Homeಮುಖಪುಟಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ: ತಿಗಳ ಸಮುದಾಯದ ತೀರ್ಮಾನ

ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ: ತಿಗಳ ಸಮುದಾಯದ ತೀರ್ಮಾನ

ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬಂಧ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ 2021ರ ಜನವರಿಯಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು.

- Advertisement -
- Advertisement -

ವಿವಿಧ ಸಮುದಾಯಗಳಿಂದ ಅಭಿವೃದ್ಧಿ ನಿಗಮಗಳ ಸ್ಥಾಪನೆಗೆ ವ್ಯಾಪಕ ಒತ್ತಾಯ ಕೇಳಿ ಬರತೊಡಗಿದೆ. ಹಾಗೆ ಕುಂಚಿಟಿಗರು, ತಿಗಳರು, ಒಕ್ಕಲಿಗರು, ಕುರುಬರ ಸಂಘಗಳು ನಿಗಮ ಸ್ಥಾಪನೆಗೆ ಸರ್ಕಾರಕ್ಕೆ ಬೇಡಿಕೆಯಿಟ್ಟು ಸಿಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಅಶ್ವತ್ಥನಾರಾಯಣ ಸೇರಿದಂತೆ ಹಲವು ಮುಖಂಡರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.

ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. ಅದಾದ ಮೇಲೆ ಉತ್ತರ ಕರ್ನಾಟಕದ ವಿಧಾನಸಭೆ ಉಪಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮರಾಠ ಪ್ರಾಧಕಾರ ಮತ್ತು ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಅಧ್ಯಕ್ಷರನ್ನೂ ನೇಮಕ ಮಾಡಲಾಯಿತು. ಇದಾದ ಮೇಲೆಯೇ ನಿಗಮಗಳ ರಚನೆ ಬೇಡಿಕೆ ಹೆಚ್ಚಾಗಿದೆ. ಪ್ರತಿಯೊಂದು ಜಾತಿ ಸಮುದಾಯಗಳಿಂದಲೂ ಅಭಿವೃದ್ಧಿ ನಿಗಮಗಳ ಬೇಡಿಕೆ ವ್ಯಕ್ತವಾಗುತ್ತಿದೆ.

ತುಮಕೂರಿನಲ್ಲಿ ಸಭೆ ಸೇರಿದ ತಿಗಳ ಸಮುದಾಯದ ಮುಖಂಡರು ‘ಅಗ್ನಿವಂಶ ಕ್ಷತ್ರಿಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು’ ಆಗ್ರಹಿಸಿದ್ದಾರೆ. ಜೊತೆಗೆ ತಿಗಳ ಜನಾಂಗವನ್ನು ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎಂದು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ತಿಗಳ ಸಮುದಾಯ ಕೃಷಿ ಮತ್ತು ತೋಟಗಾರಿಕೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿದೆ. ಸೊಪ್ಪು-ತರಕಾರಿ ಮಾರಿ ಕುಟುಂಬ ನಿರ್ವಹಣೆಯಲ್ಲಿ ತೊಡಗಿದೆ. ಸಮುದಾಯ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ತಿಗಳರು ಕಟು ಆಚಾರಗಳನ್ನು ಅನುಸರಿಸುತ್ತಿದ್ದು ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದೆ. ಹಾಗಾಗಿ ಎಲ್ಲಾ ಸರ್ಕಾರಗಳು ಈ ಜನಾಂಗವನ್ನು ನಿರ್ಲಕ್ಷಿಸುತ್ತ ಬರುತ್ತಿವೆ. ರಾಜಕೀಯ ಶಕ್ತಿ ಇಲ್ಲದೆ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಆಗಿಲ್ಲ ಎಂಬ ಅಭಿಪ್ರಾಯ ಮುಖಂಡರಿಂದ ವ್ಯಕ್ತವಾಗಿದೆ.

ರಾಜ್ಯದ ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುಮಾರು 40 ಲಕ್ಷ ಮಂದಿ ಸಮುದಾಯದ ಜನಸಂಖ್ಯೆ ಇದೆ. ಹಲವು ಕ್ಷೇತ್ರಗಳ ಚುನಾವಣೆಯಲ್ಲಿ ತಿಗಳ ಸಮುದಾಯ ನಿರ್ಣಾಯಕವಾಗಿದೆ. ಅಭ್ಯರ್ಥಿ ಗೆಲುವಿನಲ್ಲಿ ಸಮುದಾಯ ಬಹುಮುಖ್ಯ ಪಾತ್ರ ವಹಿಸಿದೆ. ಆದರೂ ರಾಜಕೀಯ ಪಕ್ಷಗಳು ನಮ್ಮ ಸಮುದಾಯವನ್ನು ಕಡೆಗಣಿಸಿವೆ. ಸಮುದಾಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಲೇ ಬರುತ್ತಿದ್ದೇವೆ. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ತುಮಕೂರು ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ ನಾನುಗೌರಿ.ಕಾಂಗೆ ತಿಳಿಸಿದರು.

ತಿಗಳ ಜನಾಂಗದಲ್ಲಿ ಮೂರು ಉಪ ಪಂಗಡಗಳು ಇವೆ. ಎಲ್ಲಾ ಉಪ ಪಂಗಡಗಳ ಮುಖಂಡರು ನಿಯೋಗದಲ್ಲಿ ತೆರಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬಂಧ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ 2021ರ ಜನವರಿಯಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ನಮ್ಮ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು ಜನಾಂಗದ ಅಭಿವೃದ್ಧಿಗೆ ನಿಗಮ ಅನಿವಾರ್ಯ ಎಂದು ತಿಗಳ ಸಮುದಾಯದ ನೌಕರರ ಸಂಘದ ಅಧ್ಯಕ್ಷ ಎಚ್.ಅಂಜನೇಯ ಒತ್ತಾಯಿಸಿದ್ದಾರೆ.

ತುಮಕೂರು ನಗರದಲ್ಲಿ ಅತಿಹೆಚ್ಚು ಜನಸಂಖ್ಯೆಯಿರುವ ತಿಗಳರು ಪಾಲಿಕೆ ಚುನಾವಣೆಯಲ್ಲಿ ಹೆಚ್ಚು ಸಂಖ್ಯೆ ಸದಸ್ಯರು ಆಯ್ಕೆಯಾಗಿರುವುದು ಉಂಟು. ಈಗ ಶ್ರೀನಿವಾಸ್ ಪಾಲಿಕೆ ಸದಸ್ಯರಾಗಿದ್ದು, ಲಿಲಿತಾ ರವೀಶ್, ಶಶಿಕಲಾ ಅವರು ಕ್ರಮವಾಗಿ ಮೇಯರ್, ಉಪಮೇಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಸಭೆಯಲ್ಲಿ, ಕುಂಭಯ್ಯ, ಕುಂಭಿನರಸಯ್ಯ, ಪ್ರೆಸ್ ರಾಜಣ್ಣ, ನಾರಾಯಣಸ್ವಾಮಿ, ಸೂರ್ಯಪ್ರಕಾಶ್, ಅನಂತರಾಮು ಸೇರಿ ಹಲವು ಮುಖಂಡರು ಭಾಗವಹಿಸಿ ಮುಂದಿನ ತೀರ್ಮಾನಗಳ ಕುರಿತು ಚರ್ಚಿಸಿದ್ದಾರೆ.


ಇದನ್ನೂ ಓದಿ: ಜಾತಿಗೊಂದು ನಿಗಮ ರಚನೆ: ಸಿಎಂ ನಡೆಗೆ ಸೊಗಡು ಶಿವಣ್ಣ ತೀವ್ರ ಅಸಮಾಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...