Homeಮುಖಪುಟಹರಿಯಾಣ: ಪ್ರತಿಭಟನಾನಿರತ ರೈತರಿಗೆ ಗುದ್ದಿದ ಬಿಜೆಪಿ ಸಂಸದನ ಕಾರು - ಆರೋಪ

ಹರಿಯಾಣ: ಪ್ರತಿಭಟನಾನಿರತ ರೈತರಿಗೆ ಗುದ್ದಿದ ಬಿಜೆಪಿ ಸಂಸದನ ಕಾರು – ಆರೋಪ

ಲಖಿಂಪುರ್ ಖೇರಿ ಘಟನೆ ಬಳಿಕ ಮತ್ತೊಂದು ಅಂತಹುದೆ ಘಟನೆ ನಡೆದಿದ್ದು ಒಬ್ಬ ರೈತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗನ ಕಾರು ರೈತರ ಮೇಲೆ ಹರಿಸಿದ ಕಾರಣಕ್ಕಾಗಿ 8 ಜನರು ಹತ್ಯೆಯಾದ ಘಟನೆ ದೊಡ್ಡ ಕೋಲಾಹಲ ಉಂಟುಮಾಡಿದೆ. ಇದೇ ಸಂದರ್ಭದಲ್ಲಿ ಹರಿಯಾಣದಲ್ಲಿಯೂ ಬಿಜೆಪಿ ಸಂಸದನ ಕಾರು ಪ್ರತಿಭಟನಾನಿರತರಿಗೆ ಗುದ್ದಿದ್ದು ಒಬ್ಬ ರೈತ ಗಾಯಗೊಂಡಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ.

ಬಿಜೆಪಿ ಸಂಸದ ನಯೀಬ್ ಸೈನಿ ಎಂಬುವವರಿಗೆ ಸೇರಿದ ಕಾರು ಅಂಬಾಲ ಬಳಿಯ ನರೈನ್‌ಗರ್ ನಲ್ಲಿ ಪ್ರತಿಭಟಿಸುತ್ತಿದ್ದ ರೈತರಿಗೆ ಗುದ್ದಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ರೈತನನ್ನು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕುರುಕ್ಷೇತ್ರ ಕ್ಷೇತ್ರದ ಬಿಜೆಪಿ ಸಂಸದ ನಯೀಬ್ ಸೈನಿ ಮತ್ತು ರಾಜ್ಯ ಗಣಿ ಸಚಿವ ಮೂಲ್ ಚಂದ್ ಶರ್ಮಾರವರು ನರೈನ್‌ಗರ್ ನ ಸೈನಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅವರ ಭೇಟಿ ವಿರೋಧಿಸಿ ಮತ್ತು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದರು. ಕಾರ್ಯಕ್ರಮದ ಮುಗಿದ ಬಳಿಕ ಬಿಜೆಪಿ ಸಂಸದನ ಕಾರು ರೈತನೊಬ್ಬನಿಗೆ ಗುದ್ದಿದೆ ಎಂದು ಆರೋಪಿಸಿರುವ ರೈತರು ದೂರು ನೀಡಲು ಮುಂದಾಗಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ವಿರೋಧಿಸಿ ಭಾನುವಾರ ಲಖಿಂಪುರ್‌ ಖೇರಿಯಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ, ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದಾನೆ ಎಂದು ರೈತರು ದೂರಿದ್ದರು. ಸೋಮವಾರ ಅದರ ವಿಡಿಯೋ ಸಹ ಹರಿದಾಡಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಶ್ನಿಸಿದೆ. ಶುಕ್ರವಾರದೊಳಗೆ ತನಿಖೆಯ ವಿವರ ಸಲ್ಲಿಸುವಂತೆ ಆದೇಶಿಸಿದೆ.


ಇದನ್ನೂ ಓದಿ: ಜೈಲಿನಲ್ಲಿ ಇರಬೇಕಾದವರು ಕಾರ್ಯಕ್ರಮ ಉದ್ಘಾಟಿಸುತ್ತಿದ್ದಾರೆ: ಯೋಗೇಂದ್ರ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...