Homeಮುಖಪುಟಮತಾಂತರ ಮಾಡಲು ಬಂದವರ ತಲೆ ತೆಗೆಯಿರಿ: ಬಿಜೆಪಿ ಮುಖಂಡರಿದ್ದ ವೇದಿಕೆಯಲ್ಲಿ ಹಿಂದುತ್ವವಾದಿಯ ದ್ವೇಷ ಭಾಷಣ

ಮತಾಂತರ ಮಾಡಲು ಬಂದವರ ತಲೆ ತೆಗೆಯಿರಿ: ಬಿಜೆಪಿ ಮುಖಂಡರಿದ್ದ ವೇದಿಕೆಯಲ್ಲಿ ಹಿಂದುತ್ವವಾದಿಯ ದ್ವೇಷ ಭಾಷಣ

- Advertisement -
- Advertisement -

‘ಮತಾಂತರ ಮಾಡಲು ಬಂದವರ ತಲೆ ತೆಗೆಯಿರಿ. ನಾನು ಸಂತನಾಗಿದ್ದರೂ ದ್ವೇಷವನ್ನು ಹರಡುತ್ತಿದ್ದೇನೆ ಎಂದು ನೀವು ಹೇಳಬಹುದು. ಆದರೆ ಕೆಲವೊಮ್ಮೆ ಬೆಂಕಿಯನ್ನು ಹೊತ್ತಿಸುವುದು ಮುಖ್ಯ. ನಾನು ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಮನೆ, ರಸ್ತೆ, ನೆರೆಹೊರೆ, ಹಳ್ಳಿಗೆ ಯಾರೇ ಬಂದರು ಅವರನ್ನು ಕ್ಷಮಿಸಬೇಡಿ’ ಎಂದು ಛತ್ತೀಸ್ ಗಡದ ಸ್ವಾಮಿ ಪರಮಾತ್ಮಾನಂದ ಅಲ್ಪಸಂಖ್ಯಾತರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿರುವ ವಿಡಿಯೋ ಇತ್ತೀಚಿಗೆ ವೈರಲ್ ಆಗಿದೆ.

ಸಮಾನ ಮನಸ್ಕ ಹಿಂದುತ್ವವಾದಿಗಳ ಒಕ್ಕೂಟ, ಸರ್ವ ಸನಾತನ ಹಿಂದು ರಕ್ಷಾ ಮಂಚ್ ಅಕ್ಟೋಬರ್‌ 1ರಂದು ಆಯೋಜಿಸಿದ್ದ ‘ಧಾರ್ಮಿಕ ಮತಾಂತರ ನಿಲ್ಲಿಸಿ’ (ಬಂದ್‌ ಕರೋ ಧರ್ಮಾಂತರನ್‌) ಪ್ರತಿಭಟನೆಯಲ್ಲಿ ಸ್ವಾಮಿ ಪರಮಾತ್ಮಾನಂದ ಈ ದ್ವೇಷ ಭಾಷಣ ಮಾಡುವಾಗ ಛತ್ತೀಸ್ ಗಡದ ಬಿಜೆಪಿಯ ಪ್ರಭಾವಿ ನಾಯಕರಾದ ರಾಮ್ವಿಚಾರ್ ನೇತಮ್, ನಂದಕುಮಾರ್ ಸಾಯಿ ಮತ್ತು ಬಿಜೆಪಿಯ ವಕ್ತಾರ ಅನುರಾಗ್ ಸಿಂಗ್ ದೇವ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ವೇದಿಕೆಯಲ್ಲಿ ಹಾಜರಿದ್ದರು ಎಂದು ದಿ ವೈರ್ ವರದಿ ಮಾಡಿದೆ.

‘ನಾನೊಬ್ಬ ಸಂತ. ನಾನು ಹೆದರುವುದಿಲ್ಲ. ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಮನೆಯಲ್ಲಿ ಲಾಠಿ ಇಟ್ಟುಕೊಳ್ಳಿ, ನಮ್ಮ ಹಳ್ಳಿಗಳಲ್ಲಿ ಜನರು ಕೈ ಕೊಡಲಿ ಇಟ್ಟಕೊಳ್ಳುತ್ತಾರೆ. ಅವರು ಕೊಡಲಿಗಳನ್ನು ಏಕೆ ಇಟ್ಟುಕೊಳ್ಳುತ್ತಾರೆ? ನೀವು ನಿಮ್ಮ ಹತ್ತಿರ ಪರಶು ಇಟ್ಟುಕೊಳ್ಳಿ’ ಎಂದು ಕೋಮು ದ್ವೇಷ ಕಾರಿದ್ದಾರೆ.

ಮುಂದುವರೆದು, ‘ನೀವೇಕೆ ಬಾವಿಗಾಗಿ ಸಾಗರವನ್ನು ತೊರೆಯುತ್ತೀರಿ? ಎಂದು ಮತಾಂತರಗೊಂಡ ಕ್ರೈಸ್ತರೊಂದಿಗೆ ಮೊದಲು ಸೌಜನ್ಯದೊಂದಿಗೆ ಕೇಳಲು ಬಯಸುತ್ತೇನೆ. ಬೇಡ ಎನ್ನುತ್ತೇನೆ, ಕೊನೆಗೆ ಕೊಲ್ಲುತ್ತೇನೆ ಎಂದು ನಿಲ್ಲು, ಪ್ರತಿಭಟಿಸು, ಕೊಲ್ಲು (ರೊಕೊ, ಫಿರ್ ಟೊಕೊ, ಫಿರ್ ಥೋಕೊ) ನಿಯಮವನ್ನು ಪಾಲಿಸಿ’ ಎಂದಿದ್ದಾರೆ.

ವೀಡಿಯೋದಲ್ಲಿ, ಮಾಜಿ ಸಂಸದೆ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷ ನಂದ ಕುಮಾರ್ ಸಾಯಿ ಪರಮಾತ್ಮಾನಂದರ ಭಾಷಣಕ್ಕೆ ನಗುತ್ತಾ, ಚಪ್ಪಾಳೆ ತಟ್ಟುವುದು, ಅವರ ಮಾತುಗಳಿಗೆ ಒಪ್ಪಿಗೆ ಸೂಚಿಸಿರುವಂತೆ ಕಾಣುವುದನ್ನು ನೋಡಬಹುದು. ವೇದಿಕೆಯಲ್ಲಿ ನಾಯಕರೆಲ್ಲರೂ ಬಿಲ್ಲು, ಬಾಣ ಮತ್ತು ಈಟಿಯೊಂದಿಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.

ಸಂಸ್ಕೃತ ಮಂಡಳಿಯ ಮಾಜಿ ಮುಖ್ಯಸ್ಥ ಪರಮಾತ್ಮಾನಂದರ ಛತ್ತೀಸ್ ಗಡದ ಪ್ರಮುಖ ಹಿಂದುತ್ವವಾದಿ ನಾಯಕರಾಗಿದ್ದು, ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಈ ಹಿಂದೆ ಹಸು ಕಳ್ಳ ಸಾಗಣೆದಾರರನ್ನು ಕೊಲ್ಲುವವರನ್ನು ಅಭಿನಂದಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. 2017ರಲ್ಲಿ ‘ಗೋವುಗಳನ್ನು ಕೊಲ್ಲುವವರನ್ನು ಗಾಜಿನ ಗುಂಡುಗಳಿಂದ ಹೊಡೆದು ಸಾಯಿಸಬೇಕು’ ಎಂದು ಹೇಳಿಕೆ ನೀಡಿದ್ದರು.

ಸಮಾನ ಮನಸ್ಕ ಹಿಂದುತ್ವವಾದಿಗಳ ಒಕ್ಕೂಟ ಸರ್ವ ಸನಾತನ ಹಿಂದು ರಕ್ಷಾ ಮಂಚ್, ಸುಕ್ಮಾದ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಸಲ್ಲಿಸಿದ್ದು, ಕಾನೂನು ಬಾಹಿರ’ ಧಾರ್ಮಿಕ ಮತಾಂತರವನ್ನು ತಡೆಗಟ್ಟಲು, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಹಾಗೂ ಇತ್ತೀಚೆಗೆ ಮತಾಂತರಗೊಂಡ ಬುಡಕಟ್ಟು ಜನರ ಮೇಲೆ ಮೇಲೆ ಕಣ್ಣಿಡುವಂತೆ ಮನವಿ ಮಾಡಿತ್ತು.


ಇದನ್ನೂ ಓದಿ: ಬೆಳಗಾವಿಯಲ್ಲಿ ತಲವಾರು ಮೆರವಣಿಗೆ: ಬಜರಂಗದಳ ಸದಸ್ಯರ ವಿರುದ್ಧ ದೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...