Homeಅಂತರಾಷ್ಟ್ರೀಯಗಾಜಾದಲ್ಲಿ ಮಾನವೀಯತೆಯು ನೈತಿಕ ದಿಕ್ಸೂಚಿ ಕಳೆದುಕೊಂಡಿದೆ: ಯುಎನ್ ಅಧಿಕಾರಿ

ಗಾಜಾದಲ್ಲಿ ಮಾನವೀಯತೆಯು ನೈತಿಕ ದಿಕ್ಸೂಚಿ ಕಳೆದುಕೊಂಡಿದೆ: ಯುಎನ್ ಅಧಿಕಾರಿ

- Advertisement -
- Advertisement -

‘ಯುದ್ಧದಿಂದ ಧ್ವಂಸಗೊಂಡ ಗಾಜಾದ ಮೇಲೆ ಅಂತರರಾಷ್ಟ್ರೀಯ ಸಮುದಾಯವು ತನ್ನ “ನೈತಿಕ ದಿಕ್ಸೂಚಿ” ಕಳೆದುಕೊಂಡಿದೆ’ ಎಂದು ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಮಂಗಳವಾರ ಹೇಳಿದ್ದಾರೆ.

“ನಾವು ಮಾನವೀಯತೆಯಾಗಿ, ಅಂತರಾಷ್ಟ್ರೀಯ ಸಮುದಾಯವಾಗಿ ಗಾಜಾದ ಮೇಲೆ ನಮ್ಮ ನೈತಿಕ ದಿಕ್ಸೂಚಿಯನ್ನು ಕಳೆದುಕೊಂಡಿದ್ದೇವೆ ಎಂಬುದು ಬಹಳ ಕಳವಳಕಾರಿಯಾಗಿದೆ” ಎಂದು ಮೊಹಮ್ಮದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

“ನಾವು ಆ ವೇಗದ ಬಗ್ಗೆ ಏನಾದರೂ ಮಾಡಬೇಕಾಗಿದೆ, ನಾವು ತುಂಬಾ ತಡ ಮಾಡಿದ್ದೇವೆ. ಸಾವಿರಾರು ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತಲೇ ಇದ್ದಾರೆ, ಅಂಗಚ್ಛೇದಿತರಾಗಿ ಬದುಕುತ್ತಿದ್ದಾರೆ. ನೂರಾರು ಮಂದಿ ಒತ್ತೆಯಾಳುಗಳು ತಮ್ಮ ಮನೆಗೆ ತೆರಳಲು ಕಾಯುತ್ತಿದ್ದಾರೆ” ಎಂದು ಹೇಳಿದರು.

ಅಧಿಕೃತ ಇಸ್ರೇಲಿ ಅಂಕಿಅಂಶಗಳ ಆಧಾರದ ಮೇಲೆ ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಹಮಾಸ್ ಕಾರ್ಯಕರ್ತರು ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ಧ ನಡೆಸಿದ ದಾಳಿಯಿಂದ ಗಾಜಾ ಯುದ್ಧವು 1,170 ಜನರ ಸಾವಿಗೆ ಕಾರಣವಾಯಿತು, ಸತ್ತವರಲ್ಲಿ ಹೆಚ್ಚಿನ ಮಂದಿ ಸಾಮಾನ್ಯ ನಾಗರಿಕರು.

ಜಮಾಸ್ ಕಾರ್ಯಕರ್ತರು 250ಕ್ಕೂ ಹೆಚ್ಚು ಇಸ್ರೇಲಿ ಮತ್ತು ವಿದೇಶಿಯರನ್ನು ಒತ್ತೆಯಾಳುಗಳನ್ನಾಗಿ ಮಾಡಿದ್ದು, ಅವರಲ್ಲಿ 129 ಮಂದಿ ಗಾಜಾದಲ್ಲಿ ಉಳಿದಿದ್ದಾರೆ. ಇದರಲ್ಲಿ 34 ಮಂದಿ ಸತ್ತಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ.

ಅಂದಿನಿಂದ ಆರು ತಿಂಗಳುಗಳಲ್ಲಿ, ಇಸ್ರೇಲ್‌ನ ಪ್ರತೀಕಾರದ ಬಾಂಬ್ ದಾಳಿ ಮತ್ತು ಆಕ್ರಮಣವು ಗಾಜಾದಲ್ಲಿ ಕನಿಷ್ಠ 33,175 ಜನರನ್ನು ಕೊಂದಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಮುತ್ತಿಗೆ ಹಾಕಿದ ಪ್ಯಾಲೇಸ್ಟಿನಿಯನ್ ಪ್ರದೇಶದಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೊಹಮ್ಮದ್ ಅವರು ತಾವು ಕರೆ ನೀಡುತ್ತಿರುವ ನಿರ್ದಿಷ್ಟ ಕ್ರಮಗಳ ಕುರಿತು ವಿವರಿಸಲಿಲ್ಲ. ಆದರೆ, ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಮಾನವೀಯ ಕದನ ವಿರಾಮ ಮತ್ತು ಹಮಾಸ್ ಹಿಡಿದಿರುವ ಒತ್ತೆಯಾಳುಗಳ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ; ‘ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡಿದ್ದವರು ಯಾರು..?’; ಪ್ರಧಾನಿ ಮೋದಿಯ ‘ಮುಸ್ಲಿಂ ಲೀಗ್’ ಟೀಕೆಗೆ ರಾಹುಲ್ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...