Homeಮುಖಪುಟಗುಜರಾತ್: ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ; ಬಾಲಕಿ ಸಹಿತ 4 ಸಾವು

ಗುಜರಾತ್: ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ; ಬಾಲಕಿ ಸಹಿತ 4 ಸಾವು

- Advertisement -
- Advertisement -

ಗುಜರಾತಿನ ವಡೋದರಾ ಜಿಲ್ಲೆಯ ಕೈಗಾರಿಕಾ ವಲಯದ ರಾಸಾಯನಿಕ ಕಾರ್ಖಾನೆಯ ಬಾಯ್ಲರ್‌ನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ನಾಲ್ಕು ವರ್ಷದ ಬಾಲಕಿ ಮತ್ತು 65 ವರ್ಷದ ವ್ಯಕ್ತಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ‘ದಿ ಹಿಂದೂ’ ವರದಿ ವರದಿ ಮಾಡಿದೆ.

ಹದಿಹರೆಯದ ಬಾಲಕಿ ಮತ್ತು ನಾಲ್ಕು ವರ್ಷದ ಬಾಲಕಿಯ ತಾಯಿ(30) ಈ ದುರ್ಘಟನೆಯಲ್ಲಿ ಮೃತಪಟ್ಟಿರುವ ಮತ್ತಿಬ್ಬರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ದೇವಾಲಯವನ್ನೇ ಧಿಕ್ಕರಿಸಿ: ಜಾತಿ ದೌರ್ಜನ್ಯಕ್ಕೆ ಒಳಗಾದ ಹರಿಹರಪುರ ದಲಿತರಿಗೆ ಕೃಷ್ಣಮೂರ್ತಿ ಮನವಿ

“ಬೆಳಿಗ್ಗೆ ಈ ಪ್ರದೇಶದಲ್ಲಿ ಭಾರಿ ಸ್ಫೋಟ ಸಂಭವಿಸಿದೆ ಮತ್ತು ಸುಮಾರು 15 ಜನರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಯಿತು. ಅವರಲ್ಲಿ ನಾಲ್ವರು ಮೃತಪಟ್ಟರು ಅಥವಾ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ಘೋಷಿಸಲಾಯಿತು” ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸಾಜಿದ್ ಬಲೋಚ್ ಹೇಳಿದ್ದಾರೆ.

ಸ್ಥಳೀಯರ ಪ್ರಕಾರ, ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮನೆಗಳ ಗೋಡೆಗಳು ಕುಸಿದುಬಿದ್ದಿವೆ ಮತ್ತು 1.5 ಕಿಮೀ ಸುತ್ತಲಿನ ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ.

ಇದನ್ನೂ ಓದಿ:ಮತಾಂತರ ನಿಷೇಧ ಮಸೂದೆ ಅಸ್ಪೃಶ್ಯತೆಯನ್ನು ಸುಡುವುದೇ?

ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ಕಾರ್ಖಾನೆಯ ಕಾರ್ಮಿಕರು ಮತ್ತು ಕಾರ್ಖಾನೆಯ ಬಳಿಯಿಂದ ತೆರಳುತ್ತಿದ್ದವರಾಗಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ಔಷಧೀಯ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿರುವ ಕ್ಯಾಂಟನ್ ಪ್ರಯೋಗಾಲಯದಲ್ಲಿ ಈ ಘಟನೆ ಸಂಭವಿಸಿದೆ.

ಗುಜರಾತ್‌ನಲ್ಲಿ, ಎಂಟು ದಿನಗಳ ಅವಧಿಯಲ್ಲಿ ಇದು ಎರಡನೇ ಘಟನೆಯಾಗಿದ್ದು, ಅನೇಕ ಸಾವುನೋವುಗಳು ವರದಿಯಾಗಿವೆ. ಡಿಸೆಂಬರ್ 16 ರಂದು, ಪಂಚಮಹಲ್ ಜಿಲ್ಲೆಯಲ್ಲಿ ಇದೇ ರೀತಿಯ ಕಾರ್ಖಾನೆ ಸ್ಫೋಟದಲ್ಲಿ ಏಳು ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು.

ಇದನ್ನೂ ಓದಿ:ದಲಿತ ಮಹಿಳೆ ತಯಾರಿಸಿದ ಊಟ ತಿನ್ನದ ಸವರ್ಣೀಯ ಮಕ್ಕಳು; ‘ಭೋಜನ್‌ ಮಾತಾ’ ಕೆಲಸದಿಂದ ಮಹಿಳೆ ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...