Homeಮುಖಪುಟ'ಬಾಬರ್‌ ರಸ್ತೆ' ನಾಮಫಲಕದ ಮೇಲೆ ‘ಅಯೋಧ್ಯ ಮಾರ್ಗ' ಪೋಸ್ಟರ್ ಅಂಟಿಸಿದ ಹಿಂದೂ ಸೇನೆ

‘ಬಾಬರ್‌ ರಸ್ತೆ’ ನಾಮಫಲಕದ ಮೇಲೆ ‘ಅಯೋಧ್ಯ ಮಾರ್ಗ’ ಪೋಸ್ಟರ್ ಅಂಟಿಸಿದ ಹಿಂದೂ ಸೇನೆ

- Advertisement -
- Advertisement -

ದೆಹಲಿಯ ಬಾಬರ್ ರಸ್ತೆಯ ನಾಮಫಲಕದ ಮೇಲೆ  ಹಿಂದೂ ಸೇನಾ ಕಾರ್ಯಕರ್ತರು ‘ಅಯೋಧ್ಯ ಮಾರ್ಗ’ ಎಂದು ಪೋಸ್ಟರ್‌ಗಳನ್ನು ಅಂಟಿಸಿ ‘ಬಾಬರ್‌ ರಸ್ತೆ’ ಎಂಬ ಹೆಸರನ್ನು ಮರೆಮಾಚಲು ಯತ್ನಿಸಿದ್ದಾರೆ.

ಈ ಕುರಿತು ANI ಸುದ್ದಿ ಸಂಸ್ಥೆ ವಿಡಿಯೋವನ್ನು ಹಂಚಿಕೊಂಡಿದ್ದು, ದೆಹಲಿಯ ಬಾಬರ್ ರಸ್ತೆಯ ನಾಮಫಲಕದ ಮೇಲೆ, ಕೇಸರಿ ಬಣ್ಣದ ಸ್ಟಿಕ್ಕರ್‌ಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ “ಅಯೋಧ್ಯಾ ಮಾರ್ಗ” ಎಂದು ಬರೆಯಲಾಗಿದೆ. ಆದರೆ ಆ ಬಳಿಕ ಸ್ಟಿಕ್ಕರ್‌ಗಳನ್ನು ತೆಗೆದುಹಾಕಲಾಗಿದೆ.

2022ರಲ್ಲಿ ಬಲಪಂಥೀಯ ಸಂಘಟನೆಯು ಬಾಬರ್ ರಸ್ತೆಯ ಮರುನಾಮಕರಣಕ್ಕೆ ಒತ್ತಾಯಿಸಿತ್ತು. ಈ ಕುರಿತು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬಾಬರ್ ರಸ್ತೆ ಹೆಸರನ್ನು ಬದಲಾಯಿಸಬೇಕೆಂದು ಸಂಘಟನೆಯು ಬಹಳ ದಿನಗಳಿಂದ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ. ಬಾಬರ್ ರಸ್ತೆಯ ಹೆಸರನ್ನು ನಮ್ಮ ಮಹಾಪುರುಷರೊಬ್ಬರ ಹೆಸರಿಗೆ ಬದಲಾಯಿಸಬೇಕು ಎಂದು ಹಿಂದೂ ಸೇನೆ ಬಹಳ ದಿನಗಳಿಂದ ಒತ್ತಾಯಿಸುತ್ತಿತ್ತು. ಗೃಹ ಸಚಿವಾಲಯ ಮತ್ತು ಎನ್‌ಡಿಎಂಸಿಗೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುಪ್ರೀಂಕೋರ್ಟ್‌ನ ಆದೇಶದ ನಂತರ ಅಯೋಧ್ಯೆಯಲ್ಲಿ ಬಾಬರ್‌ನ ಮಸೀದಿಯೇ ಇಲ್ಲದಿದ್ದಾಗ, ದೆಹಲಿಯಲ್ಲಿ ಬಾಬರ್ ರಸ್ತೆ ಇದ್ದು ಕಾರ್ಯವೇನು? ಈ ರಸ್ತೆಯನ್ನು ನೋಡಿದಾಗ ನಾವು ಇಂದಿಗೂ ಬಾಬರ್ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ತೋರುತ್ತದೆ. ಅದಕ್ಕಾಗಿಯೇ ನಾವು ಅದನ್ನು ಅಯೋಧ್ಯಾ ಮಾರ್ಗಕ್ಕೆ ಬದಲಾಯಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಜನವರಿ 22ರಂದು ರಾಮಮಂದಿರದಲ್ಲಿ ಪ್ರಾಣ-ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ. ಇದೇ ವೇಳೆ ದೆಹಲಿಯ ಬಾಬರ್ ರಸ್ತೆಯ ನಾಮಫಲಕವನ್ನು ಮರೆಮಾಚಲು ಯತ್ನಿಸಲಾಗಿದೆ. ದೆಹಲಿ ಪೊಲೀಸರು ಸ್ಥಳಕ್ಕೆ ತೆರಳಿ ಪೋಸ್ಟರ್‌ನ್ನು ತೆಗೆದು ಹಾಕಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಇದನ್ನು ಓದಿ: ಫೇಸ್‌ಬುಕ್‌ ವಿರುದ್ಧ ರೋಹಿಂಗ್ಯಾ ನಿರಾಶ್ರಿತರು ಕೋರ್ಟ್ ಮೊರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read