Homeಮುಖಪುಟಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

ಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

- Advertisement -
- Advertisement -

ದಲಿತರು ಎಂದರೆ ಯಾರು? 1970ರ ದಶಕದಲ್ಲಿ ಹಿಂದೂ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧ ಪ್ರತಿರೋಧವಾಗಿ ದಲಿತ ಎಂಬ ಪದ ಭಾರತದ ಶೋಷಿತರೆಲ್ಲರನ್ನು ಒಂದೆಡೆ ತರುವಲ್ಲಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್, ಕರ್ನಾಟಕದ ದಲಿತ ಸಂಘರ್ಷ ಸಮಿತಿ ಮತ್ತು ಆಂಧ್ರಪ್ರದೇಶದ ದಲಿತ ಮಹಾಸಭಾಗಳೇ ಇದಕ್ಕೆ ಸಾಕ್ಷಿ. ಈ ಮೂರೂ ಸಂಘಟನೆಗಳು ದಲಿತರೆಂದರೆ ಎಲ್ಲಾ ಜಾತಿಯ ಬಡವರೆಂದೇ ಹೇಳುತ್ತವೆ. ಅಷ್ಟರ ಮಟ್ಟಿಗೆ ಒಳಗೊಳ್ಳುವಿಕೆಯ ಹೋರಾಟಗಳು ಅವಾಗಿದ್ದವು. ಆದರೆ ಜಾತಿಪದ್ಧತಿ ಎಂಬುದು ಶೋಷಿತರನ್ನೂ ಒಟ್ಟುಗೂಡಲು ಬಿಡುವುದಿಲ್ಲವಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ’ಜಾತಿಯು ಕೇವಲ ಶ್ರಮದ ವಿಭಜನೆಯಲ್ಲ. ಅದು ಶ್ರಮಿಕರ ವಿಭಜನೆ’ ಎಂಬುದನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಇಂದಿಗೂ ಸಹ ದುಡಿಯುವ ಜನರು ಸಮಾನ ಶತ್ರುವಿನ ವಿರುದ್ಧ ಹೋರಾಡಲು ಸಂಘಟಿತರಾಗದಂತೆ ತಡೆಹಿಡಿದಿರುವುದು ಈ ಮೇಲು-ಕೀಳೆಂಬ ಜಾತಿಪದ್ಧತಿಯ ಕಾರಣಕ್ಕಾಗಿಯೇ. ಹಾಗಾಗಿ ಇಂದು ದಲಿತರೆಂದರೆ ಭಾರತದ ಅಸ್ಪೃಶ್ಯರೇ ಆಗಿದ್ದಾರೆ. ಭಾರತದ ಸಂವಿಧಾನ ವಿಧಿ 17ರಡಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಆದರೆ ಭಾರತದಲ್ಲಿ ಅಸ್ಪೃಶ್ಯತೆ ನಿಷೇಧವಾಗಿದೆ ಎಂದು ಹೇಳುವ ಧೈರ್ಯ ಈ ದೇಶದ ರಾಷ್ಟ್ರಪತಿಯವರಿಗೂ ಇಲ್ಲ. ಹಾಗಾಗಿ ದಲಿತ ಚಳವಳಿಗಳ ಕ್ಷಮೆಯಾಚಿಸುತ್ತಾ ದಲಿತ ಎಂಬ ಪದವನ್ನು ಅಸ್ಪೃಶ್ಯರಿಗೆ ಸಮಾನವಾಗಿ ಎಲ್ಲರಂತೆ ನಾನೂ ಸಹ ಬಳಸುತ್ತೇನೆ.

ನನ್ನ ಈ ಅಂಕಣದ ಉದ್ದೇಶ ಅಸ್ಪೃಶ್ಯರು ಯಾರು ಎಂದು ತಿಳಿಸುವುದಲ್ಲ. ಅಸ್ಪೃಶ್ಯತೆ ಧಾರ್ಮಿಕ ಆಚರಣೆಯಿಂದ ಹಿಂದೂ ಮೇಲ್ಜಾತಿಗಳು ಎಂದು ಕರೆಸಿಕೊಂಡವರು ಹೇಗೆ ದಲಿತರನ್ನು ಕಿತ್ತು ಕೊಂದಿದ್ದಾರೆ ಎಂಬುದನ್ನು ತಿಳಿಸುವುದಾಗಿದೆ. ಅದಾಗ್ಯೂ ಸಂಪೂರ್ಣ ವಿವರಗಳಿಗೆ ಹೋಗದೆ ಸಂಕ್ಷಿಪ್ತವಾಗಿ ಅಸ್ಪೃಶ್ಯತೆಯ ಬಗ್ಗೆ ತಿಳಿಸುತ್ತೇನೆ. ಹರಪ್ಪ ನಾಗರಿಕತೆ ಪತನವಾಗುತ್ತಿದ್ದ ಕಾಲಕ್ಕೆ ಪ್ರಾಚೀನ ಭಾರತಕ್ಕೆ ಮಧ್ಯ ಏಷಿಯಾದಿಂದ ಆರ್ಯರು ಬಂದರು. ನಂತರ ಇಲ್ಲಿನ ಉತ್ತರ ಭಾರತದಲ್ಲಿ ನೆಲೆಸಿದ್ದ ಭಾರತದ ಮೂಲನಿವಾಸಿಗಳ ಜೊತೆಗೆ ಸಮ್ಮಿಲನ ಮತ್ತು ಸಂಘರ್ಷದ ಮೂಲಕ ಬೆರೆತರು, ಅಲ್ಲದೆ ಪ್ರತ್ಯೇಕವಾಗಿಯೂ ಗುರುತಿಸಿಕೊಂಡರು. ವೇದಗಳು, ಧರ್ಮಸೂತ್ರಗಳ ಮೂಲಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳ ಸಮಾಜವನ್ನು ಸ್ಥಾಪಿಸಿದರು. (ನೆನಪಿರಲಿ ಈ ವರ್ಣಗಳು ಆರ್ಯವರ್ತ ಪ್ರದೇಶಗಳಾದ ಗಂಗಾ-ಯಮುನಾ ಬಯಲಿಗೆ ಸೀಮಿತವಾಗಿದ್ದವು. ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಮಧ್ಯ ಭಾರತದ ಬಗ್ಗೆ ಇತಿಹಾಸದ ಆರಂಭಿಕ ಹೆಜ್ಜೆಗುರುತುಗಳು ಇನ್ನೂ ಸ್ಪಷ್ಟವಾಗಿ ರಚಿಸಬೇಕಿದೆ.) ಮಗಧದಲ್ಲಿ ನಂದರ ನಂತರ ವಿಶಾಲವಾದ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾಯಿತು. ಈ ಭಾಗದಲ್ಲಿ ಆರ್ಯರು ಪ್ರಚಾರ ಮಾಡುತ್ತಿದ್ದ ಚಾತುರ್ವರ್ಣ ಧರ್ಮಕ್ಕೆ ವಿರೋಧವಾಗಿ ಹಲವು ಧರ್ಮಗಳು ಸ್ಥಾಪನೆಯಾದವು. ಅವುಗಳಲ್ಲಿ ಬೌದ್ಧ ಧರ್ಮ ಹಾಗೂ ಜೈನ ಧರ್ಮಗಳು ಪ್ರಸಿದ್ಧವಾದವು. ಹಾಗಾಗಿ ಚಂದ್ರಗುಪ್ತ ಮೌರ್ಯ ಕಡೆಯ ಕಾಲದಲ್ಲಿ ಜೈನನಾದರೆ ಸಾಮ್ರಾಟ್ ಅಶೋಕ ಕಳಿಂಗ ಯುದ್ಧದ ನಂತರ ಬೌದ್ಧನಾದನು.

ಸಾಮ್ರಾಟ್ ಅಶೋಕ

ಈ ಮೂಲಕ ಅಲ್ಲಿಯವರೆಗೂ ನೆಲೆಸಿದ್ದ ಚಾತುರ್ವರ್ಣ ಧರ್ಮದ ತಾರತಮ್ಯವನ್ನು ತೊರೆದು ಸರ್ವರೂ ಸಮವಾಗಿರಬೇಕೆಂಬ ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದನು. ಯಜ್ಞ-ಯಾಗಗಳನ್ನು ನಿಷೇಧಿಸಿದನು. ಅಂಬೇಡ್ಕರರು ಹೇಳುವಂತೆ ಇದರಿಂದ ಚಾತುರ್ವರ್ಣ ಧರ್ಮದ ಪುರೋಹಿತ ಜನಾಂಗದ ಬ್ರಾಹ್ಮಣರು ದಕ್ಷಿಣೆಯನ್ನು ಕಳೆದುಕೊಂಡು ಬಡವರಾದರು ಜೊತೆಗೆ ಅಧಿಕಾರವನ್ನೂ ಕಳೆದುಕೊಂಡರು. ಹಾಗಾಗಿ ಮೌರ್ಯ ಸಾಮ್ರಾಜ್ಯವನ್ನು ಉರುಳಿಸುವುದೇ ಅವರ ಮೊದಲ ಕರ್ತವ್ಯವಾಯಿತು. ಸಾಮ್ರಾಟ್ ಅಶೋಕನ ಮೊಮ್ಮಗ ಬೃಹಧ್ರತ ಮೌರ್ಯನ ಸೇನಾಧಿಪತಿಯಾಗಿದ್ದ ಶುಂಗ ಬ್ರಾಹ್ಮಣ ಪುಶ್ಯಮಿತ್ರನು ಬೃಹದ್ರತನನ್ನು ಕೊಂದು ಸಿಂಹಾಸನವೇರಿದನು. ಇಲ್ಲಿಂದ ಮತ್ತೆ ಚಾತುರ್ವರ್ಣ ಧರ್ಮ ಮೇಲುಗೈ ಸಾಧಿಸಿತು. ಈ ಕಾಲದಲ್ಲಿಯೇ ಅಂದರೆ ಕ್ರಿ.ಪೂ 1ನೇ ಶತಮಾನದಲ್ಲಿ ಶೂದ್ರರನ್ನೂ ಮಹಿಳೆಯರನ್ನು ಹದ್ದುಬಸ್ತಿನಲ್ಲಿಟ್ಟು ಕೂಲಿಗಳನ್ನಾಗಿಸಿಕೊಳ್ಳುವ ಮನುಸ್ಮೃತಿ ರಚನೆಯಾಯಿತು. ದುಡಿಯುವ ಜನರನ್ನು ಶೂದ್ರರೆಂದು ಬಗೆದು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಮನುಸ್ಮೃತಿಯು ಅಂತರ್ಜಾತಿ ವಿವಾಹ (ಕೆಳಜಾತಿಗಳು ಮೇಲ್ಜಾತಿಯವರನ್ನು ವಿವಾಹವಾಗುವುದನ್ನು) ಮತ್ತು ಅಂತರ್ ಭೋಜನವನ್ನು ನಿಷೇಧಿಸಿತು. ಇದರ ಪರಿಣಾಮವಾಗಿ ಜಾತಿಸಂಕರಗೊಂಡವರನ್ನು ಜಾತಿಭ್ರಷ್ಟರನ್ನಾಗಿಸಿ ಊರ ಹೊರಗೆ ಬಹಿಷ್ಕರಿಸಿದಾಗ ಅಸ್ಪೃಶ್ಯರು ಹುಟ್ಟಿದರೆಂದು ಮನುಸ್ಮೃತಿ ಸಮರ್ಥನೆ ನೀಡುತ್ತದೆ. ಆದರೆ ಅಂಬೇಡ್ಕರರಾಗಲೀ ಇತರೆ ಇತಿಹಾಸಕಾರರಾಗಲೀ ಈ ವಿವರಣೆಯನ್ನು ಒಪ್ಪುವುದಿಲ್ಲ. ಸುಮಾರು ಕ್ರಿ.ಶ 4ನೇ ಶತಮಾನದಷ್ಟೊತ್ತಿಗೆ ಅಸ್ಪೃಶ್ಯತೆ ಒಂದು ವ್ಯವಸ್ಥೆಯಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣಗಳು ಇಂತಿವೆ.

  1.  ಗೋಮಾಂಸ ಸೇವಿಸುತ್ತಿದ್ದ ಬಿಡಿ ಜನಾಂಗಗಳು ಅದನ್ನು ಮುಂದುವರೆಸಿದ್ದು.
  2.  ನೆಲೆನಿಂತ ಮತ್ತು ಬಿಡಿ ಜನಾಂಗಗಳ ನಡುವಿನ ಒಪ್ಪಂದ.
  3.  ಬೌದ್ಧ ಧರ್ಮೀಯರು ಚಾತುರ್ವರ್ಣ ಧರ್ಮವನ್ನು ನಿರಾಕರಿಸಿದ್ದು.
  4.  ಸ್ವಚ್ಛ ಮಾಡುವ ಕಾಯಕವನ್ನು ಕೆಳದರ್ಜೆಗೆ ಇಳಿಸಿದ್ದು.

ಈ ಕಾರಣಗಳಿಗಾಗಿ ಚಾತುರ್ವರ್ಣ ಧರ್ಮದಲ್ಲಿ ಆರಂಭವಾದ ಅಸ್ಪೃಶ್ಯತೆಯು ಅಸ್ಪೃಶ್ಯರನ್ನು ಹುಟ್ಟುಹಾಕಿತು. ಆಶ್ಚರ್ಯವೆಂದರೆ ಅವರನ್ನು ಚಾತುರ್ವರ್ಣದಿಂದ ಹೊರಗಿಟ್ಟಿತು. ಅಂಬೇಡ್ಕರರ ಮಾತಿನಲ್ಲಿ ಹೇಳುವುದಾದರೆ ’ಆ ಸಮುದಾಯ ಹುಟ್ಟುವುದೂ ಅಸ್ಪೃಶ್ಯರಾಗಿ, ಬದುಕುವುದು ಅಸ್ಪೃಶ್ಯರಾಗಿ, ಸಾಯುವುದು ಅಸ್ಪೃಶ್ಯರಾಗಿ. ಮತ್ತೆ ಹಡೆಯುವುದು ಅಸ್ಪೃಶ್ಯತೆ ಕಳಂಕ ಅಂಟಿದ ಮಕ್ಕಳನ್ನು, ಅದು ಶಾಶ್ವತ, ಆನುವಂಶಿಕ ಕಳಂಕ ಆಗಿರುವುದರಿಂದ ಅದನ್ನು ತೊಳೆಯುವುದು ಯಾವುದರಿಂದಲೂ ಆಗದು’.

ಕ್ರಿ.ಶ 4ರ ನಂತರ ಅಸ್ಪೃಶ್ಯರೆಂದು ಕರೆಯಲಾದ ಹಲವು ಜಾತಿಗಳು ಈ ಮೊದಲು ಶೂದ್ರರಾಗಿದ್ದವು. ಬೌದ್ಧ ಗ್ರಂಥಗಳು ಹೇಳುವ ಅನೇಕ ಸೇವಾ ಜಾತಿಗಳು ಬ್ರಾಹ್ಮಣ್ಯಗಳಲ್ಲಿ ಹೇಳಿದ ಅಸ್ಪೃಶ್ಯರಿಗೆ ಸಂವಾದಿ. ಚಂಡಾಲ, ನಿಷಾದ, ವೇಣ, ರಥಕಾರ, ಪುಕ್ಕುಸರನ್ನು ನೀಚಕುಲ, ಹೀನಜಾತಿಯವರೆಂದು ಭಾವಿಸಲಾಗಿತ್ತು. ಆದರೆ ಅವರ ಮೇಲೆ ಗುಪ್ತರ ಕಾಲದವರೆಗೂ ಅಸ್ಪೃಶ್ಯತೆಯನ್ನು ಹೇರಲಾಗಿರಲಿಲ್ಲ. ಅವರನ್ನು ಮುಟ್ಟಲು, ನೋಡಲು ನಿಷೇಧಿಸಲಾಗಿರಲಿಲ್ಲ. ಕ್ರಿ.ಶ 4ನೇ ಶತಮಾನದಲ್ಲಿ ಪತಂಜಲಿ ಸೂಚಿಸುವಂತೆ ಪಾಣಿನಿ ಕಾಲದಲ್ಲಿ ಚಂಡಾಲ, ಮೃತಪರು, ಅನಿರ್ವಸಿತರು (ಊರಾಚೆ ಇರುವ) ಶೂದ್ರರು ಎನಿಸಿಕೊಂಡಿದ್ದರು. ಅವರು ಮುಟ್ಟಿದ ಕಂಚು ಪಾತ್ರೆ ಶಾಶ್ವತವಾಗಿ ಮೈಲಿಗೆಯಾಗುತ್ತಿತ್ತು. ಆದರೆ ಅವರು ಮುಟ್ಟಿದ ಮನುಷ್ಯರು ಮೈಲಿಗೆಯಾಗುತ್ತಿರಲಿಲ್ಲ. ಅಂದರೆ
ಅವರಿಬ್ಬರ ನಡುವೆ ಸಂಪರ್ಕವಿತ್ತು. ಆದರೆ ನಂತರದ ದಿನಗಳಲ್ಲಿ ಅದು ಪ್ರಕ್ಷಿಪ್ತವಾಗಿ ಆಪಸ್ತಂಬ ಸೂತ್ರದಲ್ಲಿ ಚಂಡಾಲನನ್ನು ನೋಡುವುದು, ಮುಟ್ಟುವುದು ಸಹ ಪಾಪಕರ ಎಂದಾಯಿತು. ಗೌತಮಸೂತ್ರವು ಚಂಡಾಲ ಮುಟ್ಟಿದರೆ ಸಚೇಲ ಸ್ನಾನ ಮಾಡಬೇಕೆನ್ನುತ್ತದೆ. ಇದು ಮೌರ್ಯ ಪೂರ್ವ ಯುಗದ ಕೊನೆಗೆ ಆದ ಬೆಳವಣಿಗೆಯಾದರೂ ಒಂದಿಡೀ ಸಮುದಾಯಕ್ಕೆ ಅಸ್ಪೃಶ್ಯತೆ ಕಳಂಕ ಹಚ್ಚುವ ಪರಿಪಾಠವಿರಲಿಲ್ಲ. ಗುಪ್ತರ ಕಾಲದಷ್ಟೊತ್ತಿಗೆ ಅಸ್ಪೃಶ್ಯತೆ ಭರತ ಖಂಡದಲ್ಲಿ ನೆಲೆಯೂರಲು ಆರಂಭಸಿತ್ತು.

ಆರ್. ಎಸ್ ಶರ್ಮಾ ಮತ್ತು ಕೊಸಾಂಬಿಯವರ ಪ್ರಕಾರ ಬೌದ್ಧ ಜಾತಕಗಳಲ್ಲಿ ಅನೇಕ ಕಡೆ ಚಂಡಾಲನು ಪಾಪದ ಮೂರ್ತಿಯಾಗಿ, ಅಸ್ಪೃಶ್ಯನಾಗಿ ವರ್ಣಿತನಾಗಿದ್ದಾನೆ. ಕಾಶಿಯ ಶೆಟ್ಟಿಯ ಮಗಳು ಚಂಡಾಲನನ್ನು ನೋಡಿದ್ದಕ್ಕೆ ಕಣ್ಣು ತೊಳೆದುಕೊಳ್ಳುತ್ತಾಳೆ. ಚಂಡಾಲನೊಬ್ಬನು ತಿಂದು ಬಿಸುಟಿದ್ದ ಅನ್ನಕ್ಕೆ ತಗುಲಿದ್ದ ಆಹಾರವನ್ನು ತಿಂದು 16 ಸಾವಿರ ಬ್ರಾಹ್ಮಣರು ಜಾತಿಭ್ರಷ್ಟರಾದರೆಂದು ಮತ್ತೊಂದು ಜಾತಕ ಕತೆ ಹೇಳುತ್ತದೆ. ಒಬ್ಬ ಬ್ರಾಹ್ಮಣನು ಚಂಡಾಲನ ಎಂಜಲು ತಿಂದು ಆತ್ಮಹತ್ಯೆ ಮಾಡಿಕೊಂಡ. ಅದೂ ತನ್ನ ಜಾತಿಯವರಿಂದ ಅವಹೇಳನ ತಪ್ಪಿಸಿಕೊಳ್ಳಲು! ಉತ್ತರಾಧ್ಯಯನ ಸೂತ್ರದಲ್ಲಿ ಉಲ್ಲೇಖವಾಗಿರುವಂತೆ ಕಾಮನಹಬ್ಬದಲ್ಲಿ ಕುಣಿಯುತ್ತಾ ಬಂದ ಮಾತಂಗರನ್ನು ಮೇಲುಜಾತಿಯವರು ಥಳಿಸಿ ಊರಾಚೆ ಅಟ್ಟಿದ ಕತೆ ಇದೆ. ಬೌದ್ಧ, ಜೈನ ಮೂಲಗಳಿಂದ ತಿಳಿದುಬರುವಂತೆ ಚಂಡಾಲರನ್ನು ಅಸ್ಪೃಶ್ಯರೆಂದು ಮೇಲುವರ್ಣದವರು ಹೀಯಾಳಿಸುತ್ತಿದ್ದರು. ಬ್ರಾಹ್ಮಣರಿಗೆ ಅವರ ಮೇಲೆ ವಿಶೇಷ ದ್ವೇಷವಿತ್ತು. ಗುಪ್ತರ ಕಾಲದಲ್ಲಿ ಹಲವು ಸಂಸ್ಕೃತ ಸಾಹಿತ್ಯ ಮತ್ತು ಧರ್ಮಸೂತ್ರಗಳನ್ನು ಪ್ರಕ್ಷೇಪವಾಗಿಸಿ ಅಸ್ಪೃಶ್ಯರನ್ನು ಶೂದ್ರರಿಗಿಂತ ಪ್ರತ್ಯೇಕವಾಗಿ ನೋಡುವ ಪರಿಪಾಠ ಆರಂಭವಾಯಿತು. ಇದನ್ನು ಬೌದ್ಧ ಮತ್ತು ಜೈನ ಗ್ರಂಥಗಳು ಗುರುತಿಸಿದ್ದವು ಮತ್ತು ಉಲ್ಲೇಖಿಸಿದ್ದವು.

ಕಾಲಕ್ರಮೇಣ ಶೂದ್ರರೂ ನಿರಾಕರಿಸಿದ ಸೇವಾ ಕಾರ್ಯಗಳಿಗೆ ನಿಯೋಜಿಸಿದ ಜನಾಂಗವೇ ಮುಂದೆ ಅಸ್ಪೃಶ್ಯರಾದರು. ಇದಕ್ಕೆ ಸಾಕ್ಷಿಯಾಗಿ ಚಂಡಾಲರು ಚಿಂದಿಬಟ್ಟೆ ಉಟ್ಟು ತಿರುಬೋಕಿಗಳಾದ ಚಿತ್ರಣ ಜಾತಕ ಕತೆಗಳಲ್ಲಿ ಬರುತ್ತದೆ. ಒಂದು ಜಾತಕದಲ್ಲಿ ಸೂಚಿತವಾಗಿರುವಂತೆ ಅವರನ್ನು ಬೀದಿಯ ಕಸ ಗುಡಿಸಲು ನೇಮಿಸಿದ್ದರು. ಚಂಡಾಲರ ಜೀವನವು ದುರ್ಬರವಾಗಿತ್ತು. ಬೌದ್ಧ ಗ್ರಂಥ ಅಂಗುತ್ತರ ನಿಕಾಯದಲ್ಲಿ ಹೇಳಿರುವಂತೆ ಒಬ್ಬ ಚಂಡಾಲ ಹುಡುಗ ಅಥವಾ ಹುಡುಗಿ ಚಿಂದಿ ಬಟ್ಟೆ ತೊಟ್ಟು, ಭಿಕ್ಷೆಗೆ ಬೋಕಿಯೊಂದನ್ನು ಹಿಡಿದು, ಗ್ರಾಮವೊಂದಕ್ಕೆ ಹೋಗಬೇಕಾದರೆ ತಗ್ಗಿಬಗ್ಗಿ ನಡೆಯಬೇಕಿತ್ತು. ಬೇರೆಯವರಿಂದ ಬೇರ್ಪಡಿಸಿ ಗುರುತಿಸಲು ಸಾಧ್ಯವಾಗುವಂತೆ ಅವರು ಬಣ್ಣದ ಬಟ್ಟೆ ತೊಟ್ಟು, ಸೊಂಟಕ್ಕೆ ಒಂದು ಹಗ್ಗ (ಉಡುದಾರ) ಸುತ್ತಿಕೊಂಡು ಓಡಾಡಬೇಕಿತ್ತು. ಈ ಜಾತಕಗಳೆಲ್ಲವೂ ಮೌರ್ಯ ಪೂರ್ವ ಕಾಲದ ಅಂತಿಮಘಟ್ಟಕ್ಕೆ ಸೇರಿದವು. ಗುಪ್ತರ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಆಚರಣೆ ಸಾಂಸ್ಥಿಕ ರೂಪ ತಳೆಯಿತೆಂದು ಹೇಳಬಹುದು. ಹಾಗಾಗಿ ಗುಪ್ತರ ಯುಗ ಸವರ್ಣರಿಗೆ ಸುವರ್ಣ ಯುಗ. ಅವರ್ಣರಿಗೆ ನರಕ ಯುಗ.

ದಾಸ ಮತ್ತು ಕರ್ಮಕಾರರಾಗಿದ್ದ ಶೂದ್ರರ ಜೀವನಕ್ಕಿಂತಲೂ ಹೆಚ್ಚಿನ ಕಾರ್ಮಣ್ಯ ಅಸ್ಪೃಶ್ಯರದ್ದು. ಶೂದ್ರರಿಗೆ ಸ್ವಲ್ಪಮಟ್ಟಿನ ಜೀವನ ಭದ್ರತೆ ಇದೆ. ಇವರಿಗೆ ಅದೂ ಇಲ್ಲ ಮತ್ತು ಚಾತುರ್ವರ್ಣ ಸಮಾಜವು ನಿಕೃಷ್ಟತೆಯನ್ನು ಇವರ ಮೇಲೆ ಸದಾ ಹೇರುತ್ತಿರುತ್ತದೆ. ಅಸ್ಪೃಶ್ಯರು ಬಗ್ಗೆ ಬೃಹಸ್ಪತಿ ವಿಶೇಷವಾಗಿ ಕಠಿಣ ಧೋರಣೆ ತಾಳುತ್ತಾನೆ. ಬ್ರಾಹ್ಮಣರಿಗೆ ಅಪಚಾರ ಮಾಡಿದರೆ ಇವರಿಗೆ ಎಂದಿಗೂ ದಂಡ ಹಾಕಬಾರದು, ಹೊಡೆತ ಕೊಡಬೇಕು. ಶ್ವಪಚ, ಮೇದ, ಚಾಂಡಾಲ, ಮಾವುತ, ದಾಸ ಮುಂತಾದವರ ಬಗ್ಗೆ ಇಂತದೇ ಕಟ್ಟಳೆಯನ್ನು ನಾರದ ವಿಧಿಸುತ್ತಾನೆ. ಚೀನಾ ಯಾತ್ರಿಕ ಫಾಹಿಯಾನನು ಚಂಡಾಲರು ಊರ ಹೊರಗೆ ವಾಸ ಮಾಡುತ್ತಿದ್ದರೆಂದೂ, ಮಾಂಸದ ವ್ಯಾಪಾರ ಮಾಡುತ್ತಿದ್ದರೆಂದೂ ತಿಳಿಸಿದ್ದಾನೆ. ಅವರು ಊರಿನೊಳಕ್ಕೆ ಬಂದಾಗ ಮೇಲ್ಜಾತಿಯವರು ದೂರವೇ ಇರುತ್ತಿದ್ದರು. ರಸ್ತೆಯೇ ಅವರಿಂದ ಮೈಲಿಗೆಯಾಯಿತು ಎಂದು ಪರಿಗಣಿಸುತ್ತಿದ್ದರು. ಒಟ್ಟಾರೆ ಅಂಬೇಡ್ಕರರು ಹೇಳುವಂತೆ ’ಬೌದ್ಧರು ಮತ್ತು ಬ್ರಾಹ್ಮಣರ ನಡುವೆ ಪಾರಮ್ಯಕ್ಕಾಗಿ ನಡೆದ ಹೋರಾಟದ ಮದ್ಯೆ ಅಸ್ಪೃಶ್ಯತೆಯ ಜನನವಾಯಿತು’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: VHP, ಬಜರಂಗದಳ ಪಕ್ಷವೊಂದರ ಬಾಲಂಗೋಚಿಗಳು; ಕರ್ನಾಟಕ ಅವರ ಜಹಗೀರಲ್ಲ: ಕುಮಾರಸ್ವಾಮಿ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ ಆರ್ಯರು ಹರಪ್ಪ ಸಾಮ್ರಾಜ್ಯವನ್ನು ನಾಶಮಾಡಿ ಆರ್ಯವರ್ತ ಸಾಮ್ರಾಜ್ಯವನ್ನು ಸ್ಥಾಪಿಸಿದಾಗಿನಿಂದಲು ಜಾರಿಯಲ್ಲಿದೆ. ಅಂದಾಜು ೪೫೦೦ ವರ್ಷಗಳಿಂದ.

LEAVE A REPLY

Please enter your comment!
Please enter your name here

- Advertisment -

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....