೇಕೆ ಕಳ್ಳತನ ಆರೋಪ | ಇಬ್ಬರು ಯುಕರನ್ನು ಥಳಿಸಿ ಕೊಂದ ಗುಂಪು

- Advertisement -
- Advertisement -

ಮೇಕೆಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಇಬ್ಬರು ಯುವಕರನ್ನು ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್‌ನ ಜೋರ್ಸಾ ಗ್ರಾಮದಲ್ಲಿ ಸಂಭವಿಸಿದೆ. ಶನಿವಾರ ಮುಂಜಾನೆ ಈ ಘಟನೆ ಜಮ್ಶೆಡ್‌ಪುರದ ಚಾಕುಲಿಯಾ ಪೊಲೀಸ್ ಠಾಣೆಯಿಂದ ಸುಮಾರು 15 ಕಿ.ಮೀ ದೂರದಲ್ಲಿ ನಡೆದಿದೆ ಎಂದು ವರದಿ ಹೇಳಿದೆ. ಮೇಕೆ ಕಳ್ಳತನ ಆರೋಪ

ಕುಶಾಕ್ ಬೆಹೆರಾ ಎಂದು ಗುರುತಿಸಲ್ಪಟ್ಟ ಮೃತರಲ್ಲಿ ಒಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಭೋಲಾ ನಾಥ್ ಮಹ್ತೋ ಆ ದಿನ ಬೆಳಿಗ್ಗೆ ಮಹಾತ್ಮ ಗಾಂಧಿ ಮಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಿಬ್ಬರೂ ಚಕುಲಿಯಾದಲ್ಲಿನ ಜೀರಾಪಾರ ಗ್ರಾಮದ ನಿವಾಸಿಗಳೆಂದು ಹೇಳಲಾಗಿದ್ದು, ಇಬ್ಬರು ಶಂಕಿತರು ಮನೆಯಿಂದ ಮೇಕೆಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೇಕೆ ಕಳ್ಳತನ ಆರೋಪ

ಈ ಮಧ್ಯೆ, ಮೇಕೆಯ ಕುತ್ತಿಗೆಗೆ ಕಟ್ಟಲಾಗಿದ್ದ ಗಂಟೆ ಸದ್ದು ಕೇಳಿದ್ದು, ಇದರಿಂದಾಗಿ ಮನೆ ಮಾಲೀಕ ಹರ್‌ಗೋವಿಂದ್ ನಾಯಕ್ ಎಚ್ಚರಗೊಂಡಿದ್ದನು ಎಂದು ಹೇಳಲಾಗಿದೆ. ನಂತರ ಮನೆಯಿಂದ ಹೊರಬಂದು ನೋಡಿದಾಗ ಇಬ್ಬರು ಯುವಕರು ಬೈಕ್‌ನಲ್ಲಿ ಮೂರು ಮೇಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈ ವೇಳೆ ಮನೆ ಮಾಲೀಕರು ಅವರನ್ನು ಹಿಡಿದು ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಅಲ್ಲಿ ಜಮಾಯಿಸಿ ಶಂಕಿತರನ್ನು ಸೆರೆಹಿಡಿದು ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಅವರ ಮೇಲೆ ಬಿದಿರಿನ ಕೋಲುಗಳಿಂದ ನಿರ್ದಯವಾಗಿ ಥಳಿಸಲಾಗಿದ್ದು, ಪರಿಣಾಮವಾಗಿ ಬೆಹೆರಾ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.

“ಕುಶಾಕ್ ಬೆಹರಾ ಅವರಿಂದ ಯಾವುದೇ ಚಲನೆ ಇಲ್ಲದಾಗ ಗ್ರಾಮಸ್ಥರು ಅವರನ್ನು ಹೊಡೆಯುವುದನ್ನು ನಿಲ್ಲಿಸಿದ್ದರು. ಆದರೆ ಈ ವೇಳೆ ತುಂಬಾ ತಡವಾಗಿತ್ತು” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ಇದರ ನಂತರ, ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಮಹತೋ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಹ ಸಾವನ್ನಪ್ಪಿದರು.

“ಇಬ್ಬರು ಗ್ರಾಮಸ್ಥರು ಮೇಕೆಗಳನ್ನು ಕದಿಯಲು ಗ್ರಾಮಕ್ಕೆ ಪ್ರವೇಶಿಸಿದ್ದರು, ಆ ಸಮಯದಲ್ಲಿ ಮೇಕೆ ಮಾಲೀಕರು ಅವರನ್ನು ಹಿಡಿದು ಇತರ ಗ್ರಾಮಸ್ಥರ ಸಹಾಯದಿಂದ ತೀವ್ರವಾಗಿ ಥಳಿಸಿದರು. ಈ ಘಟನೆಯಲ್ಲಿ ಇಬ್ಬರೂ ಯುವಕರು ಸಾವನ್ನಪ್ಪಿದರು, ಅವರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಗಾಯಗೊಂಡರು” ಎಂದು ಎಸ್ಪಿ (ಗ್ರಾಮೀಣ) ರಿಷಭ್ ಗರ್ಗ್ ಹೇಳಿದ್ದಾರೆ.

ಇಲ್ಲಿಯವರೆಗೆ, ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇತರರನ್ನು ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಮೃತರ ಕುಟುಂಬಿಕರ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರು ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ರಾಜಸ್ಥಾನ | ಮದುವೆಯ ದಿನವೆ ಹಣದೊಂದಿಗೆ ನಾಪತ್ತೆಯಾದ ಸಾಮೂಹಿಕ ವಿವಾಹದ ಆಯೋಜಕರು!

ರಾಜಸ್ಥಾನ | ಮದುವೆಯ ದಿನವೆ ಹಣದೊಂದಿಗೆ ನಾಪತ್ತೆಯಾದ ಸಾಮೂಹಿಕ ವಿವಾಹದ ಆಯೋಜಕರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿದ್ಧ ಟಿಎಂಸಿ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ : ವಿಚಾರಣೆ ತ್ವರಿತಗೊಳಿಸುವಂತೆ ಹೈಕೋರ್ಟ್‌ಗೆ ಸೂಚನೆ

ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು 'ಇಂಡಿಯನ್ ಬ್ಯಾಂಕ್' ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1)...

ಬಂಗಾಳ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು; ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಜೈಲಿನಿಂದ ಬಿಡುಗಡೆ

ಪಶ್ಚಿಮ ಬಂಗಾಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮರುದಿನವೇ, ಕಾಂಗ್ರೆಸ್‌ನ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಮಿಲನ್ ಪ್ರಧಾನ್ ಬುಧವಾರ (ಸೆ. 30) ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ದಿಯಾ ಜೈಲಿನ ಹೊರಗೆ...

ಚುನಾವಣಾ ಆಯೋಗದ ಐಟಿ ಸೆಲ್ ನಿರ್ದೇಶಕಿ ಸೀಮಾ ಖನ್ನಾ ವಿರುದ್ಧ ದೂರು ದಾಖಲಿಸಿದ ಸಂಸದೆ ಮಹುವಾ ಮೊಯಿತ್ರಾ

ಬಂಗಾಳದಲ್ಲಿ ಮತದಾರರ ಹೆಸರುಗಳು ಮತ್ತು ಪಟ್ಟಿಗಳನ್ನು ಕೇಂದ್ರ ಮಟ್ಟದಲ್ಲೇ ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವಂತಹ ಮತದಾರರ ಪಟ್ಟಿ ಸಾಫ್ಟ್‌ವೇರ್ ಬಳಕೆಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ...

‘TCS ಮೇಲೆ ಒತ್ತಡ ಹೇರಲಾಗಿತ್ತೇ?’ : ಆನ್‌ಲೈನ್ ಫಾರಂ-6ರ ಬದಲಾವಣೆಗಳ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಆನ್‌ಲೈನ್ ಫಾರಂ ನಂಬರ್-6ರಲ್ಲಿ ಮಾಡಲಾದ ವಿವಾದಾತ್ಮಕ ಬದಲಾವಣೆಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ (ಅ.1) ಭಾರತೀಯ ಚುನಾವಣಾ ಆಯೋಗದಿಂದ ಉತ್ತರವನ್ನು...

ರಾಜ್ಯದಾದ್ಯಂತ ಫಾರಂ-7ರ ಮೂಲಕ ವೋಟ್ ಡಿಲೀಟ್ ಮಾಡಿಸುತ್ತಿರುವ ಬಿಜೆಪಿಗರು : ಮಾಹಿತಿ ನೀಡಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಫಾರಂ ನಂಬರ್ -7 ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಮತಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಬುಧವಾರ (ಸೆ.30) ಸಾಮಾಜಿಕ...

ಉಜ್ಜಯಿನಿ ಶಾಹಿ ಮಸೀದಿ ಧ್ವಂಸ ಮೂರನೇ ದಿನಕ್ಕೆ: 14 ಮುಸ್ಲಿಮರ ಬಂಧನ, 30ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ಐತಿಹಾಸಿಕ ಶಾಹಿ ಮಸೀದಿ ಧ್ವಂಸ ಪ್ರಕರಣ ಮೂರನೇ ದಿನಕ್ಕೂ ಮುಂದುವರಿದಿದ್ದು, ಮಸೀದಿಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸೋಮವಾರ ಮಸೀದಿಯ ನೇತಾಡುವ ಚಪ್ಪಡಿಯ ಒಂದು...

ಹೈದರಾಬಾದ್ ವಿವಿ ಚುನಾವಣೆ: ABVPಗೆ ಮುಖಭಂಗ, ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಭರ್ಜರಿ ಜಯ

ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ (HCU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಭಾರಿ ಹಿನ್ನಡೆಯಾಗಿದೆ. ಎಡಪಂಥೀಯ ಹಾಗೂ ದಲಿತ-ಬಹುಜನ ವಿದ್ಯಾರ್ಥಿ ಸಂಘಟನೆಗಳನ್ನೊಳಗೊಂಡ ಐಸಾ-ಎಎಸ್‌ಎ-ಡಿಎಸ್‌ಯು-ಎಸ್‌ಎಫ್‌ಐ-ಟಿಎಸ್‌ಎಫ್...

ಗ್ಯಾನೇಶ್ ಕುಮಾರ್ ನಿವಾಸದ ಬಳಿ ಪ್ರತಿಭಟನೆ: 6 ಕಾಂಗ್ರೆಸ್ ನಾಯಕರ ಬಂಧನ, 20 ಕಾರ್ಯಕರ್ತರ ವಿರುದ್ಧ ಕೊಲೆ ಯತ್ನದ ಆರೋಪ

ಆಗ್ರಾ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಆಗ್ರಾದಲ್ಲಿರುವ ಪೋಷಕರ ಪೈತೃಕ ನಿವಾಸದ ಹೊರಗೆ ನಡೆದ ಕಾಂಗ್ರೆಸ್ ಪ್ರತಿಭಟನೆ ಇದೀಗ ಗಂಭೀರ ಕಾನೂನು ಸಂಘರ್ಷಕ್ಕೆ ತಿರುಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ...

₹92,000 ಕೋಟಿ ವೆಚ್ಚದ ಗ್ರೇಟ್ ನಿಕೋಬಾರ್ ಯೋಜನೆ: ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ತಡೆ ಕೋರಿದ ಕೇಂದ್ರ ಸರ್ಕಾರ!

ಅಂದಾಜು ₹92,000 ಕೋಟಿ ವೆಚ್ಚದ ವಿವಾದಾತ್ಮಕ 'ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ'ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾನೂನಾತ್ಮಕವಾಗಿ ಅತ್ಯಂತ ಅಚ್ಚರಿಯ ಉಲ್ಟಾ ನಿಲುವು ತಳೆದಿದೆ. ಈ ಯೋಜನೆಯಲ್ಲಿ ಅರಣ್ಯ ಹಕ್ಕುಗಳ ಕಾಯಿದೆ...

SIR | ಫಾರಂ-8ರ ಬದಲು ಫಾರಂ-6 ಸಲ್ಲಿಸುವಂತೆ ಒತ್ತಡ : ಒಂದೇ ಕುಟುಂಬದ 6 ಜನರ ವೋಟ್ ಡಿಲೀಟ್; ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ತಪರಾಕಿ

ಗೋವಾದ ಸಾಂತಾ ಕ್ರೂಝ್ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದು ಕುಟುಂಬದ ಆರು ಸದಸ್ಯರು ತಮ್ಮ ವಿಳಾಸ ಬದಲಾವಣೆಯನ್ನು ತಿಳಿಸಲು 'ಫಾರ್ಮ್ 8' ಸಲ್ಲಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ...