Homeಕರ್ನಾಟಕಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗೆ ಇಂದು ಬೃಹತ್‌ ಜಾಥಾ, ಸಮಾವೇಶ; ‘ಬಾಡೂಟದ ಬುತ್ತಿಯೊಂದಿಗೆ ಬನ್ನಿ...’

ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗೆ ಇಂದು ಬೃಹತ್‌ ಜಾಥಾ, ಸಮಾವೇಶ; ‘ಬಾಡೂಟದ ಬುತ್ತಿಯೊಂದಿಗೆ ಬನ್ನಿ…’

ಸಂಗೀತ ನಿರ್ದೇಶಕ ಹಂಸಲೇಖ ಅವರ ಮೇಲೆ ನಡೆಯುತ್ತಿರುವ ಮಾನಸಿಕ ದಾಳಿಗಳನ್ನು ಖಂಡಿಸಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ನವೆಂಬರ್ 26ರಂದು (ಶುಕ್ರವಾರ) ಬೃಹತ್‌ ಜಾಥಾ ಹಾಗೂ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

- Advertisement -
- Advertisement -

ಸಂಗೀತ ನಿರ್ದೇಶಕ, ನೆಲದ ಕವಿ ಹಂಸಲೇಖ ಅವರ ಮೇಲೆ ನಡೆಯುತ್ತಿರುವ ಮಾನಸಿಕ ದಾಳಿಗಳನ್ನು ಖಂಡಿಸಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ನವೆಂಬರ್ 26ರಂದು (ಶುಕ್ರವಾರ) ಬೃಹತ್‌ ಜಾಥಾವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ವತಿಯಿಂದ ಸಂವಿಧಾನ ಸಮರ್ಪಣಾ ದಿನ ಮತ್ತು ಕಾನೂನು ದಿನದ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಭಾರತದ ಸಂವಿಧಾನ ನೀಡಿರುವ ವಾಕ್‌ ಮತ್ತು ಅಭಿವೃಕ್ತಿ ಸ್ವಾತಂತ್ರ್ಯದ ಮೇಲಿನ ಬ್ರಾಹ್ಮಣ್ಯದ ಹಲ್ಲೆಯನ್ನು ಖಂಡಿಸಿ ಹಂಸಲೇಖರ ಸತ್ಯದ ನುಡಿಗಳನ್ನು ಬೆಂಬಲಿಸಿ ಸಂವಿಧಾನ ಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ನವೆಂಬರ್‌‌ 26ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ನಡೆಯಲಿದ್ದು, “ಹಂಸಲೇಖರವರ ಸತ್ಯದ ಮಾತುಗಳನ್ನು ಬೆಂಬಲಿಸುವವರು ರಾಜಧಾನಿಗೆ ಬನ್ನಿ” ಎಂದು ಸಂಘಟಕರು ಕರೆ ನೀಡಿದ್ದಾರೆ.


ಇದನ್ನೂ ಓದಿರಿ: ಹಂಸಲೇಖರ ಪರ ಕಾಂಗ್ರೆಸ್‌ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ ಪ್ರತಿಭಟನೆ


ಈ ಕುರಿತು ಮಾತನಾಡಿರುವ ಸಾಹಿತಿ ಎಲ್.ಎನ್‌.ಮುಕುಂದರಾಜು, “ಹಂಸಲೇಖರಂತಹ ಹಿರಿಯ ಕಲಾವಿದ ಕ್ಷಮೆ ಕೇಳಿದ ಮೇಲೂ ನಡೆಯುತ್ತಿರುವ ಮಾತಿನ ದಾಳಿ ಮತ್ತು ಅವರ ಮೇಲೆ ದಾಖಲಾಗುತ್ತಿರುವ ದೂರುಗಳನ್ನು ಗಮನಿಸಿದಾಗ ನಮ್ಮ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಬಹಳ ದೊಡ್ಡ ಅಪಾಯ ಬಂದಿದೆ” ಎಂದಿದ್ದಾರೆ.

ಮುಂದುವರಿದು, “ಬರೀ ವ್ಯಕ್ತಿ ಸ್ವಾತಂತ್ರ್ಯಕ್ಕಷ್ಟೇ ಅಲ್ಲದೆ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೂ, ಸಂವಿಧಾನಕ್ಕೂ ಅಪಾಯ ಬಂದಿದೆ. ಈ ದೇಶದಲ್ಲಿ ಇನ್ನು ಮುಂದೆ ದಲಿತರು, ಶೂದ್ರರು ಮತ್ತು ಮಹಿಳೆಯರ ಸ್ವಾತಂತ್ರ್ಯ ಇರುವುದಿಲ್ಲ ಅನಿಸುತ್ತಿದೆ. ನಾವು ಎಚ್ಚರಗೊಂಡು ಹೋರಾಟವನ್ನು ಮಾಡಬೇಕಾಗಿದೆ” ಎಂದು ತಿಳಿಸಿದ್ದಾರೆ.

“ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದಾರೆ. ಅಂದು ತಮ್ಮ ತಮ್ಮ ಬುತ್ತಿಗಳನ್ನು ತಮ್ಮ ಮನೆಗಳಿಂದ ತೆಗೆದುಕೊಂದು ಬಂದು ಊಟ ಮಾಡಲಿದ್ದಾರೆ. ಅದರಲ್ಲೂ ಬಾಡೂಟವಾದರೆ ಬಹಳ ಚೆನ್ನಾಗಿರುತ್ತದೆ. ಪ್ರತಿಭಟನೆಗೆ ತಾವೆಲ್ಲರೂ ಬರಬೇಕೆಂದು ವಿನಂತಿ ಮಾಡುತ್ತೇನೆ. ಬನ್ನಿ ದೇಶವನ್ನು, ಸಂವಿಧಾನವನ್ನು ಉಳಿಸೋಣ. ಅಂಬೇಡ್ಕರ್‌, ಬುದ್ಧ, ಬಸವ, ಗಾಂಧಿ, ಕುವೆಂಪು ಮುಂತಾದವರ ಆಶಯಗಳನ್ನು ನಮ್ಮ ಮುಂದಿನ ಪೀಳಿಗೆಗೂ ತಲುಪಿಸೋಣ. ಈ ದೇಶದ ಸ್ವಾತಂತ್ರ್ಯವನ್ನು, ಘನತೆಯನ್ನು, ಗೌರವವನ್ನು ಕಾಪಾಡೋಣ” ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

“ಮಳೆ ಬರುವ ಸೂಚನೆ ಇರುವುದರಿಂದ ಎಲ್ಲರೂ ಒಂದೊಂದು ಕೊಡೆ (ಛತ್ರಿ) ತರತಕ್ಕದ್ದು ಮತ್ತು ಅವರವರ ಊಟದ ಬುತ್ತಿಯನ್ನು ಅವರವರೇ ತರಕ್ಕದ್ದು. ಸಾಮೂಹಿಕ ಊಟದ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಪ್ರತಿರೋಧ ಮಾಡೋಣ ಎಂಬುದು ಹಿರಿಯರ ಸಲಹೆ. ನಾವೆಲ್ಲರೂ ಇವುಗಳನ್ನು ಪಾಲಿಸೋಣ. ನವೆಂಬರ್ 26ರ ರಾಜ್ಯಮಟ್ಟದ ರ್‍ಯಾಲಿಗೆ ಎಲ್ಲಾ ಸಂಘಟನೆಗಳು ಮತ್ತು ಎಲ್ಲಾ ಪ್ರಜ್ಞಾವಂತರು ಸ್ವಯಂಪ್ರೇರಿತರಾಗಿ ಸಹಕರಿಸಿ ಅವರವರ ಸಂಘದ ಹೆಸರಿನಲ್ಲಿ ಪೋಸ್ಟರ್ ಮಾಡಿಸಿ ಹಂಚಿ ಮತ್ತು ಸ್ವಯಂಪ್ರೇರಿತರಾಗಿ ಆಗಮಿಸಿ” ಎಂದು ಕೋರಿದ್ದಾರೆ.


ಇದನ್ನೂ ಓದಿರಿ: ನಿಮ್ಮ ಪ್ರೀತಿ ನನಗೆ ತಲುಪಿದೆ: ಕನ್ನಡಿಗರಿಗೆ ಹಂಸಲೇಖ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...