Homeಕರ್ನಾಟಕಗುಬ್ಬಿ: ಇಬ್ಬರು ದಲಿತ ಯುವಕರ ಭೀಕರ ಹತ್ಯೆ; ಖೈರ್ಲಾಂಜಿ ಮಾದರಿ ಪ್ರಕರಣ?

ಗುಬ್ಬಿ: ಇಬ್ಬರು ದಲಿತ ಯುವಕರ ಭೀಕರ ಹತ್ಯೆ; ಖೈರ್ಲಾಂಜಿ ಮಾದರಿ ಪ್ರಕರಣ?

- Advertisement -
- Advertisement -

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ಪೆದ್ದನಹಳ್ಳಿ ಗ್ರಾಮದ ಗಿರೀಶ್ ಮೂಡಲಗಿರಿಯಪ್ಪ (30) ಮತ್ತು ಚೇಳೂರು ಹೋಬಳಿ ಮಂಚಲದೊರೆ ಗ್ರಾಮದ ಗಿರೀಶ್ (32) ಎಂದು ಗುರುತಿಸಲಾಗಿದೆ.

ಗಿರೀಶ್ ಮೂಡಲಗಿರಿಯಪ್ಪ ಅವರ ವಿರೂಪಗೊಂಡ ಮೃತದೇಹ ಜಮೀನಿನಲ್ಲಿ ಪತ್ತೆಯಾಗಿದ್ದರೆ, ಮಂಚಲದೊರೆ ಗಿರೀಶ್ ಮೃತದೇಹ ಗ್ರಾಮದ ಹೊರವಲಯದ ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುರುವಾರ ರಾತ್ರಿ, ಗ್ರಾಮಸ್ಥರು ಸ್ಥಳೀಯ ದೇವಸ್ಥಾನದ ಉತ್ಸವವನ್ನು ಆಚರಿಸುತ್ತಿದ್ದಾಗ, ಪ್ರಕರಣದ ಪ್ರಮುಖ ಆರೋಪಿ ನಂದೀಶ್, ಗಿರೀಶ್ ಅವರ ಮನೆಗೆ ತೆರಳಿ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಈ ಯುವಕರನ್ನು ಬೇರೆಡೆಗೆ ಕರೆದೊಯ್ದು, ಅಲ್ಲಿ ಸೇರಿದ್ದ ಗುಂಪು ಕೊಲೆ ಮಾಡಿದೆ ಎಂದು ಆರೋಪ ಕೇಳಿಬಂದಿದೆ.

ಕೂಡಲೇ ದಾಳಿಕೋರರು ದಲಿತ ಯುವಕರಿಗೆ ಓಡಿ ಹೋಗಲು ಸಾಧ್ಯವಾಗದಂತೆ ತೆಂಗಿನ ಗರಿಗಳಿಂದ ಕಟ್ಟಿದರು. ಕಾಲುಗಳನ್ನು ಸುಟ್ಟು ಚಿತ್ರಹಿಂಸೆ ನೀಡಿದರು ಎಂದು ವರದಿಯಾಗಿದೆ.

ನಂತರ ಈ ಯುವಕರ ಭೀಕರವಾಗಿ ಥಳಿಸಲಾಗಿದೆ. ಗಿರೀಶ್ ಮೂಡಲಗಿರಿಯಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಯುವ ಮೊದಲು ಗಿರೀಶ್ ತಪ್ಪಿಸಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಆಗ ದುಷ್ಕರ್ಮಿಗಳು ಗಿರೀಶ್‌ರ ನ್ನು ಕೊಂದು ನೀರಿಗೆ ತಳ್ಳಿದ್ದಾರೆ ಎಂದು ವರದಿಯಾಗಿದೆ.

ದಾಳಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಕೊಲೆಯಾದ ಯುವಕರ ಮೇಲೆ ಕಳ್ಳತನ ಮಾಡಿದ ಆರೋಪಗಳಿದ್ದವು ಎನ್ನಲಾಗಿದೆ.

ಖೈರ್ಲಾಂಜಿ ಮಾದರಿ ಹತ್ಯೆ ಆರೋಪ: ಪೆದ್ದನಹಳ್ಳಿ ಗ್ರಾಮದಲ್ಲಿ ದಲಿತರು, ತಿಗಳರು ಹಾಗೂ ಲಿಂಗಾಯತರು ಬಹುಸಂಖ್ಯೆಯಲ್ಲಿದ್ದು, ಪ್ಲಾನಿಂಗ್ ಮಾಡಿಕೊಂಡೇ ಈ ಯುವಕರನ್ನು ಕೊಂದಿರುವ ಸಾಧ್ಯತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ದಲಿತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಖೈರ್ಲಾಂಜಿಯಂತೆಯೇ ಇಲ್ಲಿಯೂ ಜಾತಿವಾದಿಗಳು ಗುಂಪುಗೂಡಿ ಹತ್ಯೆ ಮಾಡಿರುವ ಶಂಕೆ ಇದೆ. ಸರಿಯಾಗಿ ತನಿಖೆಯಾದಲ್ಲಿ ಆರೋಪಿಗಳು ಸಿಕ್ಕಿ ಬೀಳುತ್ತಾರೆ. ಇಲ್ಲವಾದರೆ ನೂರರಲ್ಲಿ ಇದು ಒಂದು ಎಂಬಂತಾಗುತ್ತದೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.

“ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು. ಹೆಚ್ಚಿನ ಹೆಚ್ಚಿನ ಜನರು ಕೊಲೆಯಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್ ತಿಳಿಸಿದ್ದಾರೆ.

‘ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇದೇ ವೇಳೆ ದಲಿತ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಮನವಿ ಸಲ್ಲಿಸಿವೆ. ಆರೋಪಿಗಳ ವಿರುದ್ಧ ಗುಬ್ಬಿ ಪೊಲೀಸರು ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ದಲಿತ ಮುಖಂಡರಾದ ಕೊಟ್ಟ ಶಂಕರ್‌, “ಕಳ್ಳತನ ಆರೋಪ ನೆಪ ಮಾಡಿ ಇಬ್ಬರು ದಲಿತ ಯುವಕರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ತಾಯಿ ಮತ್ತು ಅವರ ಸಹೋದರಿಯನ್ನು ಗುಬ್ಬಿಯ ಪೊಲೀಸ್‌ ಠಾಣೆಯ ಮುಂದೆ ಭೇಟಿ ಮಾಡಿ ಧೈರ್ಯ ಹೇಳಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ವಿಚಾರಣೆ ಮಾಡುತ್ತಿರುವ ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆ ಮಾಡಬೇಕು ಎಂದು ಡಿವೈಎಸ್‌ಪಿ ಮತ್ತು ಎಸ್‌ಪಿಯವರನ್ನು ಭೇಟಿ ಮಾಡಿ ಆಗ್ರಹಿಸುತ್ತೇವೆ. ದಸಂಸದ ಹಿರಿಯರು ಜೊತೆಗಿದ್ದಾರೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...