Homeಮುಖಪುಟ'ಮಹಾರಾಜ್’ ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆ ನೀಡಿದ ಗುಜರಾತ್ ಹೈಕೋರ್ಟ್

‘ಮಹಾರಾಜ್’ ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆ ನೀಡಿದ ಗುಜರಾತ್ ಹೈಕೋರ್ಟ್

- Advertisement -
- Advertisement -

ನಟ ಅಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅಭಿನಯದ ‘ಮಹಾರಾಜ್’ ಸಿನಿಮಾ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚಲನಚಿತ್ರವು ಜೂನ್ 14 ರಂದು ಟಾಪ್ (OTT) ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ನ್ಯಾಯಮೂರ್ತಿ ಸಂಗೀತಾ ಕೆ ವಿಶನ್ ಅವರು ಚಲನಚಿತ್ರದ ಬಿಡುಗಡೆಯನ್ನು ತಡೆಹಿಡಿದು ಮಧ್ಯಂತರ ಆದೇಶವನ್ನು ಹೊರಡಿಸಿದ್ದು, ಈ ಕುರಿತು ಹೆಚ್ಚಿನ ವಿಚಾರಣೆಯನ್ನು ಜೂನ್ 18ಕ್ಕೆ ನಿಗದಿಪಡಿಸಲಾಗಿದೆ.

ಅರ್ಜಿಗಳನ್ನು  ಪರಿಗಣಿಸಲಾಗಿದೆ, ಪ್ರತಿವಾದಿಗಳಿಗೆ ನೋಟಿಸ್ ನೀಲಾಗಿದೆ, ಮುಂದಿನ ವಿಚಾರಣೆಯವರೆಗೆ ಪ್ಯಾರಾಗ್ರಾಫ್ 11(ಸಿ) ಪ್ರಕಾರ ಸಿನಿಮಾ ಬಿಡುಗಡೆ ಮಾಡದಂತೆ ನ್ಯಾಯಾಲಯ ಮಧ್ಯಂತರ ನಿರ್ದೇಶನ ನೀಡಿದೆ.

ಶ್ರೀಕೃಷ್ಣನ ಭಕ್ತರು ಮತ್ತು ಪುಷ್ಟಿಮಾರ್ಗ್ ಪಂಥದ ಅನುಯಾಯಿಗಳ ಪರವಾಗಿ ಸಲ್ಲಿಸಲಾದ ಮನವಿಯ ಮೇರೆಗೆ ಈ ಆದೇಶವನ್ನು ನೀಡಲಾಗಿದೆ.

1862ರ ಮಾನಹಾನಿ ಪ್ರಕರಣವನ್ನು ಆಧರಿಸಿದ “ಮಹಾರಾಜ್” ಚಲನಚಿತ್ರವು ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಮತ್ತು ಪಂಥ ಮತ್ತು ಹಿಂದೂ ಧರ್ಮದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂದು ವಾದಿಸಲಾಗಿದೆ. ಸುಪ್ರೀಂಕೋರ್ಟ್‌ನ ಅಂದಿನ ನ್ಯಾಯಾಧೀಶರು ನಿರ್ಧರಿಸಿದ 1862ರ ಪ್ರಕರಣವು ಹಿಂದೂ ಧರ್ಮ, ಭಗವಾನ್ ಕೃಷ್ಣ ಮತ್ತು ಭಕ್ತಿಗೀತೆಗಳು ಮತ್ತು ಸ್ತೋತ್ರಗಳ ಬಗ್ಗೆ ತೀವ್ರವಾಗಿ ನಿಂದಿಸುವ ಟೀಕೆಗಳನ್ನು ಒಳಗೊಂಡಿದೆ ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಚಿತ್ರದ ಕಥಾಹಂದರವನ್ನು ಮರೆಮಾಚಲು ಯಾವುದೇ ಟ್ರೇಲರ್ ಅಥವಾ ಪ್ರಚಾರ ಕಾರ್ಯಕ್ರಮಗಳಿಲ್ಲದೆ ಚಿತ್ರದ ಬಿಡುಗಡೆಯನ್ನು ರಹಸ್ಯವಾಗಿ ಮಾಡಲಾಗುತ್ತಿದೆ. ಚಲನಚಿತ್ರವನ್ನು ಬಿಡುಗಡೆ ಮಾಡುವುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಚಿತ್ರದ ಬಿಡುಗಡೆಯನ್ನು ತಡೆಯಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತುರ್ತಾಗಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿದಾರರು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

OTT ಪ್ಲಾಟ್‌ಫಾರ್ಮ್‌ಗಳ ವ್ಯಾಪ್ತಿ ವಿಶಾಲವಾಗಿದ್ದು, ಪ್ರಪಂಚದಾದ್ಯಂತ ತಕ್ಷಣ  ವಿತರಣೆಯಾಗಲಿದೆ. ಆದ್ದರಿಂದ ಚಲನಚಿತ್ರದ ಬಿಡುಗಡೆಯಿಂದ ಉಂಟಾದ ಹಾನಿಯನ್ನು ಸರಿಪಡಿಸುವುದು ಅಸಾಧ್ಯವೆಂದು ವಾದಿಸಲಾಗಿದೆ.

ವರದಿಯ ಪ್ರಕಾರ, ‘ಬಾಯಿಕಾಟ್ ನೆಟ್‌ಫ್ಲಿಕ್ಸ್’ ಮತ್ತು ‘ಬ್ಯಾನ್‌  ಮಹಾರಾಜ್ ಫಿಲ್ಮ್’ ನಂತಹ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದಿದ್ದು, ಕೆಲವು ಬಳಕೆದಾರರು “ಮಹಾರಾಜ್”ನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಚಲನ ಚಿತ್ರಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹೇಳಿಕೊಂಡಿದ್ದಾರೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮಿಹಿರ್ ಜೋಶಿ ಮತ್ತು ವಕೀಲರಾದ ಕೆಯೂರ್ ಗಾಂಧಿ ಮತ್ತು ಕುನಾಲ್ ವ್ಯಾಸ್ ವಾದಿಸಿದ್ದಾರೆ.

ಇದನ್ನು ಓದಿ: ಕುವೈತ್‌ ಅಗ್ನಿ ದುರಂತಕ್ಕೆ ಕಾರಣವೇನು?: ಪ್ರಾಥಮಿಕ ತನಿಖೆಗಳು ಏನು ಹೇಳುತ್ತದೆ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...