Homeಮುಖಪುಟ‘ಜಿಎಸ್‌ಟಿ 12%’: ಜನವರಿಯಿಂದ ಬಟ್ಟೆಬರೆ ಮತ್ತು ಪಾದರಕ್ಷೆಗಳ ಬೆಲೆ ಏರಿಕೆ!

‘ಜಿಎಸ್‌ಟಿ 12%’: ಜನವರಿಯಿಂದ ಬಟ್ಟೆಬರೆ ಮತ್ತು ಪಾದರಕ್ಷೆಗಳ ಬೆಲೆ ಏರಿಕೆ!

- Advertisement -
- Advertisement -

1,000 ರೂ.ಗಿಂತ ಕಡಿಮೆ ಬೆಲೆಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು 12% ಕ್ಕೆ ಏರಿಸಲು ಒಕ್ಕೂಟ ಸರ್ಕಾರ ನಿರ್ಧರಿಸಿರುವುದರಿಂದ ಬಡವರು ಬಳಸುವ ಉಡುಪು, ಬಟ್ಟೆ ಮತ್ತು ಪಾದರಕ್ಷೆಗಳು ಜನವರಿ 1 ರಿಂದ ದುಬಾರಿಯಾಗಲಿದೆ.

1,000 ರೂಪಾಯಿವರೆಗಿನ ಬಟ್ಟೆ ಮತ್ತು ಪಾದರಕ್ಷೆಗಳ ಮೇಲಿನ ಹೊಸ ಜಿಎಸ್‌ಟಿ ದರವನ್ನು 5% ದಿಂದ 12% ಕ್ಕೆ ಹೆಚ್ಚಿಸಲಾಗಿದೆ. ಸಿಂಥೆಟಿಕ್ ಮತ್ತು ಕೃತಕ ನೂಲಿನ ಮೇಲಿನ ತೆರಿಗೆ ಕೂಡಾ 12% ದಷ್ಟು ಹೆಚ್ಚಿಸಲಾಗಿದೆ. ಆದರೆ ಹತ್ತಿ, ರೇಷ್ಮೆ ಮತ್ತು ಉಣ್ಣೆಯ ನೂಲುಗಳ ಮೇಲಿನ ತೆರಿಗೆಯನ್ನು ಹಿಂದಿನಂತೆ ಉಳಿಸಲಾಗಿದೆ.

ಇದನ್ನೂ ಓದಿ:ರೈತ ಹೋರಾಟಕ್ಕೆ ಬೆಂಬಲ: ಬೆಲೆ ಏರಿಕೆ ಕುರಿತು ಕೇಂದ್ರದ ವಿರುದ್ಧ ಕಿಡಿಕಾರಿದ ಸೋನಿಯಾ ಗಾಂಧಿ

ಪರೋಕ್ಷ ತೆರಿಗೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುವ GST ಕೌನ್ಸಿಲ್, ಹೊಸ ತೆರಿಗೆ ದರಗಳಲ್ಲಿನ ಬದಲಾವಣೆಗಳನ್ನು ಶಿಫಾರಸು ಮಾಡಿದ್ದು, ಇದು ವ್ಯಾಪಾರಿಗಳ ಪರವಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ವ್ಯಾಪಾರಿಗಳು ಸರ್ಕಾರದ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ದೇಶದ ದೊಡ್ಡ ವರ್ಗದ ಜನರಿಗೆ ತೊಂದರೆಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ಕೌನ್ಸಿಲ್ ವ್ಯಾಪಾರಿಗಳೊಂದಿಗೆ ಸಮಾಲೋಚನೆಯನ್ನು ನಿಲ್ಲಿಸಿದ್ದು, ವ್ಯಾಪಾರದ ಬಗ್ಗೆ ಪರಿಸ್ಥಿತಿಯನ್ನು ತಿಳಿದುಕೊಳ್ಳದೆ ಸರ್ವಾಧಿಕಾರದ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಣ್ಣ ವ್ಯಾಪಾರಿಗಳ ಒಕ್ಕೂಟವಾದ ಆಲ್ ಇಂಡಿಯಾ ಟ್ರೇಡರ್ಸ್ ಭಾನುವಾರ ಹೇಳಿದೆ ಎಂದು ಡೆಕ್ಕನ್‌ ಹೆರಾಲ್ಡ್‌‌ ಉಲ್ಲೇಖಿಸಿದೆ.

ದೇಶದ ಜನಸಂಖ್ಯೆಯ 85% ರಷ್ಟು ಜನರು 1,000 ರೂಪಾಯಿಗಿಂತ ಕಡಿಮೆ ಮೌಲ್ಯದ ಬಟ್ಟೆ ಮತ್ತು ಪಾದರಕ್ಷೆಗಳನ್ನು ಖರೀದಿಸುತ್ತಾರೆ. ಈಗ ಇದರಲ್ಲಿ 5% GST ದರ ಇದೆ. ಸರ್ಕಾರದ ಹೊಸ ನಿರ್ಧಾರವು ಅತ್ಯಂತ ಅವಾಸ್ತವಿಕವಾಗಿದ್ದು, ಸಣ್ಣ ತಯಾರಕರು, ಕುಶಲಕರ್ಮಿಗಳು ಮತ್ತು ಇತರ ವಿಭಾಗಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಒಕ್ಕೂಟವು ಹೇಳಿದೆ.

ಕೊರೊನಾದಿಂದಾಗಿ ಕೆಟ್ಟ ಪರಿಣಾಮ ಬೀರಿದ ಜವಳಿ ಉದ್ಯಮ ವಲಯವು, ಕೃಷಿಯ ನಂತರ ಎರಡನೇ ಅತಿ ದೊಡ್ಡ ಆದಾಯ ಉತ್ಪಾದಿಸುವ ವಲಯವಾಗಿದೆ.

ಇದನ್ನೂ ಓದಿ:ಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...