Homeರಾಜಕೀಯತಮಿಳುನಾಡನ್ನು ‘ತಮಿಳಗಂ’ ಎಂದ ರಾಜ್ಯಪಾಲ; ಗೆಟ್‌ ಔಟ್‌‌ ಎಂದ ತಮಿಳರು!

ತಮಿಳುನಾಡನ್ನು ‘ತಮಿಳಗಂ’ ಎಂದ ರಾಜ್ಯಪಾಲ; ಗೆಟ್‌ ಔಟ್‌‌ ಎಂದ ತಮಿಳರು!

ರಾಜ್ಯಪಾಲ ಆರ್‌.ಎನ್‌. ರವಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೊಶ ವ್ಯಕ್ತವಾಗಿದ್ದು #GetOutRavi ಟ್ರೆಂಡ್ ಆಗಿದೆ

- Advertisement -
- Advertisement -

ತಮಿಳುನಾಡು ರಾಜ್ಯವನ್ನು ತಮಿಳಗಂ ಎಂದು ಉಲ್ಲೇಖಿಸಿದ್ದ ರಾಜ್ಯಪಾಲ ಆರ್‌.ಎನ್‌. ರವಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೊಶ ವ್ಯಕ್ತವಾಗಿದ್ದು #GetOutRavi ಟ್ರೆಂಡ್ ಆಗಿದೆ. ಇದಲ್ಲದೆ ಸೋಮವಾರದಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ಸದನದಲ್ಲಿ ಮಾತನಾಡುತ್ತಿರುವಾಗಲೆ ಅವರು ಸದನದಿಂದ ಹೊರನಡೆದಿದ್ದರು.

ರಾಜಭವನದ ಪೊಂಗಲ್ ಹಬ್ಬದ ಆಹ್ವಾನ ಪತ್ರದಲ್ಲಿ ತಮಿಳುನಾಡನ್ನು ‘ತಮಿಳಗಂ’ ಎಂದು ತಮಿಳುಭಾಷೆಯಲ್ಲಿ ಉಲ್ಲೇಖಿಸಿದ್ದು ಮಾತ್ರವಲ್ಲದೆ, ರಾಜ್ಯ ಸರ್ಕಾರದ ಲಾಂಛನವನ್ನು ಕೈಬಿಟ್ಟಿದೆ. ಆಹ್ವಾನ ಪತ್ರಿಕೆಯಲ್ಲಿ ಕೇವಲ ಭಾರತ ಸರ್ಕಾರದ ಲಾಂಛನವನ್ನು ಮಾತ್ರ ಮುದ್ರಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜಭವನದ ಈ ನಡೆಯು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಮಿತ್ರ ಪಕ್ಷಗಳನ್ನು ಕೆರಳಿಸಿದ್ದು, ರಾಜ್ಯಪಾಲ ರವಿಯನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದಾರೆ. ಆಹ್ವಾನ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯು ರಾಜ್ಯಕ್ಕೆ ‘ತಮಿಳುನಾಡು’ ಎಂಬ ಹೆಸರು ಬಳಸಲಾಗಿದೆ.

ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜ್ಯಪಾಲ ರವಿ, “ಯಾವುದಾದರೂ ವಿಷಯವನ್ನು ಇಡೀ ದೇಶಕ್ಕೆ ಅನ್ವಯಿಸುವಾಗ ತಮಿಳುನಾಡು ಮಾತ್ರ ‘ಬೇಡ’ ಎಂದು ಹೇಳುತ್ತದೆ. ಇದೊಂದು ಅಭ್ಯಾಸವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಅನೇಕ ಪ್ರಬಂಧಗಳನ್ನು ಬರೆಯಲಾಗಿದ್ದು, ಇವುಗಳೆಲ್ಲಾ ಸುಳ್ಳು ಮತ್ತು ಕಾಲ್ಪನಿಕ ಕತೆಗಳಾಗಿವೆ. ಇವುಗಳನ್ನು ಒಡೆಯಬೇಕು. ಸತ್ಯವು ಮೇಲುಗೈ ಸಾಧಿಸಬೇಕು. ರಾಜ್ಯಕ್ಕೆ ‘ತಮಿಳಗಂ’ ಎಂದು ಕರೆಯುವುದೆ ಹೆಚ್ಚು ಸೂಕ್ತವಾದ ಪದವಾಗಿದೆ. ದೇಶದ ಉಳಿದ ಭಾಗವು ದೀರ್ಘಕಾಲದವರೆಗೆ ವಿದೇಶಿಯರ ಕೈಯಲ್ಲಿ ಬಹಳಷ್ಟು ವಿನಾಶವನ್ನು ಅನುಭವಿಸಿತು” ಎಂದು ಹೇಳಿದ್ದರು.

‘ತಮಿಳುನಾಡು’ ಎಂದರೆ ‘ತಮಿಳರ ರಾಷ್ಟ್ರ’ ಎಂದು ಅರ್ಥ ಬರುತ್ತದೆ, ಆದರೆ ‘ತಮಿಳಗಂ’ ಎಂದರೆ ‘ತಮಿಳು ಜನರ ವಾಸಸ್ಥಾನ’ ಎಂದು ಅರ್ಥ. ಇದು ಈ ಪ್ರದೇಶದ ಪ್ರಾಚೀನ ಹೆಸರು ಎಂದು ರಾಜ್ಯಪಾಲರು ಹೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು, ರಾಜ್ಯಪಾಲರು ಪ್ರತಿಪಕ್ಷ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವು ಕರೆಯುವ ‘ತಮಿಳಗಂ’ ಎಂಬ ಹೆಸರನ್ನು ರಾಜ್ಯಕ್ಕೆ ನೀಡುವ ಮೂಲಕ ಅವರ ಅಜೆಂಡಾವನ್ನು ಮುಂದಕ್ಕೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಅವರು ವಾಸ್ತವಿಕವಾಗಿ ತಪ್ಪಾದ ಮತ್ತು ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಾರೆ” ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದ್ದಾರೆ. ಪೊಂಗಲ್ ಆಹ್ವಾನ ಪತ್ರದ ವಿವಾದದ ನಂತರ, ರಾಜ್ಯಪಾಲರು ನಿನ್ನೆ ತಮಿಳುನಾಡು ವಿಧಾನಸಭೆಯಿಂದ ಹೊರನಡೆದು ಮತ್ತೆ ವಿವಾಸ ಸೃಷ್ಟಿಸಿದ್ದಾರೆ.

ಈ ನಡುವೆ #GetOutRavi ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ದಲಿತ ಹಕ್ಕುಗಳ ಹೋರಾಟಗಾರ್ತಿ, ಖ್ಯಾತ ಲೇಖಕಿ ಮೀನಾ ಕಂದಸಾಮಿ ಅವರು, “ನಾವು ರಾಜ್ಯಪಾಲರ ಹುದ್ದೆಯನ್ನು ರದ್ದುಪಡಿಸಿದಾಗ ಮಾತ್ರ  ನಿಜವಾಗಿಯೂ ವಸಾಹತುಶಾಹಿಯನ್ನು ತೊಡೆದುಹಾಕಲು ಸಾಧ್ಯ. ಗೆಟ್‌ ಓಟ್‌ ರವಿ” ಎಂದು ಟ್ವೀಟ್ ಮಾಡಿದ್ದಾರೆ.

ಆಡಳಿತರೂಢ ಡಿಎಂಕೆ ನಾಯಕ ಇಸೈ ಅವರು, “ಸಾಮಾಜಿಕ ಜಾಲತಾಣದಿಂದ ನಗರಗಳ ಗೋಡೆಗಳ ವರೆಗೂ ಗೆಟ್‌ ಔಟ್ ರವಿ ಎಂದು ಹೇಳುತ್ತಿದೆ” ಎಂದು ಟ್ವೀಟ್ ಮಾಡಿದ್ದು ನಗರದ ಗೋಡೆಯೊಂದರಲ್ಲಿನ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

ಈ ನಡುವೆ ತೆಲಂಗಾಣದ ಆಡಳಿತರೂಢ ಟಿಆರ್‌ಎಸ್‌ ನಾಯಕರು ಕೂಡಾ ತಮಿಳುನಾಡು ಸರ್ಕಾರಕ್ಕೆ ಬೆಂಬಲ ನೀಡಿದ್ದು, “ಉತ್ತರಿಸಲು ಸಾಧ್ಯವಾಗದ ತಮಿಳುನಾಡು ರಾಜ್ಯಪಾಲರು ಅಧಿವೇಶನದ ಮಧ್ಯೆಯೇ ಹೊರನಡೆದರು!” ಎಂದು ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ.

ತಮಿಳುನಾಡು ಕಾಂಗ್ರೆಸ್ ನಾಯಕ ಕೆಟಿಎಲ್ ಟ್ವೀಟ್

ನನ್ನ ರಾಜ್ಯವನ್ನು ತಮಿಳುನಾಡು ಎಂದು ಕರೆಯಲು ನಿಮಗೆ ಸಮಸ್ಯೆ ಇದ್ದರೆ, ನೀವು ರಾಜ್ಯವನ್ನು ತೊರೆಯಬಹುದು ಎಂದು ಮೋಹನ್ ವಿನೋದ್ ಟ್ವೀಟ್ ಮಾಡಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು,  ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ...