Homeರಾಷ್ಟ್ರೀಯಗುಜರಾತ್ ಸೇತುವೆ ದುರಂತ: ನವೀಕರಣಕ್ಕೆ ಮಂಜೂರಾಗಿದ್ದ ₹2 ಕೋಟಿಗಳಲ್ಲಿ ಗಡಿಯಾರ ಕಂಪೆನಿ ಖರ್ಚು ಮಾಡಿದ್ದು ಕೇವಲ...

ಗುಜರಾತ್ ಸೇತುವೆ ದುರಂತ: ನವೀಕರಣಕ್ಕೆ ಮಂಜೂರಾಗಿದ್ದ ₹2 ಕೋಟಿಗಳಲ್ಲಿ ಗಡಿಯಾರ ಕಂಪೆನಿ ಖರ್ಚು ಮಾಡಿದ್ದು ಕೇವಲ ₹12 ಲಕ್ಷ!

- Advertisement -
- Advertisement -

ಗುಜರಾತಿನ ಮೊರ್ಬಿ ತೂಗು ಸೇತುವೆಯ “ಪೂರ್ಣ ಮತ್ತು ಅಂತಿಮ” ನವೀಕರಣಕ್ಕಾಗಿ ಮಂಜೂರುರಾಗಿದ್ದ 2 ಕೋಟಿಯಲ್ಲಿ ಒರೆವಾ ಗ್ರೂಪ್‌‌ ಕಂಪನಿಯು ಕೇವಲ 12 ಲಕ್ಷ ರೂ. ಮಾತ್ರ ಖರ್ಚು ಮಾಡಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಅಕ್ಟೋಬರ್ 30 ರಂದು ಸಂಭವಿಸಿದ ದುರ್ಘಟನೆಯಲ್ಲಿ 141 ಜನರು ಸಾವಿಗೀಡಾಗಿದ್ದಾರೆ. ಸೇತುವೆ ನವೀಕರಣ ಮತ್ತು ನಿರ್ವಣೆಯನ್ನು ಅಹಮದಾಬಾದ್ ಮೂಲದ ಒರೆವಾ ಗ್ರೂಪ್‌‌ಗೆ ನೀಡಲಾಗಿತ್ತು. ಇದು ಗಡಿಯಾರ ತಯಾರಿಸುವ ಸಂಸ್ಥೆಯಾದ ಅಜಂತಾದ ಅಂಗ ಸಂಸ್ಥೆಯಾಗಿದ್ದು, ಇದಕ್ಕೆ ನಿರ್ಮಾಣ ಕ್ಷೇತ್ರದಲ್ಲಿ ಯಾವುದೆ ಅನುಭವವಿಲ್ಲ ಎಂದು ವರದಿಯಾದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಳೆದ ಮಾರ್ಚ್‌ನಲ್ಲಿ ಮೊರ್ಬಿ ನಗರ ಪಾಲಿಕೆಯೊಂದಿಗೆ 15 ವರ್ಷಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯ ಒಪ್ಪಂದವನ್ನು ಮಾಡಿಕೊಂಡಿರುವ ಒರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್, ಅಕ್ಟೋಬರ್ 24 ರ ಗುಜರಾತಿ ಹೊಸ ವರ್ಷದಂದು ಮತ್ತೆ ಓಡಾಟಕ್ಕೆ ಸೇತುವೆ ಸಿದ್ಧವಾಗಿದೆ ಮತ್ತು ಸುರಕ್ಷಿತವಾಗಿದೆ ಎಂದು ಘೋಷಿಸಿದ್ದರು. ಈ ವೇಳೆ ಅವರು ಆರು ತಿಂಗಳ ಅವಧಿಯ ನವೀಕರಣ ಪೂರ್ಣಗೊಂಡಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಗುಜರಾತ್‌ ಸೇತುವೆ ದುರಂತ: ಸುಮಾರು 80 ಜನರನ್ನು ರಕ್ಷಿಸಿದ ಮುಸ್ಲಿಂ ಈಜುಗಾರರು

ಸೇತುವೆ ಕುಸಿತದ ದುರ್ಘಟನೆ ಬಗ್ಗೆ ಪೊಲೀಸರು ನಡೆಸಿದ ತನಿಖೆಯಿಂದ ಕಂಪನಿಯು ನವೀಕರಣವನ್ನು ಹೇಗೆ ಉಪ-ಗುತ್ತಿಗೆ ನೀಡಿದೆ, ತೂಗು ಸೇತುವೆಯನ್ನು ಬಲಪಡಿಸಲು ಅಗತ್ಯವಿರುವ ಕೆಲಸಕ್ಕೆ ಹೇಗೆ ಖರ್ಚು ಮಾಡಿದೆ ಎಂಬುದನ್ನು ಬಹಿರಂಗಪಡಿಸಿದೆ.

ಸಣ್ಣ ಪುಟ್ಟ ಕೆಲಸಗಳನ್ನು ಬಿಟ್ಟರೆ ಸೇತುವೆಯಲ್ಲಿ ಯಾವುದೆ ಕೆಲಸ ನಡೆದಿರುವ ಯಾವುದೆ ಲಕ್ಷಣಗಳಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಫಲಿತಾಂಶಗಳು ಹೇಳಿದೆ. “ಅಕ್ಟೋಬರ್ 24 ರಂದು ಪಟೇಲ್ ಮತ್ತು ಅವರ ಕುಟುಂಬ ಸೇತುವೆಯಲ್ಲಿ ಅಡ್ಡಾಡಿದ್ದೆ ಸೇತುವೆಯ ಏಕೈಕ ಫಿಟ್‌ನೆಸ್ ಪರೀಕ್ಷೆಯಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ತುಕ್ಕು ಹಿಡಿದ ಕೇಬಲ್‌ಗಳು ಮತ್ತು ಇತರ ವಸ್ತುಗಳನ್ನು ಬದಲಾಯಿಸಿ ಸೇತುವೆಯನ್ನು ಬಲಪಡಿಸುವುದರ ಬದಲು ಕೆಲವು ಪೇಂಟಿಂಗ್, ಗ್ರೀಸ್ ಮತ್ತು ಇತರ ಮೇಲ್ನೋಟದ ಕೆಲಸಗಳನ್ನು ಮಾತ್ರ ಕೈಗೊಳ್ಳಲಾಗಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಗಡಿಯಾರ ತಯಾರಕ ಕಂಪೆನಿಗೆ ಮೋರ್ಬಿ ಸೇತುವೆಯ ನಿರ್ವಹಣೆ ಗುತ್ತಿಗೆ ನೀಡಿದ್ದ ಸರ್ಕಾರ!

ಸೇತುವೆ ಕುಸಿತದ ಹಿನ್ನಲೆಯಲ್ಲಿ ಗುಜರಾತ್ ಸರ್ಕಾರವು ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್‌ಸಿನ್ಹ್ ಝಲಾ ಅವರನ್ನು ಅಮಾನತುಗೊಳಿಸಿದೆ ಎಂದು ಜಿಲ್ಲಾಧಿಕಾರಿ ಜಿ ಟಿ ಪಾಂಡ್ಯ ಶುಕ್ರವಾರ ತಿಳಿಸಿದ್ದಾರೆ. “ರಾಜ್ಯ ನಗರಾಭಿವೃದ್ಧಿ ಇಲಾಖೆಯು ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್‌ಸಿನ್ಹ್ ಝಲಾ ಅವರನ್ನು ಅಮಾನತುಗೊಳಿಸಿದೆ” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...