Homeಮುಖಪುಟಮಹಾರಾಷ್ಟ್ರದಲ್ಲಿ ಬಿಜೆಪಿ 3 ರಾಜ್ಯಸಭಾ ಸ್ಥಾನಗಳನ್ನು ಗೆದ್ದದ್ದು ಹೇಗೆ?

ಮಹಾರಾಷ್ಟ್ರದಲ್ಲಿ ಬಿಜೆಪಿ 3 ರಾಜ್ಯಸಭಾ ಸ್ಥಾನಗಳನ್ನು ಗೆದ್ದದ್ದು ಹೇಗೆ?

- Advertisement -
- Advertisement -

ಮಹಾರಾಷ್ಟ್ರದ ರಾಜ್ಯಸಭಾ ಚುನಾವಣೆಯಲ್ಲಿ ಎಲ್ಲಾ ಮೂವರು ಬಿಜೆಪಿ ಅಭ್ಯರ್ಥಿಗಳು ಅದ್ಭುತ ಗೆಲುವು ಸಾಧಿಸಿದ್ದಾರೆ. ಶಿವಸೇನೆಯ ಶಾಸಕರ ಅನರ್ಹ ಮತವು ಶಿವಸೇನೆಯ ಸಂಜಯ್ ಪವಾರ್ ಅವರ ಸೋಲಿಗೆ ಕಾರಣವಾಯಿತು.

ನಿಯಮಗಳು ಉಲ್ಲಂಘನೆಯಾಗಿವೆ ಎಂದು ಆರೋಪಿಸಿ ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಎರಡೂ ಕೂಡ ಚುನಾವಣಾ ಆಯೋಗಕ್ಕೆ ದೂರು ನೀಡಿದವು. ಮತ ಎಣಿಕೆ ಸ್ಥಗಿತಗೊಂಡಿತು. ಆದರೆ ಮಧ್ಯರಾತ್ರಿಯ ನಂತರ ಆರಂಭವಾದ ಮತಗಳ ಎಣಿಕೆಯಲ್ಲಿ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಗೆಲ್ಲಲು ಅಗತ್ಯವಿದ್ದ ಮತಗಳಿಗಿಂತ ಹೆಚ್ಚು ಮತಗಳನ್ನು ಬಿಜೆಪಿ ಪಡೆಯಿತು. ಎಂವಿಎಯ ನಾಲ್ಕನೇ ಮತ್ತು ಸೇನೆಯ ಎರಡನೇ ಅಭ್ಯರ್ಥಿಗಳಿಗಿದ್ದ ಅವಕಾಶಗಳನ್ನು ಬಿಜೆಪಿ ಕಡಿಮೆ ಮಾಡಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಹಾರಾಷ್ಟ್ರದಲ್ಲಿ ಅಭ್ಯರ್ಥಿಯೊಬ್ಬರು ಗೆಲ್ಲಲು ಕನಿಷ್ಠ 41 ಮತಗಳ ಅಗತ್ಯವಿದೆ. ಆದರೆ ಬಿಜೆಪಿ ಅಭ್ಯರ್ಥಿಗಳಾದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಎರಡನೇ ಬಿಜೆಪಿ ಅಭ್ಯರ್ಥಿ ಅನಿಲ್ ಬೋಂಡೆ 48 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಏಕೈಕ ಅಭ್ಯರ್ಥಿ ಇಮ್ರಾನ್ ಪ್ರತಾಪ್‌ಗರ್ಹಿ 44 ಮತಗಳನ್ನು ಪಡೆದರು. ಎನ್‌ಸಿಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ 43 ಮತಗಳನ್ನು ಪಡೆದರು. ಬಿಜೆಪಿಯ ಮೂರನೇ ಅಭ್ಯರ್ಥಿ ಧನಂಜಯ್ ಮಹಾದಿಕ್ 41 ಮತಗಳನ್ನು ಪಡೆದರು. ಒಟ್ಟು 284 ಮತಗಳು ಮಾನ್ಯವಾದವು.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜೈಲಿನಲ್ಲಿರುವ ಇಬ್ಬರು ಎನ್‌ಸಿಪಿ ಶಾಸಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರನ್ನು ಮತ ಚಲಾವಣೆಗೆ ಕಳುಹಿಸಲು ಮುಂಬೈ ವಿಶೇಷ ನ್ಯಾಯಾಲಯ ನಿರಾಕರಿಸಿದ್ದರಿಂದ ಆಡಳಿತರೂಢ ಎಂವಿಎಗೆ ಹಿನ್ನಡೆಯಾಯಿತು. ಹೀಗಾಗಿ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಂವಿಎ ಆಸೆಗೆ ಹಿನ್ನಡೆಯಾಯಿತು.

ಆಡಳಿತಾರೂಢ ಪಕ್ಷಗಳ ಶಾಸಕರು ಹಾಕಿದ ಮತಗಳನ್ನು ಪ್ರಶ್ನಿಸಿ ಬಿಜೆಪಿ ಚುನಾವಣಾ ಆಯೋಗದ ಮೊರೆ ಹೋಯಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಮಧ್ಯಾಹ್ನ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ, “ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್, ಕಾಂಗ್ರೆಸ್‌ನ ಯಶೋಮತಿ ಠಾಕೂರ್ ಮತ್ತು ಶಿವಸೇನಾ ಶಾಸಕ ಸುಹಾಸ್ ಖಾಂಡೆ ಅವರ ಮತಪತ್ರಗಳನ್ನು ತಿರಸ್ಕರಿಸಬೇಕು. ಯಾಕೆಂದರೆ ಇವರು ಮತಪತ್ರಗಳನ್ನು ಅನಧಿಕೃತ ಪಕ್ಷದ ನಾಯಕರಿಗೆ ತೋರಿಸಿದ್ದಾರೆ” ಎಂದು ಬಿಜೆಪಿ ದೂರಿತು.

ಚುನಾವಣಾ ಆಯೋಗದ ನಿಯಮದ ಪ್ರಕಾರ, ಒಬ್ಬ ಶಾಸಕ ತನ್ನ ಮತಪತ್ರವನ್ನು ಪಕ್ಷದ ಪೋಲಿಂಗ್ ಏಜೆಂಟ್‌ಗೆ ಮಾತ್ರ ತೋರಿಸಬಹುದು.

ಇದನ್ನೂ ಓದಿರಿ: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌, ಜೆಡಿಎಸ್‌ ಕಿತ್ತಾಟದಲ್ಲಿ ಬಿಜೆಪಿಗೆ ಲಾಭ

ಎಂವಿಎ ಕೂಡ ದೂರು ಸಲ್ಲಿಸಿತು. ಸ್ವತಂತ್ರ ಶಾಸಕ ರವಿ ರಾಣಾ ಮತ್ತು ಬಿಜೆಪಿ ಶಾಸಕ ಸುಧೀರ್ ಮುಂಗಂತಿವಾರ್ ಅವರು ಚಲಾಯಿಸಿದ ಮತಗಳನ್ನು ಇದೇ ಆಧಾರದ ಮೇಲೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಸ್ವತಂತ್ರ ಲೋಕಸಭಾ ಸಂಸದೆ ನವನೀತ್ ರಾಣಾ ಅವರ ಪತಿ ರಾಣಾ ಅವರು ಹನುಮಾನ್ ಚಾಲೀಸಾವನ್ನು ತೋರಿಸಿದ್ದಾರೆ ಎಂದು ಎಂವಿಎ ಮುಖಂಡರು ಆರೋಪಿಸಿದರು.

ಈ ವಿವಾದದ ನಂತರ ಚುನಾವಣಾ ಆಯೋಗವು ಖಾಂಡೆ ಚಲಾಯಿಸಿದ ಮತವನ್ನು ರದ್ದುಗೊಳಿಸಿತು. ಇದು ಎಂವಿಎ ಅಭ್ಯರ್ಥಿಗಳ ಅವಕಾಶಗಳನ್ನು ಇನ್ನಷ್ಟು ಕುಗ್ಗಿಸಿತು.

“ಚುನಾವಣಾ ಆಯೋಗ ನಮ್ಮ ಒಂದು ಮತವನ್ನು ಅಸಿಂಧುಗೊಳಿಸಿದೆ. ನಾವು ಎರಡು ಮತಗಳಿಗೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗವು ಅವರಿಗೆ ಒಲವು ತೋರಿತು” ಎಂದು ಫಲಿತಾಂಶಗಳು ಪ್ರಕಟವಾದ ನಂತರ ಶಿವಸೇನೆಯ ಸಂಜಯ್ ರಾವತ್ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...