ಸುಪ್ರೀಂ ಕೋರ್ಟ್
Photo Courtesty: Deccan Herald

ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಸುಪ್ರೀಂ ಕೋರ್ಟ್ “ಅಸಾಧಾರಣ ಮತ್ತು ಆಘಾತಕಾರಿ” ಎಂದು ಕರೆದಿದ್ದು, ಪ್ರಕರಣದಲ್ಲಿ ಸಾಕ್ಷಿಗಳನ್ನು ಹೇಗೆ ರಕ್ಷಿಸಲಾಗುತ್ತಿದೆ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ, “ಈ ಘಟನೆ ಅತ್ಯಂತ ಅಸಾಧಾರಣ ಮತ್ತು ಆಘಾತಕಾರಿ. ಹತ್ರಾಸ್ ಪ್ರಕರಣದ ಸಾಕ್ಷಿಯನ್ನು ಹೇಗೆ ರಕ್ಷಿಸಲಾಗಿದೆ ಎಂಬ ಅಫಿಡವಿಟನ್ನು ಮತ್ತು ಸಂತ್ರಸ್ತೆಯ ಕುಟುಂಬವು ವಕೀಲರನ್ನು ಆಯ್ಕೆ ಮಾಡಿದ್ದಾರಾ ಎಂಬ ಬಗ್ಗೆ ನೀವು ಕಂಡುಹಿಡಿಯಬೇಕೆಂದು ನಾವು ಬಯಸುತ್ತೇವೆ’’ ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಹತ್ರಾಸ್: ಶವ ಸುಟ್ಟಿದ್ದನ್ನು ಸುಪ್ರೀಂ‌ನಲ್ಲಿ ಸಮರ್ಥಿಸಿಕೊಂಡ ಯುಪಿ ಸರ್ಕಾರ!

ಯುಪಿ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಘಟನೆಗೆ ವಿಭಿನ್ನ ನಿರೂಪಣೆಗಳನ್ನು ನೀಡಲಾಗುತ್ತಿದ್ದು, ಸುಪ್ರೀಂ ಕೋರ್ಟ್ ತನಿಖೆಯನ್ನು ನೋಡಿಕೊಳ್ಳಬೇಕು ಎಂದು ಕೇಳಿಕೊಂಡರು.

ಫೋರೆನ್ಸಿಕ್

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಾಕ್ಷಿಗಳಿಗೆ ರಕ್ಷಣೆ ಮತ್ತು ಪ್ರಕರಣದ ವಿಚಾರಣೆಯನ್ನು ಯುಪಿಯಿಂದ ಬೇರೆಡೆಗೆ ವರ್ಗಾಯಿಸಲು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಟರ್‌ ಜನರಲ್ ತುಷಾರ್‌ ಮೆಹ್ತಾ ’ಸಾಕ್ಷಿಗಳನ್ನು ಈಗಾಗಲೇ ರಕ್ಷಿಸಲಾಗಿದೆ. ಸಾಕ್ಷಿಗಳ ರಕ್ಷಣೆಗಾಗಿ ಕಾನೂನು ಅಗತ್ಯವಿಲ್ಲ. ಅವರನ್ನು ರಕ್ಷಿಸಲಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: ’ಯುಪಿ, ಬಿಹಾರದಂತೆ ಪ.ಬಂಗಾಳವೂ ಮಾಫಿಯಾ ರಾಜ್ಯವಾಗುತ್ತಿದೆ’- ಬಿಜೆಪಿ ನಾಯಕ

ಯುಪಿ ಸರ್ಕಾರ ಮತ್ತು ರಾಜ್ಯದ ಅಧಿಕಾರಿಗಳು ಆರೋಪಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತ ಸತ್ಯಮಾ ದುಬೆ, ವಕೀಲರಾದ ವಿಶಾಲ್ ಠಾಕ್ರೆ ಮತ್ತು ರುದ್ರ ಪ್ರತಾಪ್ ಯಾದವ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯುತ್ತಿದೆ.

ಹತ್ರಾಸ್‌‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ದಲಿತ ಯುವತಿಯ ಶವವನ್ನು ’ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯುವುದನ್ನು ತಪ್ಪಿಸುವುದಕ್ಕಾಗಿ ಬೇಕಾಗಿಯೇ ರಾತ್ರೋ ರಾತ್ರಿ ಸುಟ್ಟಿದ್ದೇವೆ’ ಎಂದು ಗುಪ್ತಚರ ಇಲಾಖೆಯ ಮಾಹಿತಿ ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

PC:The Quint

ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ, “ಬಾಬರಿ ಮಸೀದಿ ತೀರ್ಪು ಬರುತ್ತಿದ್ದರಿಂದ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷನೆಯಾಗಿತ್ತು. ಹಾಗಾಗಿ ಮುಂಜಾನೆ 2.30 ರಲ್ಲಿ ಅಂತ್ಯಕ್ರಿಯೆ ನಡೆಸಿದ್ದೇವೆ” ಎಂದಿದೆ.

ಇದನ್ನೂ ಓದಿ: ಬಾಬ್ರಿ ಮಸೀದಿ ಕೆಡವುದರ ಹಿಂದೆ ಯಾರ ಸಂಚು ಇಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಧೀಶರು ಕೊಟ್ಟ10 ಕಾರಣಗಳು!

“ಇಡೀ ಪ್ರಕರಣಕ್ಕೆ ಜಾತಿ/ಕೋಮು ಬಣ್ಣವನ್ನು ನೀಡಲಾಗುತ್ತಿದೆ ಹಾಗೂ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಧರಣಿ ನಡೆಯುತ್ತಿರುವ ಬಗ್ಗೆ ಸೆಪ್ಟೆಂಬರ್ 29 ರ ಬೆಳಿಗ್ಗೆಯಿಂದಲೆ ಹತ್ರಾಸ್‌ನಲ್ಲಿನ ಜಿಲ್ಲಾಡಳಿತವು ಹಲವಾರು ಗುಪ್ತಚರ ಮಾಹಿತಿಯನ್ನು ಪಡೆದಿತ್ತು” ಎಂದು ಉತ್ತರ ಪ್ರದೇಶ ಹೇಳಿದೆ.

ರಾಜಕೀಯ ಪಕ್ಷಗಳ ಬೆಂಬಲಿಗರೊಂದಿಗೆ ಎರಡೂ ಸಮುದಾಯಗಳ/ಜಾತಿಗಳ ಲಕ್ಷಾಂತರ ಪ್ರತಿಭಟನಾಕಾರರು ಹಾಗೂ ಮಾಧ್ಯಮಗಳು ಮರುದಿನ ಬೆಳಿಗ್ಗೆ ಹಳ್ಳಿಯಲ್ಲಿ ಒಟ್ಟುಗೂಡುತ್ತಾರೆ ಎಂಬ ಮಾಹಿತಿ ಸರ್ಕಾರಕ್ಕೆ ಲಭಿಸಿತ್ತು ಮತ್ತು ಇದು ಹಿಂಸಾಚಾರಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ತರಬಹುದಾಗಿತ್ತು ಎಂದು ಸರ್ಕಾರ ಹೇಳಿದೆ.

ಅಷ್ಟೇ ಅಲ್ಲದೆ ಬಾಬ್ರಿ ಮಸೀದಿ ತೀರ್ಪು ಮತ್ತು ಕೊರೊನಾ ವೈರಸ್ ಸುರಕ್ಷತಾ ನಿಯಮಗಳಿಂದಾಗಿ ಅಲರ್ಟ್ ಕೂಡಾ ಇತ್ತು ಎಂದು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಡಿಸೆಂಬರ್‌ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು: ತೀರ್ಪು ವಿರುದ್ದ ಟ್ವಿಟ್ಟರ್‌‌ನಲ್ಲಿ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here