Homeಮುಖಪುಟಹತ್ರಾಸ್‌: ಸಿದ್ದೀಕ್‌ ಕಪ್ಪನ್‌‌ರನ್ನು ಕರೆದೊಯ್ದ ಚಾಲಕನಿಗೆ ಹೈಕೋರ್ಟ್‌ನಿಂದ ಜಾಮೀನು

ಹತ್ರಾಸ್‌: ಸಿದ್ದೀಕ್‌ ಕಪ್ಪನ್‌‌ರನ್ನು ಕರೆದೊಯ್ದ ಚಾಲಕನಿಗೆ ಹೈಕೋರ್ಟ್‌ನಿಂದ ಜಾಮೀನು

- Advertisement -
- Advertisement -

2020 ರ ಅಕ್ಟೋಬರ್ 5 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ ನಡೆದ ಪ್ರಕರಣದ ಬಗ್ಗೆ ವರದಿಗೆ ತೆರಳಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಇತರ ಇಬ್ಬರೊಂದಿಗೆ ಬಂಧಿಸಲ್ಪಟ್ಟ ಕ್ಯಾಬ್ ಚಾಲಕನಿಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ದಲಿತ ಯುವತಿ ಸಾವನ್ನಪ್ಪಿದ್ದರು.

ರಾಂಪುರ ನಿವಾಸಿ ಮೊಹಮ್ಮದ್ ಆಲಂ (33) ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರ ವಿಭಾಗೀಯ ಪೀಠವು, “ಮೇಲ್ಮನವಿದಾರರ ವಿರುದ್ಧದ ಆರೋಪಗಳನ್ನು ಪ್ರಾಥಮಿಕವಾಗಿ ನಂಬಲು ಯಾವುದೇ ಸಮಂಜಸವಾದ ಆಧಾರವಿಲ್ಲ ಎಂಬುವುದು ನಿಜ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಯೋತ್ಪಾದಕ ಚಟುವಟಿಕೆಗಳು ಅಥವಾ ರಾಷ್ಟ್ರದ ವಿರುದ್ಧದ ಇನ್ನಿತರ ಯಾವುದೇ ಚಟುವಟಿಕೆಗಳೊಂದಿಗೆ ಮೇಲ್ಮನವಿದಾರ ಒಳಗೊಂಡಿರುವುದು ಕಂಡುಬರುವುದಿಲ್ಲ” ಎಂದು ಪೀಠ ಹೇಳಿದೆ.

ಇದನ್ನೂ ಓದಿ: ‘ಹತ್ರಾಸ್‌ನಲ್ಲಿ ಯಾವುದೇ ಕೆಲಸ ಇರಲಿಲ್ಲ’: ಪತ್ರಕರ್ತ ಸಿದ್ದಿಕ್ ಕಪ್ಪನ್‌‌ಗೆ ಜಾಮೀನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಕ್ಯಾಬ್‌ ಚಾಲಕ ಮೊಹಮ್ಮದ್ ಆಲಂ, ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಪಿಎಫ್‌ಐ ಸದಸ್ಯರಾದ ಅತಿಕುರ್ ರೆಹಮಾನ್ ಮತ್ತು ಮಸೂದ್ ಅಹ್ಮದ್ ವಿರುದ್ಧ ಯುಪಿ ಪೊಲೀಸರು ಯುಎಪಿಎ, ದೇಶದ್ರೋಹ ಮತ್ತು ಇತರ ಐಪಿಸಿ ಸೆಕ್ಷನ್‌ಗಳು ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಲಂ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ವಿಶೇಷ ಕಾರ್ಯಪಡೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಆದರೂ, ಹೈಕೋರ್ಟ್ ಆಲಂ ಪ್ರಕರಣ ಮತ್ತು ಕಪ್ಪನ್ ಪ್ರಕರಣದ ನಡುವೆ ವ್ಯತ್ಯಾಸವನ್ನು ತೋರಿಸಿದೆ. “ಈ ಆರೋಪಿ ಮೇಲ್ಮಮನವಿರರ (ಆಲಂ) ಪ್ರಕರಣವು ಸಹ ಆರೋಪಿ ಸಿದ್ದಿಕ್ ಕಪ್ಪನ್ ಪ್ರಕರಣಕ್ಕಿಂತ ಪ್ರತ್ಯೇಕವಾಗಿದೆ. ಯಾಕೆಂದರೆ ಕಪ್ಪನ್‌ ವಶದಿಂದ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಪತ್ರಿಕಾ ವರದಿಗಾರರಾಗಿದ್ದು, ಅವರ ವಶದಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್, ದೋಷಾರೋಪಣೆಯ ಲೇಖನಗಳು ಮತ್ತು ವೀಡಿಯೊ ಕ್ಲಿಪ್‌ಗಳು ಇತ್ಯಾದಿಗಳು ಕಂಡುಬಂದಿವೆ.  ಆದರೆ ಪ್ರಸ್ತುತ ಆರೋಪಿ ಮೇಲ್ಮನವಿದಾರರ (ಆಲಂ) ವಶದಿಂದ ಅಂತಹ ಯಾವುದೇ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ” ಎಂದು ಹೈಕೋರ್ಟ್ ಹೇಳಿದೆ.

ಆಲಂ ಅವರನ್ನು ಪ್ರತಿನಿಧಿಸಿದ ವಕೀಲ ಅಮರಜೀತ್ ಸಿಂಗ್ ರಖ್ರಾ ಅವರು, “ಆಲಂ ಅವರು ತಮ್ಮ ಟ್ಯಾಕ್ಸಿಯಲ್ಲಿ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಸಾಗಿಸುತ್ತಿದ್ದರು” ಎಂದು ಹೇಳಿದ್ದಾರೆ. “ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾದ ಸೆಕ್ಷನ್‌ಗಳ ಅಡಿಯ ಅಪರಾಧಗಳನ್ನು ಆಲಂ ವಿರುದ್ಧ ಮಾಡಲು ಸಾಧ್ಯವಿಲ್ಲ” ಎಂದು ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: ಪೆಗಾಸಸ್ ಪಟ್ಟಿಯಲ್ಲಿದ್ದ ಜಾರ್ಖಂಡ್ ಪತ್ರಕರ್ತನ ಬಂಧನ; ದಿಟ್ಟ ವರದಿಗಾರಿಕೆಯೇ ಮುಳುವಾಯಿತೆ?

ಆಲಂ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸರ್ಕಾರಿ ವಕೀಲ ಉಮೇಶ್ ಚಂದ್ರ ವರ್ಮಾ ಅವರು “ಅವರು ಬಳಸುತ್ತಿರುವ ಕಾರನ್ನು ಖರೀದಿಸಲು ಭಯೋತ್ಪಾದಕ ನಿಧಿಯಿಂದ ಪಡೆದ ಹಣವನ್ನು ಬಳಸಿರುವ ಸಾಕಷ್ಟು ಪುರಾವೆಗಳು ತನಿಖೆಯಲ್ಲಿ ಕಂಡುಬಂದಿವೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...