Homeಅಂಕಣಗಳುಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

ಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

- Advertisement -
- Advertisement -

ಲೇಖಕರು: ಆರ್ತಿ ಗಾರ್ಗಿ |

28ನೇ ನವೆಂಬರ್, ಬುಧವಾರ. ‘ಜೋ ಬೋಲೆ ಸೊ ನಿಹಾಲ್, ಸತ್ ಸ್ರೀ ಅಕಾಲ್’ ಎಂಬ ಘೋಷಣೆಗಳೊಂದಿಗೆ ನೂರಾರು ಸಿಖ್ ಯಾತ್ರಿಕರು ಕರ್ತಾರಪುರದ ಪುಣ್ಯಕ್ಷೇತ್ರದೆಡೆಗೆ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದರು. ದೇಶವಿಭಜನೆಯ ನಂತರ ಮೊಟ್ಟಮೊದಲ ಬಾರಿ ಭಾರತದ ಸಿಖ್ಖರು (ಭಾರತದಲ್ಲಿರುವ) ಡೇರಾ ನಾನಕ್ ಸಾಹಿಬ್‍ದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದ, ಪಾಕಿಸ್ತಾನದ ಕರ್ತಾರಪುರ ಸಾಹಿಬ್ ಗುರುದ್ವಾರದೆಡೆಗೆ ಹೋಗುತ್ತಿದ್ದರು. ಫತೆಹ್‍ಗಢ್ ಚೂರಿಯಾ ಗ್ರಾಮದ 65 ವರ್ಷದ ಸಿಖ್ ವ್ಯಕ್ತಿ, ಭಾರತ-ಪಾಕಿಸ್ತಾನದ ಗಡಿಯನ್ನು ದಾಟಿದ ಮೊದಲ ಕೆಲವರಲ್ಲಿ ಒಬ್ಬರು, “ಕೊನೆಗೂ ಈ ಕರ್ತಾರಪುರ್ ಕಾರಿಡಾರ್‍ನ ಕನಸು ನನಸಾಯಿತು” ಎಂದು ಉತ್ಸಾಹದಿಂದ ಹೇಳಿದರು.
ಇಂತಹ ಅನೇಕ ಸಿಖ್ಖರಿಗೆ ಕರ್ತಾರಪುರ ಕ್ಷೇತ್ರ ಕಣ್ಣಳತೆಯಲ್ಲಿದ್ದರೂ ಕಳೆದ 70 ವರ್ಷಗಳಿಂದ ಒಂದು ದೂರದ ಕನಸಾಗಿಯೇ ಉಳಿದಿತ್ತು. ಬುಧವಾರದಂದು, ಇವರೆಲ್ಲರ ನಿರೀಕ್ಷೆ ಸುಖಾಂತ್ಯ ಕಂಡಿತು.
ಕರ್ತಾರಪುರ್ ಸಾಹಿಬ್, ಏನಿದರ ಕತೆ?
ಜಗತ್ತಿನಾದ್ಯಂತ ಇರುವ ಸಿಖ್ಖರಿಗೆ ಕರ್ತಾರಪುರ್ ಸಾಹಿಬ್ ಗುರುದ್ವಾರ ಭಾರಿ ಪ್ರಾಮುಖ್ಯತೆ ಹೊಂದಿದ ಕ್ಷೇತ್ರವಾಗಿದೆ. ಧರ್ಮಗುರು ಗುರುನಾನಕ್ ಅವರು ತಮ್ಮ ಮೂರು ದಶಕಗಳ ಸುದೀರ್ಘ ತೀರ್ಥಯಾತ್ರೆಯ ನಂತರ ಇದೇ ಜಾಗದಲ್ಲಿ ನೆಲೆಸುವ ನಿರ್ಣಯ ತೆಗೆದುಕೊಂಡಿದ್ದರು. ಇಲ್ಲಿಯೇ ಗುರು ನಾನಕ್ ಅವರು ಕೃಷಿ ಮಾಡುತ್ತ, ಶಾಂತಿಯ ಸಂದೇಶವನ್ನು ಹರಡುತ್ತ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಎಂದು ನಂಬಲಾಗುತ್ತದೆ. ಇಲ್ಲಿ ಅವರು ತಮ್ಮ ಸಾವಿಗಿಂತ ಮುಂಚೆ 17 ವರ್ಷಗಳನ್ನು ಕಳೆದು, ತಮ್ಮ ಶಿಷ್ಯನಾದ ಭಾಯಿ ಲೆಹ್ನಾ (ಗುರು ಅಂಗದ್) ಅವರನ್ನು ಮುಂದಿನ ಗುರುವಾಗಿ ನೇಮಿಸಿದರು. 1947 ರಲ್ಲಿ ದೇಶವಿಭಜನೆಯಾಗಿ, ಕರ್ತಾರಪುರ ಸಾಹಿಬ್ ಗುರುದ್ವಾರ ಪಾಕಿಸ್ತಾನಕ್ಕೆ ಸೇರಿತು. ಸದ್ಯಕ್ಕೆ ಅಟ್ಟಾರಿ-ವಾಘಾ ಗಡಿಯ ಪಕ್ಕದ ನರೋವಾಲ್ ನಗರದಲ್ಲಿ ಸ್ಥಿತವಾಗಿದೆ.
ಒಬ್ಬರೇ ನಾನಕರಿಗೆ ಒಂದು ಸಮಾಧಿ, ಒಂದು ಗೋರಿ
ಕರ್ತಾರಪುರ ಸಾಹಿಬ್‍ನ ಮುಖ್ಯ ಸಮುಚ್ಚಯ ಗುರು ನಾನಕ್ ಅವರ ಒಂದು ಸಮಾಧಿ ಹಾಗೂ ಒಂದು ಗೋರಿಯನ್ನು ಹೊಂದಿದೆ. ಅದರ ಹಿಂದಿನ ಜನಪದ ಕಥೆ ಇಂತಿದೆ.
ಗುರು ನಾನಕ್ ಅವರ ಸಾವಿನ ನಂತರ ಅವರ ಅಂತ್ಯಕ್ರಿಯೆಯ ವಿಷಯವಾಗಿ, ಅವರ ಹಿಂದೂ ಮತ್ತು ಮುಸ್ಲಿಮ್ ಭಕ್ತರ ನಡುವೆ ವಾಗ್ವಾದ ಶುರುವಾಯಿತು. ಹಿಂದೂ ಭಕ್ತರು ಅವರನ್ನು ದಹನ ಮಾಡಬೇಕು ಎಂದು ಪಟ್ಟುಹಿಡಿದರೆ, ಮುಸ್ಲಿಮರು ಹೂಳಬೇಕೆಂದರು. ವಾದ ವಿವಾದದಲ್ಲಿ ಮಧ್ಯರಾತ್ರಿಯಾದಾಗ, ಮಾರನೇ ದಿನ ಇದನ್ನು ಬಗೆಹರಿಸುವ ಎಂದು ಎರಡೂ ಗುಂಪುಗಳು ನಿರ್ಣಯಿಸಿ ಮಲಗಿದವು. ಆದರೆ, ಬೆಳಗ್ಗೆ ಎದ್ದಾಗ ಅವರಿಗೆ ಕಂಡಿದ್ದು, ಗುರು ನಾನಕ್ ಅವರ ದೇಹವಿಟ್ಟಿದ್ದ ಜಾಗದಲ್ಲಿ ಒಂದು ಹೂವಿನ ದೊಡ್ಡ ರಾಶಿ. ಆಗಲೂ ಒಮ್ಮತಕ್ಕೆ ಬರಲಾಗದ್ದರಿಂದ, ಆ ಹೂವಿನ ರಾಶಿಯನ್ನು ಎರಡೂ ಗುಂಪುಗಳಿಗೆ ವಿಂಗಡಿಸಲಾಯಿತು. ಮುಸ್ಲಿಮ್ ಭಕ್ತಾದಿಗಳು ಅವರಿಗನುಗುಣವಾಗಿ ಅಂತ್ಯಕ್ರಿಯೆ ಮಾಡಿದರೆ, ಹಿಂದೂಗಳು ತಮಗನುಗುಣವಾಗಿ ಮಾಡಿದರು. ಹಾಗಾಗಿ, ಕರ್ತಾರಪುರ್ ಸಾಹಿಬ್‍ನಲ್ಲಿ ಒಂದು ಸಮಾಧಿ ಮತ್ತೊಂದು ಗೋರಿ ಎರಡೂ ಇವೆ.
ಭಾರತ-ಪಾಕಿಸ್ತಾನದ ಗಡಿಯಿಂದ ಬರೀ 1 ಕಿಲೋಮೀಟರ್ ದೂರದಲ್ಲಿರುವ ಪಂಜಾಬಿನ ಡೇರಾ ಬಾಬಾ ನಾನಕ್‍ದಿಂದ ಯಾತ್ರೆ ಪ್ರಾರಂಭವಾಗುತ್ತದೆ. 4-5 ಕಿಲೋಮೋಟರ್ ದೂರದಿಂದ, ಗಡಿಯಲ್ಲಿ ನಿಂತು ಕರ್ತಾರಪುರ್ ಸಾಹಿಬ್ ಸಮುಚ್ಚಯವನ್ನು ಬರಿಗಣ್ಣಿನಿಂದ ನೋಡಬಹದು. ದೇಶವಿಭಜನೆಯ ನಂತರ ಯಾತ್ರಿಗಳು ಬೈನಾಕ್ಯುಲರ್ ಬಳಸಿ ದರ್ಶನ ಪಡೆಯುತ್ತಿದ್ದರು.
ತಮ್ಮ ಅತ್ಯಂತ ಪವಿತ್ರ ಕ್ಷೇತ್ರವು ಗಡಿಯ ಕಾರಣದಿಂದಾಗಿ ಬೇರ್ಪಟ್ಟಿರುವುದು ಸಿಖ್ ಯಾತ್ರಿಗಳಿಗೆ ಒಂದು ನೋವಿನ ವಿಷಯವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಲು ಎರಡೂ ದೇಶಗಳಿಗೆ ಇಷ್ಟು ದೀರ್ಘ ಸಮಯ ಏಕೆ ಹಿಡಿಯಿತು?
ಇಂದಿರಾ ಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿವರೆಗೆ
ಒಂದು ತಿಂಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಔಪಚಾರಿಕವಾಗಿ ಘೋಷಿಸಿದ ಈ ಕರ್ತಾರಪುರ್ ಕಾರಿಡಾರ್ ಅನ್ನು ಈ ಹಿಂದೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಉಭಯದೇಶಗಳ ನಡುವಿನ ಐತಿಹಾಸಿಕ ಬಸ್ ಡಿಪ್ಲೊಮಸಿಯ ಸಂದರ್ಭದಲ್ಲಿ ಇದನ್ನು ಹೇಳಿದ್ದರು. ಪಾಕಿಸ್ತಾನವೂ ವಿಸಾ ಅಥವಾ ಪಾಸ್‍ಪೋರ್ಟ್ ಇಲ್ಲದೇ ಯಾತ್ರಿಗಳಿಗೆ ಈ ಕ್ಷೇತ್ರಕ್ಕೆ ಭೇಟಿ ನೀಡಲು ಒಂದು ಸೇತುವೆಯನ್ನು ನಿರ್ಮಿಸಲು ಒಪ್ಪಿಕೊಂಡಿತ್ತು. ಆದರೆ, ಎರಡೂ ದೇಶಗಳ ನಡುವಿನ ಶಾಂತಿ ಹೆಚ್ಚುಕಾಲ ಉಳಿಯಲಿಲ್ಲ. ಗಡಿಪ್ರದೇಶದಲ್ಲಾದ ಚಟುವಟಿಕೆಗಳಿಂದ ಕಾರ್ಗಿಲ್ ಯುದ್ಧವೇ ಆಯಿತು. ಈ ಬೆಳವಣಿಗೆ ಕಾರಿಡಾರ್‍ನ ಮಾತುಕತೆಗಳನ್ನು ಕೊನೆಗಾಣಿಸಿತು. ವಾಜಪೇಯಿ ಅವರ ಶಾಂತಿ ಉಪಕ್ರಮದ ಅಂಗವಾಗಿ ಮಾಡಿದ ಲಾಹೋರ್ ಪ್ರಯಾಣದಲ್ಲಿ ಕರ್ತಾರಪುರ್ ಕಾರಿಡಾರಿನ ಮೊದಲ ಪ್ರಸ್ತಾಪ ಸಿಗುತ್ತಾದರೂ, 1869 ರಲ್ಲೇ ಈ ವಿಷಯ ಭಾರತೀಯ ಸರಕಾರದ ಗಮನ ಸೆಳೆದಿತ್ತು.
1969 ಗುರು ನಾನಕ್ ಅವರ 500 ನೇ ಜನ್ಮಶತಾಬ್ದಿಯ ವರ್ಷವಾಗಿತ್ತು. ಅದರ ಸಂಭ್ರಮಾಚರಣೆಯ ಸಮಯದಲ್ಲಿ, ಅಂದಿನ ಪ್ರಧಾನಿಯವರು ಪಂಜಾಬ್ ಸರಕಾರಕ್ಕೆ ಆಶ್ವಾಸನೆಯೊಂದನ್ನು ನೀಡಿದ್ದರು. ಕರ್ತಾರಪುರ್ ಸಾಹಿಬ್‍ಗೆ ಪ್ರವೇಶ ಸಿಗುವಂತೆ ಪಾಕಿಸ್ತಾನದೊಂದಿಗೆ ಭೂವಿನಿಮಯ ಮಾಡಿಕೊಳ್ಳುವುದಾಗಿ ನುಡಿದಿದ್ದರು. ಕರ್ತಾರಪುರ್ ಸಾಹಿಬ್‍ಗಾಗಿ ಅದರ ಪಕ್ಕದ ಭಾರತೀಯ ಭೂಭಾಗದೊಂದಿಗೆ ವಿನಿಮಯ ಮಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದಾಗಿ ಇಂದಿರಾ ಗಾಂಧಿ ಹೇಳಿದ್ದರು. ಭಾರತದಲ್ಲಿಯ ನಂಕಾನಾ ಸಾಹಿಬ್‍ಗೆ ಪಾಕಿಸ್ತಾನದ ಯಾತ್ರಿಗಳಿಗೆ ಉಚಿತ ವೀಸಾ ನೀಡುವುದಾಗಿಯೂ ಅವರು ಹೇಳಿದ್ದರು. ಆದರೆ, ಈ ಆಶ್ವಾಸನೆಯ ತದನಂತರ ನಡೆದ ಭಾರತ-ಪಾಕಿಸ್ತಾನ್ ಯುದ್ಧ, ಬಾಂಗ್ಲಾದೇಶದ ಸೃಷ್ಟಿ, ಇವೆಲ್ಲ ಕಾರಣದಿಂದ ಕಾರಿಡಾರ್ ವಿಷಯ ಸ್ಮøತಿಪಟಲದಿಂದ ಅಳಿಸಿಹೋಯಿತು.
ಕರ್ತಾರಪುರ್ ಸಾಹಿಬ್ ಕ್ಷೇತ್ರಕ್ಕೆ ಪ್ರವೇಶವನ್ನು ಗಂಭೀರವಾಗಿ ಪರಿಗಣಿಸಿದ ಎರಡೂ ಸಂದರ್ಭಗಳಲ್ಲಿ, ಗಡಿಪ್ರದೇಶದಲ್ಲಿ ಹಿಂಸಾಚರಣೆ ಪ್ರಾರಂಭವಾಗಿ ಉಭಯದೇಶಗಳ ಸಂಬಂಧ ಹದಗೆಟ್ಟವು.
ಬುಧವಾರ, 28 ನವೆಂಬರ್‍ದಂದು ಶಾಂತಿಯ ಸಂದೇಶವನ್ನು ನೀಡುತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು “ನೀವು ಒಂದು ಹೆಜ್ಜೆಯಿಟ್ಟಲ್ಲಿ, ನಾವು ಎರಡು ಹೆಜ್ಜೆಯನ್ನಿಡುತ್ತೇವೆ”. ಅದಕ್ಕಿಂತ ಮುಂಚೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಈ ಹೆಜ್ಜೆಗೆ ತಮ್ಮ ಬೆಂಬಲ ನೀಡಿದ್ದರು. ಈ ಕರ್ತಾರಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ತಾನ್ ನಡುವೆಯ ‘ಬರ್ಲಿನ್ ಗೋಡೆ’ ಯಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದರು. ‘ಬರ್ಲಿನ್ ಗೋಡೆ ಧ್ವಂಸವಾಗುವುದು ಎಂದು ಯಾರು ನಂಬಿದ್ದರು? ಗುರು ನಾನಕ್ ಅವರ ಆಶೀರ್ವಾದದೊಂದಿಗೆ, ಈ ಕರ್ತಾರಪುರ್ ಕಾರಿಡಾರ್ ಗಡಿಗಳಾಚೆಯ ಜನರನ್ನು ಬೆಸೆಯುವ ಮಾಧ್ಯಮವಾಗಬಲ್ಲದು”. ಎಂದು ಮೋದಿ ಹೇಳಿದ್ದರು.
ಕೇಂದ್ರೀಯ ಸಚಿವೆ ಹರಸಿಮ್ರತ್ ಕೌರ್ ಅವರು ಕರ್ತಾರಪುರ್ ಕಾರಿಡಾರ್ ಉದ್ಘಾಟನೆಯ ಸಮಯದಲ್ಲಿ ಪ್ರಧಾನಮಂತ್ರಿಯ ಸಂದೇಶವನ್ನು ಒತ್ತಿಹೇಳುವಾಗಲೇ, ವಿದೇಶಾಂಗ ಸಚಿವೆ ಉಭಯ ದೇಶಗಳ ಮಧ್ಯೆ ಮಾತುಕತೆಗೆ ಇದೊಂದೇ ಕಾರಣವಾಗಲಾರದು ಎಂದರು. ಇನ್ನೂ ಕೆಲವರು, ಈ ಕಾರಿಡಾರ್‍ನಿಂದಾಗಿ ಖಾಲಿಸ್ತಾನಿ ಅಪಾಯ ಹಿಂದಿರುಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಈಗ ಹಳಿತಪ್ಪಿದ ಭಾರತ-ಪಾಕಿಸ್ತಾನದ ಮಾತುಕತೆಗಳನ್ನು ಮತ್ತೆ ಸರಿದಾರಿಗೆ ತರುವಲ್ಲಿ ಈ ಕಾರಿಡಾರ್ ಅದೃಷ್ಟಸೂಚಕವಾಗಿ ಪರಿಣಮಿಸಬಲ್ಲದೋ ಇಲ್ಲವೋ ಎನ್ನುವುದನ್ನು ಎರಡೂ ದೇಶದ ಸರಕಾರಗಳು ನಿರ್ಣಯಿಸಬೇಕಿದೆ. ಆದರೆ, ಒಂದಂತೂ ಸ್ಪಷ್ಟ, ಇಬ್ಭಾಗವಾಗಿರುವ ಎರಡೂ ದೇಶಗಳನ್ನು ಬೆಸೆಯುವುದರಲ್ಲಿ ಧರ್ಮ ಒಂದು ಸಾಧ್ಯತೆಯನ್ನು ಹುಟ್ಟುಹಾಕಬಹುದು ಎನ್ನುವುದನ್ನು ಈ ಕರ್ತಾರಪುರ್ ಕಾರಿಡಾರ್ ತೋರಿಸಿಕೊಟ್ಟಿದೆ.

ಕೃಪೆ: ಎಚ್‍ಡಬ್ಲ್ಯು ನ್ಯೂಸ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...