Homeಮುಖಪುಟ24 ಗಂಟೆಗಳಿಂದ ಹೇಮಂತ್ ಸೊರೇನ್ ನಾಪತ್ತೆ; ಜಾರ್ಖಂಡ್ ಸಿಎಂಗಾಗಿ ಇಡಿ ಹುಡುಕಾಟ?

24 ಗಂಟೆಗಳಿಂದ ಹೇಮಂತ್ ಸೊರೇನ್ ನಾಪತ್ತೆ; ಜಾರ್ಖಂಡ್ ಸಿಎಂಗಾಗಿ ಇಡಿ ಹುಡುಕಾಟ?

- Advertisement -
- Advertisement -

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮುಂದಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮತ್ತು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ 24 ಗಂಟೆಗಳಿಂದ ಸೊರೇನ್ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅವರ ಪಕ್ಷದ ಮೂಲಗಳು ‘ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಮಂತ್ರಿ ಸುರಕ್ಷಿತವಾಗಿದ್ದಾರೆ ಮತ್ತು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದೆ.

ಇಡಿ ಮೂಲಗಳ ಪ್ರಕಾರ, ಸೊರೇನ್ ಇರುವಿಕೆಯ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ. ಅವರು ರಾಂಚಿಯಿಂದ ದೆಹಲಿಗೆ ಪ್ರಯಾಣಿಸಿದ ಚಾರ್ಟರ್ಡ್ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಅವರ ಹಲವಾರು ಸಿಬ್ಬಂದಿಗಳ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ದೆಹಲಿಯಲ್ಲಿರುವ ಅವರ ಬಿಎಂಡಬ್ಲ್ಯು ಕಾರನ್ನು ಇಡಿ ವಶಪಡಿಸಿಕೊಂಡಿದೆ. ಅವರ ಚಾಲಕನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕೆಲವು ದಾಖಲೆಗಳು ಮತ್ತು ₹36 ಲಕ್ಷ ಮೌಲ್ಯದ ನಗದು ವಶಕ್ಕೆ ಪಡೆಯಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಡಿ ಅಧಿಕಾರಿಗಳು ನಿನ್ನೆ ದೆಹಲಿಯಲ್ಲಿರುವ ಅವರ ಮನೆ ಮತ್ತು ಜಾರ್ಖಂಡ್ ಭವನಕ್ಕೆ ಭೇಟಿ ನೀಡಿದ್ದರು. ಆದರೆ, ಸೊರೇನ್ ಅವರು ಪತ್ತೆಯಾಗಲಿಲ್ಲ. ಅವರು ಭಾನುವಾರ ತಡರಾತ್ರಿ ದೆಹಲಿಯ ನಿವಾಸವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಜಾರ್ಖಂಡ್ ಬಿಜೆಪಿ ಘಟಕವು ‘ಮುಖ್ಯಮಂತ್ರಿ ಪರಾರಿಯಾಗಿದ್ದಾರೆ’ ಎಂದು ಹೇಳಿಕೊಂಡಿದ್ದು, ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಗಮನಿಸಬೇಕು’ ಎಂದು ಒತ್ತಾಯಿಸಿದೆ. ‘ಒಟ್ಟಾರೆ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇನೆ’ಎಂದು ರಾಜ್ಯಪಾಲರು ಹೇಳಿದ್ದಾರೆ. ಇದು ರಾಜ್ಯಪಾಲರ ಕೆಲಸ, ನಾನು ಮಾಡುತ್ತಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರು, ‘ಸೋರೆನ್ ತಮ್ಮ ದೆಹಲಿ ಮನೆಯಿಂದ ತಡರಾತ್ರಿ ಕಾಲ್ನಡಿಗೆಯಲ್ಲಿ ಓಡಿಹೋದರು’ ಎಂದು ಆರೋಪಿಸಿದ್ದಾರೆ.

ಜೆಎಂಎಂ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಶೀಘ್ರದಲ್ಲೇ ರಾಂಚಿಗೆ ಮರಳಲಿದ್ದಾರೆ. ಇಡಿ ಕ್ರಮಗಳು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದೆ. ಜೆಎಂಎಂ ಕೂಡ ಜಾರ್ಖಂಡ್‌ನಾದ್ಯಂತ ಸೊರೇನ್ ಅವರ ಬೆಂಬಲಿಸಿ ರ್ಯಾಲಿಗಳನ್ನು ನಡೆಸಿದೆ.

‘ಸಿಎಂ ಕೆಲವು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದು, ಶೀಘ್ರದಲ್ಲೆ ಅವರು ಹಿಂತಿರುಗುತ್ತಾರೆ. ಆದರೆ, ಇಡಿ ಕ್ರಮವು ಅಸಾಂವಿಧಾನಿಕವಾಗಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ ಎಂದು ತೋರುತ್ತದೆ’ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ.

ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರು, ಸೋರೆನ್ ಅವರು ಇರುವ ಸ್ಥಳದ ಕುರಿತು ಸೃಷ್ಟಿಸಲಾದ ಗೊಂದಲವು ಪಿತೂರಿಯ ಭಾಗವಾಗಿದೆ. ಎಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಸಿಎಂ ನಾಪತ್ತೆಯಾಗಿದ್ದಾರೆ ಎಂದು ಜನರು ವದಂತಿಗಳನ್ನು ಹರಡುತ್ತಿದ್ದಾರೆ’ ಎಂದು ಹೇಳಿದರು.

ಮಂಗಳವಾರದ ಸಭೆಗಾಗಿ ಜೆಎಂಎಂ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಎಲ್ಲಾ ಶಾಸಕರನ್ನು ಜಾರ್ಖಂಡ್‌ನಲ್ಲೆ ಉಳಿಯುವಂತೆ ಸೂಚಿಸಲಾಗಿದೆ. ಶಾಸಕರು ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬಿಜೆಪಿ ಸಂಸದ ಮತ್ತು ಜಾರ್ಖಂಡ್ ನಾಯಕ ನಿಶಿಕಾಂತ್ ದುಬೆ ಅವರು ಸೋರೆನ್ ಅವರ ಪತ್ನಿ ಕಲ್ಪನಾ ಅವರನ್ನು ಮುಖ್ಯಮಂತ್ರಿಯಾಗಿ ಹೆಸರಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಭೂ ಮಾಫಿಯಾದಿಂದ ಅಕ್ರಮವಾಗಿ ಮಾಲೀಕತ್ವ ಬದಲಾಯಿಸಿದ ಆರೋಪದ ದಂಧೆಗೆ ಸಂಬಂಧಿಸಿದಂತೆ ಸೊರೇನ್ ಅವರನ್ನು ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇಡಿ ಇದುವರೆಗೆ 14 ಮಂದಿಯನ್ನು ಬಂಧಿಸಿದೆ.

ತನಿಖಾ ಸಂಸ್ಥೆಯು ಜನವರಿ 20 ರಂದು ಸೊರೇನ್ ಅವರ ಹೇಳಿಕೆ ದಾಖಲಿಸಿತ್ತು. ಹೇಳಿಕೆಯೊಂದರಲ್ಲಿ, ಸೊರೇನ್ ಅವರನ್ನು ವಿಚಾರಣೆಗೊಳಪಡಿಸಿದ ದಿನಗಳ ನಂತರ ಏಕೆ ಹೊಸ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಜೆಎಂಎಂ ಪ್ರಶ್ನಿಸಿದೆ. ಅವರು ಬುಧವಾರ ವಿಚಾರಣೆಗೆ ಲಭ್ಯವಾಗುತ್ತಾರೆ ಎಂದು ಹೇಳಿದ ನಂತರವೂ ನಿನ್ನೆ ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿಯವರ ದೆಹಲಿ ನಿವಾಸವನ್ನು ತಲುಪಿದ್ದಾರೆ ಎಂದು ಪಕ್ಷ ಆರೋಪಿಸಿದೆ.

‘ಮುಖ್ಯಮಂತ್ರಿ ಅಲ್ಲದೆ, ಇದು ರಾಜ್ಯದ 3.5 ಕೋಟಿ ಜನರಿಗೆ ಮಾಡಿದ ಅವಮಾನವಲ್ಲವೇ? ಇಡಿ ಯಂತಹ ಸಂಸ್ಥೆಗಳು ಈಗ ಬಿಜೆಪಿಯ ಕೈಗೊಂಬೆಗಳಾಗಿವೆಯೇ? ರಾಜ್ಯ ಸರ್ಕಾರಗಳನ್ನು ರಚಿಸಲು ಅಥವಾ ಉರುಳಿಸಲು ಅವುಗಳನ್ನು ಬಳಸಬಹುದೇ’ ಎಂದು ಜೆಎಂಎಂ ಪ್ರಶ್ನಿಸಿದೆ.

ಇದನ್ನೂ ಓದಿ; ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜಕ್ಕೆ ಹೋಲಿಸಿದ ಬಿಜೆಪಿ ನಾಯಕ ಸಿ.ಟಿ ರವಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...