Homeಮುಖಪುಟರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

- Advertisement -
- Advertisement -

‘ಖೋ ಖೋ’ ಆಟವನ್ನೇ ಉಸಿರಾಡುತ್ತಾ, ತನ್ನ ಗುರು ದತ್ತಣ್ಣ ಹೇಳಿದ ಮಾರ್ಗದಲ್ಲಿ ಹೆಜ್ಜೆ ಇಟ್ಟು ರಾಷ್ಟ್ರಮಟ್ಟದಲ್ಲೂ ಆಟಗಾರನಾಗಿದ್ದ ಮನೋಹರ್‌ (ಶರಣ್‌) ಎಂಬ ಯುವಕ ಕೊನೆಗೆ ಕೆಲಸವೂ ಇಲ್ಲದೆ ಪರಿತಪಿಸುತ್ತಾನೆ. ಖೋಖೋ ಆಟಕ್ಕೆ ಮಾನ್ಯತೆ ಇಲ್ಲವಾಗಿ, ಅದನ್ನೇ ನಂಬಿದ್ದ ಆಟಗಾರರು ಬೀದಿಪಾಲಾಗುತ್ತಾರೆ. ಓದಿನಲ್ಲಿ ಮುಂದಿದ್ದ ಶಿಷ್ಯನನ್ನು ಆಟದತ್ತ ಎಳೆತಂದು ದಿಕ್ಕು ತಪ್ಪಿಸಿದೆ ಎಂಬ ಕೊರಗಿನಲ್ಲಿರುವ ಪಿ.ಟಿ.ಮಾಸ್ಟರ್‌ ದತ್ತಣ್ಣ, ಮನೋಹರ್‌ಗಾಗಿ ಒಂದು ಕೆಲಸ ಹುಡುಕಿಕೊಡಲು ಪರದಾಡುತ್ತಿದ್ದಾರೆ. ಕೊನೆಗೆ ‘ಬೆಟ್ಟದಪುರ’ ಎಂಬ ಕುಗ್ರಾಮದ ಹಿಂದುಳಿದ ಶಾಲೆಯೊಂದರಲ್ಲಿ ಕೆಲಸ ಕೊಡಿಸುತ್ತಾರೆ. ಆಲಸ್ಯ, ಉದಾಸೀನತೆ ಬೆಳೆಸಿಕೊಂಡಿದ್ದ ಮನೋಹರ್‌ ಬೆಟ್ಟದಪುರಕ್ಕೆ ಪಿ.ಟಿ.ಮಾಸ್ಟರ್‌ ಆಗಿ ಬಂದ ಮೇಲೆ ಏನಾಯಿತು?- ಎಂಬುದೇ ‘ಗುರು ಶಿಷ್ಯರು’ ಸಿನಿಮಾ.

ಹಳೆಯ ಫಾರ್ಮುಲಾಗಳಿಂದಲೇ ಜಡ್ಡುಗಟ್ಟಿದ ವ್ಯವಸ್ಥೆಯೊಳಗೆ ಕಾಲಕಾಲಕ್ಕೆ ಹೊಸ ನೀರು ಹರಿಯಬೇಕು. ಹೊಸ ಪ್ರತಿಭೆಗಳು ಅನಾವರಣವಾಗಬೇಕು. ಆಗ ಮಾತ್ರ ಒಂದು ವ್ಯವಸ್ಥೆಯೊಳಗೆ ಚಲನೆಶೀಲತೆ ಬರುತ್ತದೆ. ‘ಜಂಟಲ್‌ ಮ್ಯಾನ್‌’ ಎಂಬ ಸದಭಿರುಚಿಯ ಸಿನಿಮಾ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿಯವರು ‘ಗುರು ಶಿಷ್ಯರು’ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ವಿಸ್ತರಣೆ ಮಾಡಿದ್ದಾರೆ. ಮೂರರಲ್ಲಿ ಮತ್ತೊಂದು ಆಗದಂತಹ ಕ್ರೀಡಾ ಕಥೆಯನ್ನು ನೀಡಿದ್ದಾರೆ.

1981ರಲ್ಲಿ ಎಚ್.ಆರ್‌.ಭಾರ್ಗವ್‌ ಅವರು ನಿರ್ದೇಶಿಸಿದ ‘ಗುರುಶಿಷ್ಯರು’ ಸಿನಿಮಾವನ್ನು ಕನ್ನಡಿಗರು ಮರೆಯಲಾರರು. ಈ ಟೈಟಲ್‌ ಚಿರಪರಿಚಿತ. ಜಡೇಶ ನಿರ್ದೇಶನದ ‘ಗುರುಶಿಷ್ಯರು’ 2022ರ ಸಿನಿಮಾದರೂ ಕಥೆ ನಡೆಯುವುದು 1995ರ ಕಾಲಘಟ್ಟದಲ್ಲಿ. ‘ಜಂಟಲ್‌ಮ್ಯಾನ್‌’ ಸಿನಿಮಾದಂತೆಯೇ ‘ಗುರುಶಿಷ್ಯರು’ ಮೊದಲಾರ್ಧ ಭರಪೂರ ರಂಜನೆಯಾದರೆ, ದ್ವಿತೀಯಾರ್ಥ ಚಿಂತನೆಗೆ ಹೊರಳುತ್ತದೆ.

ಡಬ್ಬಲ್‌ ಮೀನಿಂಗ್‌ಗಳೇ ಹಾಸ್ಯದ ಮುಖವಾಡ ಹೊತ್ತು ರಾರಾಜಿಸುತ್ತಿರುವ ಹೊತ್ತಿನಲ್ಲಿ ಸಹ್ಯವಾದ ಸಂಭಾಷಣೆಯ ಮೂಲಕ ನಗಿಸಬಹುದು ಎಂಬುದನ್ನು ‘ಮಾಸ್ತಿ’ಯವರ ಸಂಭಾಷಣೆ ಸಾಬೀತು ಮಾಡಿದೆ. ಎಲ್ಲಿಯೂ ಅತಿರೇಕವೆನಿಸದ ಹದವಾದ ಸಂಭಾಷಣೆ ಬರೆಯಲಾಗಿದೆ.

ಜಡೇಶ ಅವರು ಕಥೆ ಹಾಗೂ ಚಿತ್ರಕತೆಗೆ ನೀಡಿರುವ ಒತ್ತು ಢಾಳಾಗಿ ಕಾಣುತ್ತದೆ. ಸಂತೆಗೆ ಮೂರು ಮೊಳ ನೇಯ್ಯದಂತೆ ಅಚ್ಚುಕಟ್ಟುತನ ಮೆರೆದಿದ್ದಾರೆ. ಪ್ರತಿಪಾತ್ರಕ್ಕೂ ಮಹತ್ವ ನೀಡಿದ್ದಾರೆ. ಇಂದಿರಾ ಗಾಂಧಿಯವರು ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಉಂಟು ಮಾಡಿದ ಸಾಮಾಜಿಕ ಪರಿವರ್ತನೆ, ಅದಕ್ಕೆ ಫ್ಯೂಡಲ್‌ ವ್ಯವಸ್ಥೆ ತೋರಿದ ಅಸಹನೆ, ಜೂಜಿನ ಮೋಜು ಇತ್ಯಾದಿ ಅಂಶಗಳನ್ನು ಒಳಗೊಂಡ ಪರಿಸರದಲ್ಲಿ ಕಥೆ ಸಾಗುತ್ತದೆ.

ಜೂಜುಪ್ರಿಯ ಜಮೀನ್ದಾರ (ಅಪೂರ್ವ ಕಾಸರವಳ್ಳಿ) ವಿರುದ್ಧ ಹೋರಾಡುತ್ತಿರುವ ಬೆಟ್ಟದಪುರದ ಜನರು ಖೋ ಖೋ ಆಟದಲ್ಲಿ ಗೆದ್ದು ತಮ್ಮ ಜಮೀನುಗಳನ್ನು ಉಳಿಸುತ್ತೇವೆ ಎಂದು ಸವಾಲು ಹಾಕುವುದು, ತಮ್ಮ ನಂಬಿಕೆಗೆ ಪಿ.ಟಿ. ಮಾಸ್ಟರ್ ಮನೋಹರ್‌ ಮೋಸ ಮಾಡಿದ್ದಾನೆಂದು ಬೇಸರಗೊಂಡ ಊರಿನ ಜನರು ತಮ್ಮ ಮಕ್ಕಳನ್ನು ಖೋ ಖೋ ಆಡಲು ಕಳಿಸದಿರುವಾಗ ಊರ ಹೊರಗೆ ವಾಸಿಸುತ್ತಿರುವ ಹಂದಿ ಜೋಗರ ಹುಡುಗನನ್ನು, ಬಹು ಆಳದ ಕೆರೆಗೆ ಧುಮುಕಿ ಮೀನು ಹಿಡಿಯುವ ಬೆಸ್ತರ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳುವುದು, ಊರು ಬಿಟ್ಟು ಹೋದ ಮುಸ್ಲಿಮ್ ಹುಡುಗರು ಮತ್ತೆ ತಂಡಕ್ಕೆ ಬಂದು ಸೇರುವುದು- ಇತ್ಯಾದಿ ದೃಶ್ಯಗಳು ಅಮೀರ್‌ ಖಾನ್‌ ಅಭಿನಯದ ‘ಲಗಾನ್‌’ ಸಿನಿಮಾವನ್ನು ನೆನಪಿಸುತ್ತವೆ.

ಕ್ಷಾಮದಿಂದ ನೊಂದ ಊರಿನ ಜನ ಎಲ್ಲ ಜಾತಿ ಮತವನ್ನು ಮರೆತು, ಒಂದಾಗಿ ಕ್ರಿಕೆಟ್ ಕಲಿತು ನಂತರ ಬ್ರಿಟಿಷರನ್ನು ಸೋಲಿಸಿದ್ದನ್ನು ಲಗಾನ್‌ನಲ್ಲಿ ಕಾಣಬಹುದು. ಜಡೇಶ ಅವರ ಕಥೆಯಲ್ಲೂ ಈ ಸ್ವರೂಪ ಕಂಡು ಬರುತ್ತದೆ. ಜಮೀನ್ದಾರನ ವಿರುದ್ಧ ಪಣ ತೊಟ್ಟು ಊರನ್ನು ಉಳಿಸಲು ಖೋ ಖೋ ಆಡುತ್ತಾರೆ. ಸ್ವಾತಂತ್ರ್ಯ ವೂರ್ವದ ಕಥೆಯಾದ ಲಗಾನ್‌ನಲ್ಲಿ ಅಸ್ಪೃಶ್ಯತೆ ಅಳಿಸಿ ಭಾರತೀಯರು ಒಂದಾಗಿ ಹೋರಾಡಬೇಕಾದ ಎಳೆ ಬರುತ್ತದೆ. ಸ್ವಾತಂತ್ರ್ಯ ನಂತರದ ಕಥೆಯಾದ ಗುರು ಶಿಷ್ಯರಲ್ಲಿ ಹಂದಿಜೋಗರು ಊರ ಹೊರಗೆ ಇರುವಂತೆ ತೋರಿಸಲಾಗಿದೆ. ಹಂದಿಜೋಗರ ಹುಡುಗ ತಂಡಕ್ಕೆ ಬಂದು ಸೇರಿದಾಗಲಾಗಲೀ, ಹಂದಿಯನ್ನು ಓಡಿಸಿಕೊಂಡು ಶಾಲಾ ಅಂಗಳದಲ್ಲಿ ನಿರ್ಭಿಡೆಯಿಂದ ಹಿಡಿಯುವ ವೇಳೆಯಲ್ಲಾಗಲೀ ಅಸ್ಪೃಶ್ಯತೆಯ ಅಂಜಿಕೆ ಪ್ರದರ್ಶನವಾಗಿಲ್ಲ. ಈ ಕುರಿತು ಹೆಚ್ಚಿನ ವಿವರಕ್ಕೆ ಹೋಗದಂತೆ ನಿಭಾಯಿಸಿರುವುದು ಜಡೇಶ್ ಅವರ ಜಾಣ್ಮೆಯೂ ಹೌದು.

ಗಾಂಧಿಯ ಪ್ರತಿಮೆಯ ಎದುರು ನಿಂತು, “ಮಾಡು ಇಲ್ಲವೇ ಮಡಿ” ಎಂದು ಪಣ ತೊಡುವ ಬೆಟ್ಟದಪುರದ ತಂಡ, ಕನ್ನಡ ಭಾವುಟ ಹಿಡಿದು ಬರುವ ಪಿ.ಟಿ.ಮಾಸ್ಟರ್ ಮನೋಹರ್‌- ದೃಶ್ಯಗಳು ನಿರ್ದೇಶಕರ ಅಸ್ಮಿತೆಯ ಗುರುತುಗಳಾಗಿ ಕಾಣುತ್ತವೆ.

ಇದನ್ನೂ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಲ್ಲಿ ಇರುವ ಸಾಮಾನ್ಯ ರೋಚಕತೆ ಇಲ್ಲಿಯೂ ಇದೆ. ವೈಯಕ್ತಿಕ ಸಾಧನೆಯ ಕಥಾ ಹಂದರವುಳ್ಳ ಸ್ಪೋರ್ಟ್ಸ್ ಡ್ರಾಮಾಗಳಿಗಿಂತ ಸಾಮಾಜಿಕ ವ್ಯವಸ್ಥೆಯೊಂದಿಗೆ ಬರೆತ ಕ್ರೀಡಾ ಕಥನಗಳಿಗೆ ಮಹತ್ವ ಇರುವುದನ್ನು ‘ಗುರು ಶಿಷ್ಯರು’ ಸಿನಿಮಾ ಮನಗಾಣಿಸಿದೆ. ಖೋ ಖೋ ಆಟಕ್ಕೆ ಹಾಗೂ ಖೋ ಖೋ ಆಟಗಾರರಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬ ಆಶಯವನ್ನು ಈ ಸಿನಿಮಾ ವ್ಯಕ್ತಪಡಿಸಿದೆ. ಅಂದಹಾಗೆ ಶಾಲಾ ಬಾಲಕನ ಲವ್ ಸ್ಟೋರಿಗೆ ನೀಡಿರುವ ಸ್ಪೇಸ್‌ ಸ್ವಲ್ಪ ಹೆಚ್ಚಾಯಿತು ಅನಿಸುತ್ತದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿ ಸುರೇಶ್‌ ಹೆಬ್ಳೀಕರ್‌, ಖಳನಾಯಕನಾಗಿ ಅಪೂರ್ವ ಕಾಸರವಳ್ಳಿ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಶಿಷ್ಯರ ಪಾತ್ರದಲ್ಲಿ ನಟಿರುವ ಎಲ್ಲ ಮಕ್ಕಳೂ ಇಷ್ಟವಾಗುತ್ತಾರೆ. ಅಜನೀಶ್ ಅವರ ಸಂಗೀತ ಮೆಚ್ಚುಗೆಯಾಗುತ್ತದೆ. ಹಾಡುಗಳು ಇಂಪಾಗಿವೆ. ಛಾಯಾಗ್ರಾಹಕ ಅರೂರ್‌ ಸುಧಾಕರ್‌ ಶೆಟ್ಟಿಯವರು ಹಳ್ಳಿಯ ಪರಿಸರವನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...