‘ಹಿಂದುತ್ವ ಎಂದರೆ ಸಹಿಷ್ಣುತೆ’ ಎಂದು ಮಹಾರಾಷ್ಟ್ರ ಬಿಜೆಪಿಯ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿದ್ದು, ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಮಾಜಿ ಉಪರಾಷ್ಟ್ರಪತಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
‘ಕೊರೊನೋತ್ತರ ಸಮಾಜವು ಧಾರ್ಮಿಕತೆ ಮತ್ತು ಕಠಿಣ ರಾಷ್ಟ್ರೀಯತೆ ಎಂಬ ಎರಡು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಿದೆ’ ಎಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ ಒಂದು ದಿನದ ನಂತರ ಫಡ್ನವೀಸ್ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಬೀಫ್ ಬ್ಯಾನ್ ಯಾಕಿಲ್ಲ, ಇದ ನಿಮ್ಮ ಹಿಂದುತ್ವ?: ಉದ್ಧವ್ ಠಾಕ್ರೆ ವಾಗ್ದಾಳಿ
ಅನ್ಸಾರಿಯವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ “ಹಿಂದುತ್ವವು ಎಂದಿಗೂ ಕಠಿಣ (ಸಿದ್ಧಾಂತ) ಅಲ್ಲ. ಅದು ಯಾವಾಗಲೂ ಸಹಿಷ್ಣುವಾಗಿದೆ. ಈ ದೇಶದಲ್ಲಿ ಹಿಂದುತ್ವವು ಪ್ರಾಚೀನ ಜೀವನ ವಿಧಾನವಾಗಿದೆ. ಹಿಂದೂಗಳು ಯಾರ ಮೇಲೂ, ಯಾವುದೇ ದೇಶ ಅಥವಾ ಯಾವುದೇ ರಾಜ್ಯದ ಮೇಲೂ ದಾಳಿ ಮಾಡಿಲ್ಲ” ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? – ಜಾನ್ ಡ್ರೀಜ್ ವಿಶೇಷ ಲೇಖನ
ಹಿಂದೂ ಧರ್ಮವು ಸಹಿಷ್ಣುತೆಯನ್ನು ಕಲಿಸಿದೆ. ಇದರಿಂದಾಗಿ ವಿವಿಧ ಧರ್ಮ ಮತ್ತು ಜಾತಿಗಳ ಜನರು ಭಾರತದಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ ಎಂದು ಫಡ್ನವೀಸ್ ಹೇಳಿದರು.
ಇದನ್ನೂ ಓದಿ: ಕೇರಳದಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರನ ಕುರಿತು ಸಿನೆಮಾ: ದ್ವೇಷಾಭಿಯಾನ ಪ್ರಾರಂಭಿಸಿದ ಹಿಂದುತ್ವವಾದಿಗಳು